Friday, 13th December 2024

7 ದಿನಗಳಲ್ಲಿ ರಸ್ತೆ ಸರಿಪಡಿಸಲು ಮುಂದಾದ ಅಧಿಕಾರಿಗಳು

ಸಿಂಧನೂರು : ನಗರದ ವಾರ್ಡ್ ನಂಬರ್ 13ರಲ್ಲಿ ಬರುವ ಎಪಿಎಂಸಿ ಹಿಂಭಾಗದ ರಸ್ತೆ ಸಂಪೂರ್ಣ ಹಾಳಾಗಿದ್ದು ಸಾರ್ವಜನಿಕರ ಒತ್ತಾಯದ ಮೇರೆಗೆ ಏಳು ದಿನದ ಒಳಗೆ ರಸ್ತೆ ಸರಿಪಡಿಸುವುದು ಎಂದು ಅಧಿಕಾರಿಗಳು ಮುಂದಾಗಿದ್ದು ಶ್ಲಾಘನೀಯ ಕೆಲಸವಾಗಿದೆ.

ವಾರ್ಡ್ ನಂಬರ್ 13ರ ರಾಜೀವ್ ಗಾಂಧಿ ಮುಖ್ಯ ರಸ್ತೆಯಲ್ಲಿ ಸಾರ್ವಜನಿಕರಿಗೆ ದಿನನಿತ್ಯ ತಿರುಗಾಡಲು ಸಮಸ್ಯೆ ಆಗುತ್ತಿದ್ದು ಹಾಗೂ ಶಾಲಾ ಕಾಲೇಜು ವಿದ್ಯಾರ್ಥಿಗಳಿಗೂ ಸಮಸ್ಯೆ ಆಗುವುದರ ಹಿನ್ನೆಲೆಯಲ್ಲಿ ಶೀಘ್ರದಲ್ಲೇ ರಸ್ತೆಗೆ ಮರಂ ಹಾಕಿ ಯಾವುದೇ ಸಮಸ್ಯೆ ಆಗದಂತೆ ನೋಡಿಕೊಳ್ಳಲಾಗುವುದು ಎಂದು ಅಧಿಕಾರಿಗಳು ಸೋಮವಾರ ಭರವಸೆ ನೀಡಿದರು.

ನಗರಸಭೆ ಸದಸ್ಯರು ಹಾಗೂ ಅಧಿಕಾರಿಗಳು ಭೇಟಿ ಮುಖ್ಯರಸ್ತೆಯಿಂದ ಮಲ್ಲಯ್ಯ ದೇವಸ್ಥಾನದವರೆಗೂ ಅದ ಗಟ್ಟ ರಸ್ತೆಯನ್ನು ನಗರಸಭೆಯ ಅಧಿಕಾರಿ ಸಿಬ್ಬಂದಿ ಪವನ್ ಕುಮಾರ್ ಹಾಗೂ ವಾರ್ಡಿನ ಸದಸ್ಯ ನಾಗಮ್ಮ ಛತ್ರಪ್ಪ ಅವರು ಸೋಮವಾರ ವೀಕ್ಷಿಸಿ ಯಾವುದೇ ತರದಲ್ಲಿ ಸರ್ವಜನಿಕರಿಗೆ ಅನಾನುಕೂಲ ಆಗದ ರೀತಿಯಲ್ಲಿ ನೋಡಿಕೊಳ್ಳಲಾಗುವುದು ಎಂದು ಭರವಸೆ ನೀಡಿದರು.

ವಾರ್ಡಿನ ಜನರು ಒತ್ತಾಯ ತುಂಬಾ ಜನಸಂಖ್ಯೆ ಹೊಂದಿರುವ 13 ನೇಯ ವಾರ್ಡ್ ಆಗಿದೆ ಮಳೆ ಬಂದರೆ ರಸ್ತೆಗಳಲ್ಲಿ ತುಂಬಾ ಸಮಸ್ಯೆ ಅನುಭವಿಸುವ ಪರಿಸ್ಥಿತಿ ದಿನನಿತ್ಯ ಉದ್ಭವಿಸುತ್ತಿದೆ, ಕೆಲ ದಿನಗಳ ಹಿಂದೆ ಹೆರಿಗೆ ಕಾಣಿಸಿಕೊಂಡ ಮಹಿಳೆಯನ್ನು ಆಂಬುಲೆನ್ಸ್ ಮೂಲಕ ಸಾರ್ವಜನಿಕ ಆಸ್ಪತ್ರೆಗೆ ತೆಗೆದುಕೊಂಡು ಹೋಗುವ ಸಂದರ್ಭದಲ್ಲಿ ತುಂಬಾ ಅನಾಹುತಗಳು ಆಗಿದ್ದಾವೆ ಹಾಗಾಗಿ ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ರಸ್ತೆ ಸುಧಾರಣೆ ಪಡಿಸಬೇಕು ಎಂದು ಒತ್ತಾಯಿಸಿದರು.

ಅತಿ ಶೀಘ್ರದಲ್ಲಿ ಈ ರಸ್ತೆ ಸುಧಾರಣೆ ಪಡಿಸುವ ಕೆಲಸ ಮಾಡುತ್ತೇವೆ ಸ್ವಲ್ಪ ತಾಂತ್ರಿಕ ಕಾರಣಗಳಿಂದ ತಡವಾಗಿದೆ. ನಗರಸಭೆ ಪೌರಾಯುಕ್ತ ಆರ್.ವಿರೂಪಾಕ್ಷ ಮೂರ್ತಿ ಎಪಿಎಂಸಿ ಹಿಂಭಾಗದ ವಾರ್ಡ್ ಸೇರಿದಂತೆ ಇತರ ವಾರ್ಡಗಳಲ್ಲಿ ರಸ್ತೆಗಳ ಸಮಸ್ಯೆ ಇದ್ದಾವೆ. ರಸ್ತೆ ಸರಿಪಡಿಸಲು ಈಗಾಗಲೇ ಅಧಿಕಾರಿಗಳಿಗೆ ಸೂಚಿಸಲಾಗಿದೆ ಯಾವುದೇ ಸಮಸ್ಯೆ ಆಗದಂತೆ ನೋಡಿಕೊಳ್ಳುವ ಜವಾಬ್ದಾರಿ ನಮ್ಮ ಮೇಲೆ ಇದೆ.

***

ನಗರಸಭಾ ಅಧ್ಯಕ್ಷ ಮಲ್ಲಿಕಾರ್ಜುನ್ ಪಾಟೀಲ್ ಅನೇಕ ಬಾರಿ ಅಧಿಕಾರಿಗಳಿಗೆ ಈ ರಸ್ತೆಯ ಸಲುವಾಗಿ ಹೇಳಲಾಗಿದೆ, ಪ್ರತ್ಯೇಕವಾಗಿ ಹಣ ನೀಡಲು ಸೂಚಿಸ ಲಾಗಿದೆ. ಯಾವುದೇ ಪ್ರಯೋಜನ ಆಗಿಲ್ಲ, ಈಗ ಅಧಿಕಾರಿಗಳು ಬಂದು ನೋಡಿಕೊಂಡು ಹೋಗಿದ್ದಾರೆ ಏಳು ದಿನಗಳ ಒಳಗೆ ರಸ್ತೆ ಸುಧಾರಣೆ ಮಾಡಲಾಗುತ್ತದೆ. ನಾಗಮ್ಮ ಛತ್ರಪ್ಪ ನಗರಸಭೆ ಸದಸ್ಯ