Saturday, 14th December 2024

ಪತ್ನಿಯ ಕತ್ತು ಕೊಯ್ದು ಕೊಂದ ಪತಿಯಿಂದ ಆತ್ಮಹತ್ಯೆಗೆ ಯತ್ನ

Murder

ಆನೇಕಲ್: ಮನೆಯಲ್ಲಿ ಮಲಗಿದ್ದ ಪತ್ನಿಯ ಕತ್ತು ಕೊಯ್ದು ಕೊಂದ ಪತಿ, ಬಳಿಕ ತನ್ನ ಕತ್ತು ಕೊಯ್ದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಸೋಮವಾರ ಬೆಳಗ್ಗೆ ಆನೇಕಲ್ ತಾಲೂಕಿನ ಯಡವನಹಳ್ಳಿಯಲ್ಲಿ ಘಟನೆ ಸಂಭವಿಸಿದೆ.

ಸಂಪತ್​ ಪತ್ನಿ ಲಾವಣ್ಯ(30) ಹತ್ಯೆಯಾದವಳು. ಸಂಪತ್ ಸ್ಥಿತಿ ಗಂಭೀರವಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. 12 ವರ್ಷದ ಹಿಂದೆ ಲಾವಣ್ಯ ಮತ್ತು ಸಂತೋಷ್​ ಮದುವೆ ಆಗಿದ್ದರು. ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ಕಳೆದ 10 ದಿನಗಳಿಂದ ದಂಪತಿ ನಡುವೆ ಜಗಳ ನಡೆಯುತ್ತಿತ್ತು.

ಸೋಮವಾರ ಬೆಳಗ್ಗೆ ಸಂತೋಷ್​, ಪತ್ನಿಯ ಕತ್ತು ಸೀಳಿ ಕೊಲೆ ಮಾಡಿದ್ದಾನೆ. ಅಡ್ಡ ಬಂದ ಮಗ ಭಾರ್ಗವ್​ನ ಕೈ ಕೊಯ್ದು ಬಳಿಕ ತನ್ನ ಕತ್ತನ್ನೂ ಕೊಯ್ದುಕೊಂಡು ನೋವಿ ನಿಂದ ಚೀರಾಡುತ್ತಾ ಮೊದಲ ಮಹಡಿ ಮನೆಯಿಂದ ಕೆಳಗೆ ಓಡಿ ಬಂದು ಚರಂಡಿಗೆ ಬಿದ್ದಿದ್ದಾನೆ.

ಸಂತೋಷ್​ನ ಚೀರಾಟ ಕೇಳಿ ಸ್ಥಳಕ್ಕೆ ಬಂದ ಸ್ಥಳೀಯರು ಬೆಚ್ಚಿಬಿದ್ದಿದ್ದಾರೆ. ಕೂಡಲೇ ಸ್ಥಳೀಯರು ಸಂತೋಷ್​ ಮತ್ತು ಮಗ ಭಾರ್ಗವ್​ನನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.

ಕುಡಿತ ಚಟ ಅಂಟಿಸಿಕೊಂಡಿದ್ದ ಸಂಪತ್ ಮನೆಯಲ್ಲಿ ಪದೇಪದೆ ಗಲಾಟೆ ಮಾಡುತ್ತಿದ್ದ. ಕತ್ತು ಕೊಯ್ದುಕೊಂಡಿದ್ದರಿಂದ ರಸ್ತೆಯಲ್ಲಿ ರಕ್ತ ಚೆಲ್ಲಿದ ಕಲೆ ಹಾಗೇ ಇದ್ದು, ಭಯದ ವಾತಾವರಣ ಸೃಷ್ಟಿಯಾಗಿದೆ.