Wednesday, 9th October 2024

ಅಮ್ಮನವರ ಪ್ರಥಮ ಪುಣ್ಯಾರಾಧನೆ

ಕೊಲ್ಹಾರ: ಭಾರತ ದೇಶ ಸರ್ವಧರ್ಮಗಳ ತವರೂರು ಇತಿಹಾಸ ಪರಂಪರೆಯ ಪಾವನ ಭೂಮಿ ವಿಜಯಪುರ ಜಿಲ್ಲೆಯ ಕೊಲ್ಹಾರ ಪಟ್ಟಣದ ಶ್ರೀ ಮದ್ ವೀರಶೈವ ಧರ್ಮ ಪರಂಪರೆಯ ಉಜ್ಜನಿ ಪೀಠ ಗುರುಸ್ಥಲದ ಮಠವಾದ ಶ್ರೀ ಶೀಲವಂತ ಹಿರೇಮಠ ಬಹುಪುರತನ ಇತಿಹಾಸ ಪರಂಪರೆಯನ್ನು ಹೊಂದಿದೆ.

ಶ್ರೀಮಠದಲ್ಲಿ ಸಾವಿರಾರು ವರ್ಷಗಳಿಂದ ಅನೇಕ ಶಿವಾಚಾರ್ಯರು ತಪಸ್ವಿಗಳು ಪವಾಡ ಪುರುಷರು ಮಹಾತ್ಮರು ನೆಲೆಸಿ ಧರ್ಮ ಜಾಗೃತಿ ಯನ್ನು ಮಾಡಿ ತಮ್ಮ ಲೀಲೆಗಳನ್ನು ತೋರಿದ್ದಾರೆ.  ಅಂತೆಯೇ ಈಗಲೂ ಶ್ರೀಮಠಕ್ಕೆ ಹಿಂದೂ ಮುಸ್ಲಿಂ ಬೇಧವಿಲ್ಲದೆ ಭಾಗ್ಯಕ್ಕತೆಯಿಂದ ಭಕ್ತಿಯನ್ನು ಸಲ್ಲಿಸುವದು ಇತಿಹಾಸ ಪ್ರಸಿದ್ಧವಾಗಿದೆ ಈಗಲೂ ರಾಜ ಗುರುಸಿದ್ದೇಶ್ವರ ಶಿವಾಚಾರ್ಯರು ಕರ್ತೃಗದ್ದುಗೆ ಇಷ್ಟಾರ್ಥ ಬಯಸಿ ನಡೆದುಕೊಂಡರೆ ಸಂಕಲ್ಪ ಸಿದ್ಧಿ ಯಾಗುವುದು ಸತ್ಯವಾದ ಮಾತು ಇಂತಹ ಶ್ರೀ ಮಠದಲ್ಲಿ ಪ್ರಪಂಚಕ ಜೀವನ ನಡೆಸಿ ಪಾರ ಮಾರ್ಥ ಸಾಧನೆ ಮಾಡಿದ ಶ್ರೀ ಮುರುಗಯ್ಯ ಅಜ್ಜನವರು ಮಾತೋಶ್ರೀ ಪಾರ್ವತಮ್ಮ ನವರು ಸರ್ವ ಸಮಾಜಕ್ಕೆ ದಾರಿದೀಪವಾಗಿ ಲೀಲೆ ತೋರಿದ್ದಾರೆ ತಪಸ್ಸು ಎಂದರೆ ಕೇವಲ ಅಧ್ಯಾತ್ಮಿಕ ಕ್ಷೇತ್ರಕ್ಕೆ ಸೀಮಿತವಲ್ಲ.

ಇದಕ್ಕೆ ಹೊರತಾದ ಲೌಕಿಕ ತಪಸ್ಸುಗಳು ಜೀವನದಲ್ಲಿದೆ. ಎಲ್ಲೋ ಜನಿಸಿದ ಒಂದು ಹೆಣ್ಣು ಇನ್ನೆಲ್ಲೋ ಹುಟ್ಟಿದ ಒಂದು ಗಂಡನ್ನು ಮದುವೆಯಾಗಿ ಪರಸ್ಪರ ಗುಣ ಸ್ವಭಾವ ಅರ್ಥ ಮಾಡಿಕೊಂಡು ಜೀವನದ ಕೊನೆಯವರೆಗೂ ಹೊಂದಿಕೊಂಡು ಜೀವನ ನಡೆಸುವುದಿದೆಯಲ್ಲ, ಅದು ಒಂದು ತಪಸ್ಸು ಬರುವ ಪತಿಯ ಕನಿಷ್ಠ ಆದಾಯದಲ್ಲಿ ನಾಲ್ಕು ಮಕ್ಕಳು ಒಂದು ಸಂಸಾರವನ್ನು ತೂಗಿಸಿಕೊಂಡು ಮಕ್ಕಳೆಲ್ಲರಿಗೂ ಒಳ್ಳೆಯ ಶಿಕ್ಷಣ ಕೊಡಿಸಿ ಮಕ್ಕಳಿಗಾಗಿ ಆಸ್ತಿ ಮಾಡುವುದಕ್ಕಿಂತ ಮಕ್ಕಳಲ್ಲಿ ಅಸ್ತಿತ್ವ ಉಳಿಸಿಕೊಳ್ಳುವಂತ ಮಾರ್ಗವನ್ನು ತೋರಿಸುವುದಿದೆಯಲ್ಲ ಅದು ಅಪ್ಪ-ಅಮ್ಮನ ದೊಡ್ಡ ತಪಸ್ಸು.

ಅಂತಹ ಪಾಯಮಯ ಜೀವನ ನಡೆಸಿ ದುಡಿಮೆಯಲ್ಲಿ ದೇವರನ್ನು ಕಂಡವರು ಪೂಜ್ಯ ಮುರುಗಯ್ಯ ಅಜ್ಜನವರು ಬಡತನದಲ್ಲಿ ಎಂಥ ಕಷ್ಟ ಬಂದರೂ ತಾನು ಉಪವಾಸ ವಿದ್ದು ಮಕ್ಕಳಿಗೆ ಅಂಬಲಿಯನ್ನು ಉನಿಸಿ ತಾನು ಉಪವಾಸ ಬಿದ್ದದ್ದು ವ್ರತವೆಂದು ವಾರದಲ್ಲಿ ನಾಲ್ಕು ದಿನ ವೃತ ಮಾಡಿದ ಮಹಾ ತಾಯಿ ಪಾರ್ವತಮ್ಮನವರು ನಿತ್ಯಲಿಂಗಾರ್ಚನೆ ದಾಸೋಹ ಭಾವ ರೂಢಿಸಿಕೊಂಡು ಶ್ರೀ ಮಠದ ಕೀರ್ತಿಯನ್ನು ಬೆಳೆಸುತ್ತಾ ಬಂದ ಸಾಕ್ಷಾತ್ ಪಾರ್ವತಿ ಪರಮೇಶ್ವರರ ಅವತಾರವೇ ಈ ನಮ್ಮ ಅಜ್ಜ ಅಮ್ಮನವರು ಐದು ಜನ ಹೆಣ್ಣು ಮಕ್ಕಳು ಐದು ಜನ ಗಂಡು ಮಕ್ಕಳು ಪಡೆದ ಪುಣ್ಯವಂತರು ಇಬ್ಬರು ಗಂಡು ಮಕ್ಕಳು ಅಕಾಲಿಕ ಮರಣ ಹೊಂದಿದಾಗ ಬಲುನೊಂದ ದಂಪತಿಗಳು ಇದ್ದ ಐದು ಹೆಣ್ಣು ಮಕ್ಕಳನ್ನು ಸುಶಿಕ್ಷಿತರನ್ನಾಗಿ ಮಾಡಿ ಉತ್ತಮ ಸಂಸ್ಕಾರವಂತ ಮನೆತನಗಳಿಗೆ ಮದುವೆ ಮಾಡಿ ಮೂರು ಜನ ಗಂಡು ಮಕ್ಕಳಿಗೆ ಪದವಿ ಶಿಕ್ಷಣ ಕೊಡಿಸಿ ಇಬ್ಬರನ್ನು ಸರಕಾರಿ ಉದ್ಯೋಗಸ್ತರನ್ನಾಗಿ ಮಾಡಿ ಒಬ್ಬರನ್ನು ಸಂಸ್ಕೃತ ಪಂಡಿತರನ್ನಾಗಿ ಮಾಡಿ ನಾಡಿನ ಶ್ರೇಷ್ಠ ಪ್ರವಚನಕಾರರನ್ನಾಗಿ ಮಾಡಿ ಸಮಾಜ ಸೇವೆಗೆ ಅರ್ಪಿಸಿದ್ದು ಅವರ ಹೃದಯ ಶ್ರೀಮಂತಿಕೆ ಮರಿಯುವಂತಿಲ್ಲ ಇಂತಹ ತ್ಯಾಗಮಹಿ ಜೀವನ ನಡೆಸಿದ ಶ್ರೀ ಮುರುಗಯ್ಯ ಅಜ್ಜನವರು ತಮ್ಮ 88ನೇ ವಯಸ್ಸಿನಲ್ಲಿ ದಿನಾಂಕ್ 19/02/2006 ರಲ್ಲಿ ಶಿವೈಕ್ಯರಾಗುತ್ತಾರೆ.

ವಯೋವೃದ್ಧರಾಗಿದ್ದ ಪಾರ್ವತಮ್ಮನವರು ಎದೆಗುಂದದೆ ಶ್ರೀ ಮಠದ ಅಭಿವೃದ್ಧಿ ಮಾಡುತ್ತಾ ಕೈಲಾಸನಾಥ ಶ್ರೀಗಳಿಗೆ ಮಾರ್ಗದರ್ಶಕರಾಗಿ 1008 ಶಿವಲಿಂಗಗಳ ಸ್ಥಾಪಿಸಿ ಪ್ರತಿ ವರ್ಷ ಮಹಾ ಶಿವರಾತ್ರಿಯಂದು ಶ್ರೀ ಗುರುಸಿದ್ದೇಶ್ವರ ಮಹಾ ರಥೋತ್ಸವ 1008 ಮುತ್ತೈದರ ಉಡಿ ತುಂಬುವುದು ನೊಂದು ಬಂದವರ ಬಾಳಿಗೆ ಬೆಳಕಾಗಿ ತಮ್ಮ ಸಾಂತ್ವನ ನುಡಿಗಳಿಂದ ಹರುಷ ತಂದು ಕೊಟ್ಟ ಮಹಾತಾಯಿ ಪಾರ್ವತಮ್ಮನವರು.

ತನುವಿನಲ್ಲಿ ನಿರ್ಮೋಹ ಮನದಲ್ಲಿ ನಿರಹಂಕಾರ ಪ್ರಾಣದಲ್ಲಿ ನಿರ್ಭಯ ಚಿತ್ತದಲ್ಲಿ ನಿರಪೇಕ್ಷೆ ಭಾವದಲ್ಲಿ ವೈರಾಗ್ಯ ಧ್ಯಾನದಲ್ಲಿ ಪರಮಾನಂದ ಬೆಸಗೊಂಡ ಬಳಿಕ ಸೌರಾಷ್ಟ್ರ ಸೋಮೇಶ್ವರ ಲಿಂಗ ಬೇರಿಲ್ಲ ಕಾಣಿರೋ ಎಂಬಂತೆ ಶರಣರ ತತ್ವ ಆದರ್ಶಗಳನ್ನು ಪಾಲಿಸುತ್ತಾ ಶ್ರೀಮಠದಲ್ಲಿ ನಿತ್ಯ ದಾಸೋಹ ಜ್ಞಾನ ದೀವಿಗೆಯ ನಂದಾದೇವಿಗೆಯನ್ನು ಬೆಳಗಿಸಿ ತಮ್ಮ ನೇರ ನುಡಿಗಳಿಂದ ಭಕ್ತರನ್ನು ಸನ್ಮಾರ್ಗದಡೆಗೆ ತಂದು ಕೀರ್ತಿವಂತರನ್ನಾಗಿ ಮಾಡಿದ ಕೀರ್ತಿ ಅಮ್ಮನವರಿಗೆ ಸಲ್ಲುತ್ತದೆ.

ಅಮ್ಮನವರ ಪವಾಡಗಳು: ಪವಾಡಲೀಲೆಗಳನ್ನು ತೋರಿದ ಅಮ್ಮನವರು ಒಮ್ಮೆ ಮುರುಗಯ್ಯಜ್ಜನವರು ಶ್ರೀ ಸಂಗಮೇಶ್ವರ ಪ್ರೌಢಶಾಲೆಯ ಕಟ್ಟಡಕ್ಕೆ ಎತ್ತಿನ ಬಂಡಿಯಲ್ಲಿ ಬ್ಯಾರೆಲ್ ತುಂಬಿ ನೀರು ತರುವ ಕಾಯಕ ಮಾಡುತ್ತಿದ್ದರು ಒಂದು ದಿನ ಅಜ್ಜನವರು ಬಂಧುಗಳೊಂದಿಗೆ ಶ್ರೀಶೈಲ ಕ್ಷೇತ್ರಕ್ಕೆ ಹೋದಾಗ ಬೇರೊಬ್ಬರನ್ನು ಶಾಲೆಯ ಕಟ್ಟಡಕ್ಕೆ ನೀರು ಒದಗಿಸಲು ಒಪ್ಪಿಸಿದಾಗ ಜಾಡರ ಬಾವಿಯಲ್ಲಿ ನೀರು ತಳದಲ್ಲಿ ಇದ್ದು ಹಗ್ಗದಿಂದ ಸೀದಿ ಹಾಕುವಾಗ ಬಂಡಿ ಹೂಡಿದ ಎತ್ತು ಕಾಲು ಜಾರಿ ಬಾವಿಯಲ್ಲಿ ಬೀಳುತ್ತದೆ ಬಾವಿಯಲ್ಲಿ ನೀರಿಲ್ಲ ಎತ್ತು ಮೇಲೆ ಬರುವುದು ಕಷ್ಟ ಕಾಲಿಗೆ ಪೆಟ್ಟಾಗಿರಬಹುದು ಎಂದು ಜನ ಮಾತನಾಡುತ್ತಾ ಶ್ರೀ ಮಠಕ್ಕೆ ಬಂದು ಪಾರ್ವತಮ್ಮನವರಿಗೆ ಹೇಳಿದಾಗ ಮನನೊಂದ ತಾಯಿ ನೀರಿಲ್ಲದ ಬಾವಿಯಲ್ಲಿ ಬಿದ್ದ ನನ್ನ ಸಂಸಾರ ಬಂಡಿ ಸಾಗಿಸುವ ಬಸವ ಸುರಕ್ಷಿತವಾಗಿ ತೇಲಿ ಮೇಲೆ ಬಾ ಎಂದಾಗ ಕ್ಷಣದಲ್ಲಿ ಅರ್ಧ ನೀರಿದ್ದ ಬಾವಿ ನೀರು ಮೇಲೆ ಬಂದು ನೀರು ತುಂಬಿ ಮೇಲೆ ಬಂದಾಗ ಎತ್ತು ಈಜುತ್ತಾ ಸುರಕ್ಷಿತವಾಗಿ ತಾನೇ ಮೇಲೆ ಬಂದಿದ್ದು ಅಮ್ಮನವರ ಲೀಲೆ ಎಂದು ಜನ ಕೊಂಡಾಡಿದರು.

ಪಟ್ಟಣದ ಪತಿ ಪತ್ನಿ ಜಗಳವಾಡಿ ನಾಲ್ಕು ಜನ ಮಕ್ಕಳನ್ನು ಬಿಟ್ಟು ತುಂಬಿ ಹರಿಯುವ ಹಳ್ಳದಲ್ಲಿ ಹಾರಿದಳು ಆ ದೃಶ್ಯ ನೋಡಿದ ಜನ ಆ ವ್ಯಕ್ತಿಗೆ ನಿನ್ನ ಪತ್ನಿ ಹಳ್ಳಹಾರಿ ಹೊಳಿಕೂಡಿದಳು ಎಂದು ಜನ ಎಲ್ಲರೂ ಕಣ್ಣಾರೆ ಕಂಡಿದ್ದೇವೆ ಎಂದು ಆ ವ್ಯಕ್ತಿಯ ಮನೆಗೆ ಬಂದು ಹೇಳಿದಾಗ ಆ ವ್ಯಕ್ತಿ ನಾಲ್ಕು ಜನ ಮಕ್ಕಳು ವೃದ್ಧ ತಾಯಿಯನ್ನು ಅಪ್ಪಿಕೊಂಡು ದುಃಖಿಸುತ್ತಾ ಕುಳಿತಾಗ ಕೂಡಗಿ ಗಂಗಯ್ಯ ಅಜ್ಜನವರು ಸಾಂತ್ವನ ಹೇಳುತ್ತಿದ್ದರು ಅದೇ ಸಮಯದಲ್ಲಿ ಮಹದೇವಿಯನ್ನು ಸುರಕ್ಷಿತವಾಗಿ ಮನೆಗೆ ಕರೆದುಕೊಂಡು ಬಂದ ಮಹಾತಾಯಿ ಪಾರ್ವತಮ್ಮನವರು ಜನವೆಲ್ಲ ಗಾಬರಿಯಾಗಿ ತಾಯಿಯ ಮಹಿಮೆ ಎಂದು ಕೊಂಡಾಡಿದರು.

ಒಮ್ಮೆ ಭಾದ್ರಪದ ಮಾಸದಲ್ಲಿ ನಡೆಯುವ ಉಪ್ಪಲದಿನ್ನಿಯ ಶ್ರೀ ಸಂಗಮೇಶ್ವರ ಜಾತ್ರೆಗೆ ಊರಿನ ರೈತರೆಲ್ಲ ಎತ್ತಿನ ಬಂಡಿ ಹೂಡಿಕೊಂಡು ಸಂಗಮೇಶ್ವರ ಜಾತ್ರೆಗೆ ಹೋಗುವಾಗ ನಾವು ಎತ್ತಿನ ಬಂಡಿ ಹೂಡಿಕೊಂಡು ಜಾತ್ರೆಗೆ ಹೋಗೋಣ ಎಂದು ಚಿಕ್ಕ ಮಗ ಈರಯ್ಯ ಹಠ ಮಾಡಿದಾಗ ನಮ್ಮ ಎತ್ತು ಅಶಕ್ತವಾಗಿವೆ ಅಲ್ಲಿಯವರೆಗೆ ನಡೆಯಲಾರವು ಬೇಡ ಎಂದರು ಮಗ ಕೇಳಲಿಲ್ಲ ಏನೇ ಆಗಲಿ ನಡಿರಿ ಸ್ವಾಮಿ ಸಂಗಮನಾಥ ಮಾಡಿದ್ದಾಗಲಿ ಎಂದು ಬಂಡಿ ಹೂಡಿಕೊಂಡು ಹೋಗುವಾಗ ನೋಡಿದ ಜನ ಇಂಥ ಎತ್ತುಗಳು ಬಿದ್ದರೆ ಮೇಲೆ ಏಳಲ್ಲ ಉಪ್ಪಲದಿನ್ನಿ ಯಾವಾಗ ಮುಟ್ಟಬೇಕು ಎಂದು ಆಡಿಕೊಳ್ಳುತ್ತಾ ತಮ್ಮ ಬಂಡಿಗಳನ್ನು ಕೆಕೆ ಹಾಕುತ್ತಾ ಓಡಿಸುತ್ತಿದ್ದರು ಪಟ್ಟಣದ ಬರಗಿಯವರ ತೋಟದ ದಿಬ್ಬ ಏರುವಾಗ ಎತ್ತು ಕಾಲು ಜಾರಿ ಬಿದ್ದು ಮೇಲೆ ಏಳಲಿಲ್ಲ ನೋಡಿದ ಜನ ಎತ್ತು ಬಂಡಿಯನ್ನು ಎತ್ತಿ ಹಾಕಿ ಜಾತ್ರೆಗೆ ಹೋದರು ಇತ್ತ ದಂಪತಿಗಳು ಎತ್ತನ್ನು ಮುಟ್ಟಿ ಎದ್ದೇಳು ಬಸವ ಸಂಗಮ ನಾಥನ ಮಂದಿರದಲ್ಲಿ ಜಂಗಮ ದಾಸೋಹಕ್ಕೆ ವೇಳೆಯಾಯಿತು ಹೇಳು ಎಂದಾಗ ತಟ್ಟನೆ ಎದ್ದು ನಿಂತ ಎತ್ತು ವೇಗಾವಾಗಿ ಊರಿನ ರೈತರ ಬಂಡಿ ಉಪ್ಪಲದಿನ್ನಿ ಮುಟ್ಟುವ ಮುಂಚೆಯೆ ಅಲ್ಲಿದ್ದದ್ದು ಅಜ್ಜ ಅಮ್ಮನವರು ತೋರಿದ ಲೀಲೆ ಇಂತಹ ಪವಾಡ ತೋರಿದ ಅಜ್ಜ ಅಮ್ಮನವರ ಪುಣ್ಯಧಾಮ ಕಳಸಾರೋಹಣ ಹಾಗೂ ಮಾತೋಶ್ರೀ ಪಾರ್ವತಮ್ಮನವರ ಪ್ರಥಮ ಪುಣ್ಯಾರಾಧನೆ ಇದೆ.

ಅಶ್ವಿಜ ಮಾಸ ಶುದ್ಧ ಚತುರ್ಥಿ ಎಂದು ದಿನಾಂಕ 13-10-2022 ರಂದು ಗುರುವಾರ ಗುರುವಾರ ನಾಡಿನ ಹರ ಗುರು ಚರಮೂರ್ತಿಗಳ ದಿವ್ಯ ಸಾನಿಧ್ಯದಲ್ಲಿ ಹಾಗೂ ರಾಜಕೀಯ ಗಣ್ಯರ ಉಪಸ್ಥಿತಿಯಲ್ಲಿ ನೆರವೇರುವುದು ಈ ಪುಣ್ಯ ಕಾರ್ಯದಲ್ಲಿ ತಾವೆಲ್ಲರೂ ಭಾಗಿಯಾಗಿ ಪುನೀತರಾಗಬೇಕೆಂದು ಪೂಜ್ಯಶ್ರೀ ಕೈಲಾಸನಾಥ ಶ್ರೀಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.