Friday, 29th November 2024

Star Saree: ಹಳದಿ ಸೀರೆಯಲ್ಲಿ ರಶ್ಮಿಕಾ ಮಂದಣ್ಣರಂತೆ ಕಾಣಲು ಹೀಗೆ ಮಾಡಿ!

Star Saree

-ಶೀಲಾ ಸಿ. ಶೆಟ್ಟಿ, ಬೆಂಗಳೂರು

ಕಣ್ಣಿಗೆ ರಾಚುವ ಹಾಗೂ ಎದ್ದು ಕಾಣುವ ಹಳದಿ ಸೀರೆಯಲ್ಲೂ ಬ್ಯೂಟಿಫುಲ್ ಆಗಿ ಕಾಣಿಸಬಹುದು. ಹೌದು, ಇದಕ್ಕೆ ಪೂರಕ ಎಂಬಂತೆ, ಸಿನಿಮಾ ಇವೆಂಟ್‌ವೊಂದರಲ್ಲಿ ರಶ್ಮಿಕಾ ಮಂದಣ್ಣ (Rashmika Mandanna) ಉಟ್ಟಿದ್ದ ಸೀರೆ ಇದೀಗ (Star Saree) ಟ್ರೆಂಡಿಯಾಗಿದೆ. ಮಾನಿನಿಯರನ್ನು ಸೆಳೆದಿದೆ. ನೋಡಲು ಮನಮೋಹಕವಾಗಿ ಕಾಣಿಸುತ್ತಿರುವ ಈ ಕಲರ್‌ನ ಸೀರೆಯಲ್ಲೂ ಯುವತಿಯರು ಹಾಗೂ ಮಹಿಳೆಯರು ಅಂದವಾಗಿ ಕಾಣಿಸಬಹುದು ಅದು ಹೇಗೆ? ಅಂತಿರಾ? ಈ ಕುರಿತಂತೆ ಸೀರೆ ಸ್ಟೈಲಿಸ್ಟ್ ದಿಶಾ ಒಂದಿಷ್ಟು ಟಿಪ್ಸ್ ನೀಡಿದ್ದಾರೆ. ಫಾಲೋ ಮಾಡಿ ನೋಡಿ!

ಚಿತ್ರಗಳು: ರಶ್ಮಿಕಾ ಮಂದಣ್ಣ, ನಟಿ

ಯೆಲ್ಲೋ ಕಲರ್ ಆಯ್ಕೆ ಹೀಗಿರಬೇಕು

ಯೆಲ್ಲೋ ಎಂದಾಕ್ಷಣ ಒಂದೇ ಶೇಡ್‌ನಲ್ಲಿರುವುದಿಲ್ಲ. ಇದರಲ್ಲೂ ನಾನಾ ಲೈಟ್ ಹಾಗೂ ಡಾರ್ಕ್ ಬಣ್ಣದವು ಇರುತ್ತವೆ. ಹಾಗಾಗಿ ನೀವು ಆಯ್ಕೆ ಮಾಡುವ ಯೆಲ್ಲೋ ಶೇಡ್ ನೋಡಲು ಆಕರ್ಷಕವಾಗಿರಬೇಕು.

ಸ್ಕಿನ್ ಟೋನ್‌ಗೆ ತಕ್ಕಂತೆ ಹೊಂದುವ ಯೆಲ್ಲೋ ಕಲರ್ ಸೀರೆ ಸೆಲೆಕ್ಷನ್

ನಿಮ್ಮ ಮುಖದ ಬಣ್ಣ ಅಂದರೇ, ಬೆಳ್ಳಗಿರುವವರು, ಗೋಧಿ ಬಣ್ಣದವರು ಅಥವಾ ಡಸ್ಕಿ ಸ್ಕಿನ್ ಹೀಗೆ ಆಯಾ ಸ್ಕಿನ್ ಟೋನ್ ಹೊಂದಿರುವವರು ತಮ್ಮ ಮುಖದ ಪಕ್ಕ ಈ ಕಲರ್‌ನ ಸೀರೆ ಇರಿಸಿ, ಇಲ್ಲವೇ ಸೆರಗನ್ನು ಹಾಕಿ, ಟ್ರಯಲ್ ಮಾಡಿ, ಬಣ್ಣ ಆರಿಸಬೇಕು. ಮುಖಕ್ಕೆ ತೀರಾ ಎದ್ದು ಕಾಣುವಂತಹ ಕಲರ್‌ನದ್ದಾದಲ್ಲಿ ಆದಷ್ಟೂ ತಿಳಿ ವರ್ಣದ್ದನ್ನು ಧರಿಸಿ. ಲೈಟಾಗಿದ್ದಲ್ಲಿ ಡಾರ್ಕ್ ಶೇಡ್ ಸೀರೆ ಸೆಲೆಕ್ಟ್ ಮಾಡಿ.

ಸಾಫ್ಟ್ ಯೆಲ್ಲೋ ಫ್ಯಾಬ್ರಿಕ್ ಸೀರೆಯ ಆಯ್ಕೆ

ಸಾಫ್ಟ್ ಫ್ಯಾಬ್ರಿಕ್‌ನ ಯೆಲ್ಲೋ ವರ್ಣದ ಸೀರೆಗಳು ನೋಡಲು ಅಂದವಾಗಿ ಕಾಣಿಸುತ್ತವೆ. ಅಲ್ಲದೇ, ನೆರಿಗೆ ಹಾಗೂ ಸೆರಗು ನೀಟಾಗಿ ಕೂರುತ್ತವೆ. ಇದು ಸೀರೆಯ ಡ್ರೇಪಿಂಗ್ ಅಂದವಾಗಿಸುತ್ತದೆ.

ಪರ್ಸನಾಲಿಟಿಗೆ ತಕ್ಕಂತೆ ಯೆಲ್ಲೋ ಸೀರೆಯ ವಿನ್ಯಾಸದ ಆಯ್ಕೆ

ಸಾದಾ, ಮಾನೋಕ್ರೋಮ್, ಸಾಲಿಡ್ ಶೇಡ್ಸ್ ಪ್ರಿಂಟ್ ಶೇಡ್ಸ್ ಹೀಗೆ ನಾನಾ ವಿನ್ಯಾಸದಲ್ಲಿ ಲಭ್ಯವಿರುವ ಯೆಲ್ಲೋ ಕಲರ್ ಸೀರೆಗಳಲ್ಲಿ ಯಾವುದು ಟ್ರೆಂಡಿ ಎಂಬುದನ್ನು ಮೊದಲು ಗಮನಿಸಿ. ಇದೀಗ ರಶ್ಮಿಕಾ ಮಂದಣ್ಣ ಧರಿಸಿರುವ ಸಾದಾ ಹಳದಿ ಸೀರೆ ಟ್ರೆಂಡ್‌ನಲ್ಲಿದೆ. ಈ ಶೈಲಿಯದನ್ನು ಆಯ್ಕೆ ಮಾಡಿ, ಉಡಿ.

ಸಿಂಪಲ್ ಬ್ಲೌಸ್ ಮ್ಯಾಚಿಂಗ್

ಥೇಟ್ ರಶ್ಮಿಕಾ ಮಂದಣ್ಣ ಉಟ್ಟಿರುವಂತೆಯೇ ನೀವು ಕಾಣಿಸಬೇಕಿದ್ದಲ್ಲಿ, ಬ್ಲೌಸ್‌ನ ಆಯ್ಕೆ ಕೂಡ ಸೇಮ್ ಆಗಿರಬೇಕು. ಸಾದಾ ಸಿಲ್ಕ್ ಮೆಟಿರಿಯಲ್ ಅಥವಾ ಸ್ಯಾಟಿನ್ ಲುಕ್ ನೀಡುವ ಈ ಬ್ಲೌಸ್ ತೀರಾ ಸಿಂಪಲ್ಲಾಗಿದೆ. ಗ್ಲಾಮರಸ್ ಲುಕ್‌ಗಾಗಿ ಸ್ಲವ್ಲೆಸ್ ಡಿಸೈನ್ ಹೊಂದಿದೆ. ನೀವು ಬೇಕಿದ್ದಲ್ಲಿ ನಿಮ್ಮ ಆಯ್ಕೆಯ ವಿನ್ಯಾಸ ಮಾಡಿಸಿ. ಹೆವ್ವಿ ವರ್ಕ್ ವಿನ್ಯಾಸ ಬೇಡ.

ಈ ಸುದ್ದಿಯನ್ನೂ ಓದಿ | Winter Wedding Jacket Lehenga Fashion: ವಿಂಟರ್ ವೆಡ್ಡಿಂಗ್ ಸೀಸನ್‌ಗೆ ಎಂಟ್ರಿ ಕೊಟ್ಟ ಡಿಸೈನರ್ ಜಾಕೆಟ್ ಲೆಹೆಂಗಾ!

ಹಳದಿ ಸೀರೆಯ ಮೇಕೋವರ್ ಹೀಗಿರಲಿ

ಹಳದಿ ಸೀರೆಯ ಮೇಕೋವರ್ ಸಿಂಪಲ್ಲಾಗಿರಲಿ. ಕಾಂಟ್ರಸ್ಟ್ ಕಲರ್‌ನ ಸ್ಟೇಟ್ಮೆಂಟ್ ಜ್ಯುವೆಲರಿ ಸೆಟ್, ಹಣೆಗೊಂದು ಪುಟ್ಟ ಬಿಂದಿ, ಸಿಂಪಲ್ ಹೇರ್‌ಸ್ಟೈಲ್ ನಿಮ್ಮನ್ನು ಕಂಟೆಂಪರರಿ ಲುಕ್‌ಗೆ ಮ್ಯಾಚ್ ಮಾಡುವುದು. ನೋಡಲು ಅತ್ಯಾಕರ್ಷಕವಾಗಿ ಕಾಣಿಸಲು ಸಹಾಯ ಮಾಡುವುದು ಎನ್ನುತ್ತಾರೆ ಸೀರೆ ಎಕ್ಸ್‌ಪರ್ಟ್ಸ್ ದಿಶಾ.

(ಲೇಖಕಿ ಫ್ಯಾಷನ್ ಪತ್ರಕರ್ತೆ)