-ಶೀಲಾ ಸಿ. ಶೆಟ್ಟಿ, ಬೆಂಗಳೂರು
ಬೋ ಡ್ರೆಸ್ನಲ್ಲಿ ಸ್ಯಾಂಡಲ್ವುಡ್ ನಟಿ ನಭಾ ನಟೇಶ್ (Star Fashion) ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ. ಹೌದು, ಸಾಲಿಡ್ ಬ್ಲ್ಯಾಕ್ & ಹಾಫ್ ವೈಟ್ ಶೇಡ್ನ ಬಿಗ್ ಬೋ ಡಿಸೈನ್ನ ಬಾಡಿಕಾನ್ ವಿನ್ಯಾಸದ ಮಿನಿ ಟ್ಯೂಬ್ ಡ್ರೆಸ್ನಲ್ಲಿ, ಬಹುಭಾಷಾ ತಾರೆ ನಭಾ ನಟೇಶ್, ಇವೆಂಟ್ವೊಂದರಲ್ಲಿ ಸಖತ್ ಗ್ಲಾಮರಸ್ ಆಗಿ ಕಾಣಿಸಿಕೊಂಡಿದ್ದು, ಫ್ಯಾಷನ್ ಪ್ರಿಯರ ಕಣ್ಣುಕುಕ್ಕಿದೆ.
ಬೋ ಡ್ರೆಸ್ ವೃತ್ತಾಂತ
ಕತ್ತಿಗೆ ಹಾಗೂ ಕೂದಲ ವಿನ್ಯಾಸಕ್ಕೆ ಬಳಸುವ ಬೋ ವಿನ್ಯಾಸ ಇದೀಗ ಔಟ್ಫಿಟ್ಗಳ ಮೇಲೂ ನಾನಾ ಬಗೆಯಲ್ಲಿ ಮೂಡುತ್ತಿದೆ ಎಂದರೇ ಅಚ್ಚರಿಯಾಗಬಹುದು. ಅಂದಹಾಗೆ, ಈ ವಿನ್ಯಾಸ ನಮ್ಮ ರಾಷ್ಟ್ರದಲ್ಲ! ಮೂಲತಃ ವೆಸ್ಟರ್ನ್ ಔಟ್ಫಿಟ್ಗಳಲ್ಲಿ ಕಂಡುಬರುವ ಈ ವಿನ್ಯಾಸದ ಡಿಸೈನರ್ವೇರ್ಗಳು, ಇದೀಗ ನಮ್ಮ ರಾಷ್ಟ್ರದಲ್ಲೂ ಕಾಲಿಟ್ಟಿದ್ದು, ಸೆಲೆಬ್ರೆಟಿ ಡಿಸೈನರ್ಗಳ ಮೂಲಕ ನಾನಾ ರೂಪ ಪಡೆದು, ಸ್ಟಾರ್ಗಳನ್ನು ಸವಾರಿ ಮಾಡತೊಡಗಿವೆ ಎನ್ನುತ್ತಾರೆ ಸೆಲೆಬ್ರೆಟಿ ಡಿಸೈನರ್ಸ್.
ಏನಿದು ಬೋ ಡ್ರೆಸ್?
ನಾನಾ ವಿನ್ಯಾಸದಲ್ಲಿ ರಚಿಸಲಾಗಿರುವ ಫ್ಯಾಬ್ರಿಕ್ನ ಬೋ ಹೊಂದಿರುವ ಡ್ರೆಸ್ಗಳಿವು. ನೆಕ್ಲೈನ್ ಜತೆಯಾಗಬಹುದು, ಸ್ಲೀವ್ನೊಂದಿಗೆ ಬೆರೆತಿರಬಹುದು ಅಥವಾ ಬ್ಯಾಕ್ಸೈಡ್ ಟೈ ಮಾಡುವಂತಹ ಡಿಸೈನ್ ಹೊಂದಿರಬಹುದು. ಆಯಾ ಕ್ಯಾಶುವಲ್ ಹಾಗೂ ಫಾರ್ಮಲ್ ವಿನ್ಯಾಸದ ಉಡುಪಿಗೆ ತಕ್ಕಂತೆ ಇವನ್ನು ಡಿಸೈನ್ ಮಾಡಲಾಗುತ್ತದೆ ಎಂದು ವಿವರಿಸುತ್ತಾರೆ ಫ್ಯಾಷನ್ ವಿಮರ್ಶಕರು. ಅವರ ಪ್ರಕಾರ, ಬಹುತೇಕ ಬಿಗ್ ಬೋ ಸ್ಟೇಟ್ಮೆಂಟ್ ಬೋ ಡ್ರೆಸ್ಗಳನ್ನು ಸೆಲೆಬ್ರೆಟಿಗಳೇ ಹೆಚ್ಚು ಧರಿಸುತ್ತಾರಂತೆ.
ನಭಾಗೆ ಗ್ಲಾಮರಸ್ ಲುಕ್ ನೀಡಿದ ಬೋ ಡ್ರೆಸ್
ವಜ್ರಕಾಯ, ಲೀ ಸಿನಿಮಾದ ಮೂಲಕ ಸ್ಯಾಂಡಲ್ವುಡ್ ಪ್ರವೇಶಿಸಿದ ನಭಾ ನಟೇಶ್, ಇದೀಗ ತೆಲುಗು ಸಿನಿಮಾ ಇಂಡಸ್ಟ್ರೀಯಲ್ಲಿ ಸಖತ್ ಬ್ಯುಸಿಯಾಗಿದ್ದಾರೆ. ಈ ಮಧ್ಯೆ ಸಾಕಷ್ಟು ಮಾಡೆಲಿಂಗ್ ಕೂಡ ಮಾಡುವ ಇವರು ಮೂಲತಃ ಶೃಂಗೇರಿಯವರು. ಸದಾ ಒಂದಲ್ಲ, ಒಂದು ಫ್ಯಾಷೆನಬಲ್ ಪ್ರಯೋಗಾತ್ಮಕ ಔಟ್ಫಿಟ್ಗಳಲ್ಲಿ ಕಾಣಿಸಿಕೊಂಡು ಸುದ್ದಿಯಾಗುತ್ತಲೇ ಇರುತ್ತಾರೆ.
ಈ ಸುದ್ದಿಯನ್ನೂ ಓದಿ | Winter Wedding Jacket Lehenga Fashion: ವಿಂಟರ್ ವೆಡ್ಡಿಂಗ್ ಸೀಸನ್ಗೆ ಎಂಟ್ರಿ ಕೊಟ್ಟ ಡಿಸೈನರ್ ಜಾಕೆಟ್ ಲೆಹೆಂಗಾ!
ಫ್ಯಾಷನ್ ವಿಮರ್ಶಕರ ಅಭಿಪ್ರಾಯ
ಬೋ ಡ್ರೆಸ್ಗಳನ್ನು ಯಾವ ವಿಧದಲ್ಲಾದರೂ ಡಿಸೈನ್ ಮಾಡಿಸಬಹುದು. ಕತ್ತಿಗೆ ಚಿಕ್ಕ ಬೋ ಧರಿಸಿದಾಗ ಡಿಸೆಂಟ್ ಲುಕ್ ನೀಡುವ ಇವು ನಟಿಯರು ಧರಿಸಿದಾಗ ಹಾಟ್ ಲುಕ್ ಕಲ್ಪಿಸುತ್ತವೆ. ಇದೇ ರೀತಿ ನಭಾ ಕೂಡ ಈ ಶೈಲಿಯ ಡ್ರೆಸ್ನಲ್ಲಿ ಗ್ಲಾಮರಸ್ ಆಗಿಯೇ ಕಾಣಿಸಿಕೊಂಡಿದ್ದಾರೆ ಎನ್ನುತ್ತಾರೆ ಫ್ಯಾಷನ್ ವಿಮರ್ಶಕರಾದ ಜಾನ್.
(ಲೇಖಕಿ: ಫ್ಯಾಷನ್ ಪತ್ರಕರ್ತೆ)