-ಶೀಲಾ ಸಿ. ಶೆಟ್ಟಿ, ಬೆಂಗಳೂರು
ನಟ ಕಾರ್ತಿಕ್ ಜಯರಾಮ್ (Karthik Jayaram) ಎಥ್ನಿಕ್ ಲುಕ್ ನೀಡುವ ಶ್ವೇತವರ್ಣದ ಡಿಸೈನರ್ ಮಿರರ್ ಕುರ್ತಾದಲ್ಲಿ (Star Fashion) ಸಖತ್ ಹ್ಯಾಂಡ್‌ಸಮ್ ಆಗಿ ಕಾಣಿಸಿಕೊಂಡಿದ್ದಾರೆ. ಹೌದು, ಸಾಮಾನ್ಯವಾಗಿ ಕುರ್ತಾ ಎಂದಾಕ್ಷಣಾ ಕಲರ್‌ಫುಲ್ ಆಗಿರುವುದನ್ನೇ ಆಯ್ಕೆ ಮಾಡುವುದು ಹೆಚ್ಚು. ಆದರೆ, ನಟ ಕಾರ್ತಿಕ್ ಮಾತ್ರ, ನವೋಲ್ಲಾಸ ನೀಡುವಂತಹ ಶ್ವೇತ ವರ್ಣದ ಮಿರರ್ ಕುರ್ತಾ ಆಯ್ಕೆ ಮಾಡಿ, ಧರಿಸಿರುವುದು ಮೆನ್ಸ್ ಎಥ್ನಿಕ್ ಫ್ಯಾಷನ್ ಲೋಕದಲ್ಲಿ ಟ್ರೆಂಡ್ ಸೆಟ್ ಮಾಡಿದೆ ಎನ್ನುತ್ತಾರೆ ಫ್ಯಾಷನ್ ವಿಮರ್ಶಕರು.
ಫ್ಯಾಷೆನಬಲ್ ನಟ ಕಾರ್ತಿಕ್ ಜಯರಾಮ್ (ಜೆಕೆ)
ಅಶ್ವಿನಿ ನಕ್ಷತ್ರ ಸೀರಿಯಲ್ ಮೂಲಕ ಜೆಕೆ ಎಂದೇ ಖ್ಯಾತಿ ಗಳಿಸಿರುವ ನಟ ಕಾರ್ತಿಕ್ ಜಯರಾಮ್, ಇದುವರೆಗೂ ಸಾಕಷ್ಟು ಸಿನಿಮಾಗಳಲ್ಲಿ ನಾಯಕನಟನಾಗಿಯೂ ಕಾಣಿಸಿಕೊಂಡಿದ್ದಾರೆ. ಹಿಂದಿ ಪೌರಾಣಿಕ ಧಾರವಾಹಿಯಲ್ಲಿ ರಾವಣನಾಗಿ ನಟಿಸುವುದರ ಮೂಲಕ ರಾಷ್ಟ್ರದೆಲ್ಲೆಡೆ ಹೆಸರು ಮಾಡಿದ್ದಾರೆ. ಇವೆಲ್ಲದರ ಮಧ್ಯೆ ಆಗಾಗ್ಗೆ ಫ್ಯಾಷನ್ ವೀಕ್‌ಗಳಲ್ಲಿ ಸೆಲೆಬ್ರೆಟಿ ಶೋ ಸ್ಟಾಪರ್ ಆಗಿಯೂ ಕಾಣಿಸಿಕೊಳ್ಳುತ್ತಿರುತ್ತಾರೆ.
ಡಿಸೈನರ್ ಸಮಂತಾ ಡಿಸೈನ್
ಅಂದಹಾಗೆ, ಸದಾ ಯೂನಿಕ್ ವಿನ್ಯಾಸದಲ್ಲೆ ಕಾಣಿಸಿಕೊಳ್ಳುವ ಕಾರ್ತಿಕ್ ಅವರ ಬಹುತೇಕ ಪ್ರತಿ ಡಿಸೈನರ್‌ವೇರನ್ನು ಸೆಲೆಬ್ರೆಟಿ ಡಿಸೈನರ್ ಸಮಂತಾ ಡಿಸೈನ್ ಮಾಡುತ್ತಾರೆ.
ಕಾರ್ತಿಕ್ ಜಯರಾಮ್ ಫ್ಯಾಷನ್ ಟಾಕ್
ತಮ್ಮ ಈ ಫ್ಯಾಷನ್ ಚಾಯ್ಸ್ ಕುರಿತಂತೆ ವಿಶ್ವವಾಣಿ ನ್ಯೂಸ್‌ನೊಂದಿಗೆ ಮಾತನಾಡಿದ ನಟ ಕಾರ್ತಿಕ್ ಜಯರಾಮ್, ನನ್ನದು ಸದಾ ಯೂನಿಕ್ ಫ್ಯಾಷನ್ ಸ್ಟೇಟ್‌ಮೆಂಟ್. ಅಲ್ಲದೇ, ಕಂಪ್ಲೀಟ್ ವಿಭಿನ್ನವಾಗಿರುವ ಫ್ಯಾಷನ್‌ವೇರ್‌ಗಳು ನನ್ನ ಚಾಯ್ಸ್‌ನಲ್ಲಿರುತ್ತವೆ ಎಂದು ಹೇಳಿದ್ದಾರೆ. ಇನ್ನು, ತಾವು ಧರಿಸಿದ ಎಥ್ನಿಕ್ ಗ್ರ್ಯಾಂಡ್ ಲುಕ್ ನೀಡುವ ಶ್ವೇತ ವರ್ಣದ ಮಿರರ್ ಡಿಸೈನ್‌ನ ಕುರ್ತಾ, ಫ್ಯಾಷನ್ ಪ್ರಿಯ ಪುರುಷರಿಗೆ ಪರ್ಫೆಕ್ಟ್ ಎಥ್ನಿಕ್ ಲುಕ್‌ಗೆ ಸಾಥ್ ನೀಡುತ್ತದೆ ಎಂದು ತಿಳಿಸಿದ್ದಾರೆ.
ಈ ಸುದ್ದಿಯನ್ನೂ ಓದಿ | Printed Kurta Fashion 2024: ಸೀಸನ್‌ನಲ್ಲಿ ಟ್ರೆಂಡಿಯಾಗಿರುವ 3 ಶೈಲಿಯ ಪ್ರಿಂಟೆಡ್ ಕುರ್ತಾಗಳಿವು
ಮೆನ್ಸ್ ಮಿರರ್ ಕುರ್ತಾದಲ್ಲಿ ಹ್ಯಾಂಡ್‌ಸಮ್ ಆಗಿ ಕಾಣಿಸಲು ನಟ ಕಾರ್ತಿಕ್ ಜಯರಾಮ್ ನೀಡಿರುವ 5 ಸಿಂಪಲ್ ಟಿಪ್ಸ್
ಯುವಕರು ಸ್ಲಿಮ್ಮಾಗಿರಲಿ, ಪ್ಲಂಪಿಯಾಗಿರಲಿ ಎಲ್ಲರಿಗೂ ಈ ಮಿರರ್ ಕುರ್ತಾಗಳು ಸಖತ್ತಾಗಿ ಕಾಣಿಸುತ್ತವೆ. ಯಾರೂ ಬೇಕಾದರೂ ಧರಿಸಬಹುದು.
ಯಾವ ಬಗೆಯ ಹೇರ್‌ಸ್ಟೈಲ್ ಆದರೂ ಸರಿಯೇ ಹೊಂದುತ್ತದೆ.
ಈ ಔಟ್‌ಫಿಟ್‌ಗೆ ಆಕ್ಸೆಸರೀಸ್ ಧರಿಸುವ ಅಗತ್ಯವೇ ಇಲ್ಲ!
ಈ ಶೈಲಿಯ ಕುರ್ತಾಗಳಿಗೆ ಪಟಿಯಾಲ ಪ್ಯಾಂಟ್ ಧರಿಸಲೇಬೇಕು. ಯಾವುದೇ ಕಾರಣಕ್ಕೂ ಜೀನ್ಸ್ ಪ್ಯಾಂಟ್ ಅಥವಾ ಇನ್ನಿತರೇ ಪ್ಯಾಂಟ್ ಮಿಕ್ಸ್ ಮ್ಯಾಚ್ ಮಾಡಿ ಧರಿಸಕೂಡದು.
ಪಾದಗಳಿಗೆ ಸಿಂಪಲ್ ಆಗಿ ಕಾಣಿಸುವ ಕೊಲ್ಹಾಪುರಿ ಚಪ್ಪಲಿ ಧರಿಸಿದರೇ ಸಾಕು, ಇಡೀ ಲುಕ್‌ಗೆ ಒಂದು ಕಳೆ ಸಿಗುತ್ತದೆ.
(ಲೇಖಕಿ : ಫ್ಯಾಷನ್ ಪತ್ರಕರ್ತೆ)