Friday, 13th December 2024

Solar Eclipse 2024: ಅ. 2ರಂದು ಸೂರ್ಯಗ್ರಹಣ; ಈ 5 ರಾಶಿಗಳ ಮೇಲಿದೆ ಗಂಭೀರ ಪರಿಣಾಮ!

Solar Eclipse

ಪಿತೃ ಪಕ್ಷದ (pitru paksha) ಕೊನೆಯ ದಿನವಾದ ಮಹಾಲಯ ಅಮಾವಾಸ್ಯೆ (Mahalaya Amavasya) ಮತ್ತು ಸೂರ್ಯಗ್ರಹಣ (Solar Eclipse 2024) ಈ ಬಾರಿ ಜೊತೆಯಾಗಿ ಬರಲಿದೆ. ನವರಾತ್ರಿಯ (Navaratri) ಹಿಂದಿನ ದಿನವಾದ ಅಕ್ಟೋಬರ್ 2 ಬುಧವಾರದಂದು ಸೂರ್ಯಗ್ರಹಣ ಸಂಭವಿಸಲಿದೆ. ಇದು ವರ್ಷದ ಕೊನೆಯ ಮತ್ತು ಎರಡನೇ ಸೂರ್ಯಗ್ರಹಣವಾಗಿದೆ. ಯಾವಾಗಲೂ ಅಮವಾಸ್ಯೆ ತಿಥಿಯಂದೇ ಸಂಭವಿಸುವ ಸೂರ್ಯಗ್ರಹಣವನ್ನು ರಿಂಗ್ ಆಫ್ ಫೈರ್ ಅಥವಾ ಬೆಂಕಿಯ ಉಂಗುರ ಎಂದು ಸಾಮಾನ್ಯವಾಗಿ ಕರೆಯಲಾಗುತ್ತದೆ.

ಭಾರತದಲ್ಲಿ ಗೋಚರಿಸುವುದೇ?

ಭಾರತೀಯ ಕಾಲಮಾನದ ಪ್ರಕಾರ ಈ ಬಾರಿಯ ಸೂರ್ಯಗ್ರಹಣವು ಅಕ್ಟೋಬರ್ 2 ರಂದು ರಾತ್ರಿ 9.13ಕ್ಕೆ ಪ್ರಾರಂಭವಾಗಿ ಮುಂಜಾನೆ 3.17ಕ್ಕೆ ಕೊನೆಯಾಗಲಿದೆ. ಹೀಗಾಗಿ ಇದು ಭಾರತದಲ್ಲಿ ಗೋಚರಿಸುವುದಿಲ್ಲ.

ಬೆಂಕಿಯ ಉಂಗುರ ಎಂದರೇನು?

ಭೂಮಿ ಮತ್ತು ಚಂದ್ರ ಸೂರ್ಯನ ಸುತ್ತ ಸುತ್ತುತ್ತಿರುತ್ತವೆ. ಆದರೆ ಚಂದ್ರನು ಭೂಮಿಯ ಸುತ್ತ ಸುತ್ತುತ್ತಿರುತ್ತದೆ. ಹೀಗೆ ಚಂದ್ರ ಸುತ್ತುತ್ತಿರುವಾಗ ಸೂರ್ಯ ಮತ್ತು ಭೂಮಿಯ ನಡುವೆ ಬರುತ್ತಾನೆ. ಸೂರ್ಯನ ಬೆಳಕು ಭೂಮಿಗೆ ತಲುಪದಂತೆ ಸ್ವಲ್ಪ ಕಾಲ ತಡೆಯುತ್ತಾನೆ. ಇದರಿಂದ ಸೂರ್ಯಗ್ರಹಣ ಉಂಟಾಗುತ್ತದೆ. ಈ ವೇಳೆ ಚಂದ್ರನ ನೆರಳು ಭೂಮಿಯ ಮೇಲೆ ಬೀಳುತ್ತದೆ. ಚಂದ್ರನು ಸೂರ್ಯನಿಗೆ ಸಂಪೂರ್ಣ ಅಡ್ಡವಾಗಲು ಸಾಧ್ಯವಿಲ್ಲ. ಹೀಗಾಗಿ ವೃತ್ತಾಕಾರದಲ್ಲಿ ಸೂರ್ಯನ ಬೆಳಕು ಗೋಚರಿಸುತ್ತದೆ. ಈ ಕಾರಣದಿಂದ ಬೆಂಕಿಯ ಉಂಗುರ ಕಾಣಿಸುತ್ತದೆ. ಇದನ್ನೇ ಉಂಗುರ ಗ್ರಹಣ ಎನ್ನಲಾಗುತ್ತದೆ.

Solar Eclipse

ಯಾವ ಯಾವ ರಾಶಿಗಳ ಮೇಲೆ ಏನು ಪ್ರಭಾವ?

ಅಕ್ಟೋಬರ್ 2ರಂದು ಸಂಭವಿಸುವ ಸೂರ್ಯಗ್ರಹಣವು ಜನ ಜೀವನದ ಮೇಲೂ ಪರಿಣಾಮ ಬೀರುತ್ತದೆ. ಕೆಲವೊಂದು ರಾಶಿ ಚಕ್ರದ ಚಿಹ್ನೆಗಳು ಇದರಿಂದ ಪ್ರಭಾವಿತಗೊಳ್ಳಲಿದ್ದು, ಹಣಕಾಸಿನ ನಷ್ಟ, ಅಪಘಾತಗಳು ಉಂಟಾಗುವ ಸಾಧ್ಯತೆ ಇದೆ.

ಪಿತೃ ಅಮಾವಾಸ್ಯೆಯೊಂದಿಗೆ ಈ ಬಾರಿ ಸಂಭವಿಸುವ ಸೂರ್ಯಗ್ರಹಣವು ಸೂರ್ಯ ಮತ್ತು ಶನಿಯ ಅಶುಭ ಸಂಯೋಗದಿಂದ ಪ್ರಭಾವಿತವಾಗಿರುತ್ತದೆ. ಹೀಗಾಗಿ 5 ರಾಶಿ ಚಕ್ರದ ಮೇಲೆ ಮುಂದಿನ 15 ದಿನಗಳ ಕಾಲ ಭಾರಿ ಪ್ರಭಾವ ಬೀರುವ ಸಾಧ್ಯತೆ ಇದೆ. ಹೀಗಾಗಿ ಈ ಐದು ರಾಶಿಯವರು ಸಂಭಾವ್ಯ ಆರ್ಥಿಕ ನಷ್ಟ, ಅಪಘಾತ, ವಿವಾದ ಮತ್ತು ಕುಟುಂಬ ಕಲಹದ ಬಗ್ಗೆ ಜಾಗರೂಕರಾಗಿರಬೇಕಾಗುತ್ತದೆ.

ಪಿತೃ ಪಕ್ಷವು ಅಕ್ಟೋಬರ್ 2 ಬುಧವಾರ ಸರ್ವ ಪಿತೃ ಅಮವಾಸ್ಯೆ ಮತ್ತು ಸೂರ್ಯಗ್ರಹಣದೊಂದಿಗೆ ಕೊನೆಯಾಗಲಿದೆ. ಪಿತೃ ಅಮವಾಸ್ಯೆಯಂದು ಸೂರ್ಯಗ್ರಹಣ ಸಂಭವಿಸುತ್ತಿರುವುದರಿಂದ ಈ ದಿನ ಕೆಲಸ ಕಾರ್ಯಗಳಿಗೆ ಅಶುಭವೆಂದು ಪರಿಗಣಿಸಲಾಗಿದೆ.

ಈ ಬಾರಿಯ ಸೂರ್ಯಗ್ರಹಣದ ಸಮಯದಲ್ಲಿ ಶನಿ ಮತ್ತು ಸೂರ್ಯನು ಪರಸ್ಪರ ಎಂಟನೇ ಸ್ಥಾನದಲ್ಲಿರುತ್ತಾರೆ. ಇದು ಪ್ರತಿಕೂಲ ಪರಿಸ್ಥಿತಿಯನ್ನು ಉಂಟು ಮಾಡುತ್ತದೆ. ಹೀಗಾಗಿ ಎಲ್ಲಾ ರಾಶಿ ಚಕ್ರ ಚಿಹ್ನೆಗಳ ಮೇಲೂ ಇದರ ಪರಿಣಾಮ ಬೀರುವ ಸಾಧ್ಯತೆ ಇದೆ. ಆದರೂ ಐದು ರಾಶಿಯವರು ಮುಂದಿನ 15 ದಿನಗಳವರೆಗೆ ಬಹಳ ಜಾಗರೂಕರಾಗಿರಬೇಕು ಎನ್ನುತ್ತಾರೆ ಜ್ಯೋತಿಷ್ಯರು.

Solar Eclipse

ಮೇಷ

ಮೇಷ ರಾಶಿಯವರು ಮುಂದಿನ 15 ದಿನಗಳ ಕಾಲ ಗ್ರಹಣದ ಪ್ರಭಾವಕ್ಕೆ ಒಳಗಾಗುತ್ತಾರೆ. ಇವರಿಗೆ ಹಣಕಾಸಿನ ನಷ್ಟ ಉಂಟಾಗಬಹುದು. ಆದ್ದರಿಂದ ಈ ರಾಶಿಯವರು ಹಣದ ವ್ಯವಹಾರಗಳ ಬಗ್ಗೆ ಜಾಗರೂಕರಾಗಿರಬೇಕು. ಅನಾರೋಗ್ಯ ಅಥವಾ ಅಪಘಾತಗಳಿಗೆ ಗುರಿಯಾಗುವ ಸಾಧ್ಯತೆಯೂ ಇದೆ.

Solar Eclipse

ಮಿಥುನ

ಶನಿ ಮತ್ತು ಸೂರ್ಯನ ಸಂಯೋಗವು ಮಿಥುನ ರಾಶಿಯವರ ಮೇಲೂ ಪ್ರಭಾವ ಬೀರಲಿದೆ. ಇದರಿಂದ ಇವರು ಕೆಲಸದ ಸ್ಥಳದಲ್ಲಿ ವಿವಾದಗಳನ್ನು ಎದುರಿಸಬೇಕಾಗಬಹುದು. ಆದ್ದರಿಂದ ಸಾಕಷ್ಟು ಎಚ್ಚರಿಕೆಯಿಂದ ಮತ್ತು ಆದಷ್ಟು ಕಡಿಮೆ ಮಾತನಾಡಲು ಇವರಿಗೆ ಸಲಹೆ ಜ್ಯೋತಿಷ್ಯರು ನೀಡುತ್ತಾರೆ.

Solar Eclipse

ಕರ್ಕಾಟಕ

ಕರ್ಕಾಟಕ ರಾಶಿಯವರು ಕೂಡ ಗ್ರಹಣದ ದಿನದಿಂದ 15 ದಿನಗಳವರೆಗೆ ಜಾಗರೂಕರಾಗಿರಬೇಕು. ಈ ಸಮಯದಲ್ಲಿ ಸಾಲ ನೀಡುವುದು ಅಥವಾ ಸಾಲ ಮಾಡುವುದನ್ನು ತಪ್ಪಿಸುವುದು ಉತ್ತಮ. ಯಾಕೆಂದರೆ ಇದು ಆರ್ಥಿಕ ನಷ್ಟಕ್ಕೆ ಕಾರಣವಾಗಬಹುದು.

Solar Eclipse

ಕನ್ಯಾ

ಸೂರ್ಯಗ್ರಹಣದ ಅನಂತರದ 15 ದಿನಗಳು ಕನ್ಯಾ ರಾಶಿಯವರಿಗೆ ಅನುಕೂಲಕರವಾಗಿರುವುದಿಲ್ಲ. ಇವರು ಆರ್ಥಿಕ ಸವಾಲುಗಳನ್ನು ಎದುರಿಸಬೇಕಾಗಬಹುದು. ಉದ್ಯಮಿಗಳು ನಷ್ಟಕ್ಕೆ ಕಾರಣವಾಗುವ ಅಪಾಯಕಾರಿ ನಿರ್ಧಾರಗಳನ್ನು ತೆಗೆದುಕೊಳ್ಳುವುದನ್ನು ತಪ್ಪಿಸಬೇಕು.

Vastu Tips: ದೀಪ ಬೆಳಗಿಸಿ ಮನೆಯೊಳಗೆ ಸಂತೋಷವನ್ನು ಸ್ವಾಗತಿಸಿ

Solar Eclipse

ವೃಶ್ಚಿಕ

ಇನ್ನು ವೃಶ್ಚಿಕ ರಾಶಿಯವರು ಈ 15 ದಿನಗಳಲ್ಲಿ ತಮ್ಮ ಮಾತಿನ ಮೇಲೆ ನಿಯಂತ್ರಣ ಇರಿಸಬೇಕು, ಮನೆಯಲ್ಲಿ ಅಶಾಂತಿ ಉಂಟಾಗಬಹುದು. ವಾಹನ ಚಾಲನೆ ಮಾಡುವಾಗ ಜಾಗರೂಕರಾಗಿರಿ ಮತ್ತು ಮದ್ಯ ಮತ್ತು ಹೊರಗಿನ ಆಹಾರವನ್ನು ಸೇವಿಸಬೇಡಿ.