Monday, 14th October 2024

ಕರ್ನಾಟಕ ಹೈಕೋರ್ಟ್‌ನ ಹತ್ತು ಹೆಚ್ಚುವರಿ ನ್ಯಾಯಾಧೀಶರ ಖಾಯಂ ಮಾಡಿ ಆದೇಶ

ಬೆಂಗಳೂರು: ಕರ್ನಾಟಕ ಹೈಕೋರ್ಟ್‌ನ ಹತ್ತು ಹೆಚ್ಚುವರಿ ನ್ಯಾಯಾಧೀಶರನ್ನು ಖಾಯಂ ನ್ಯಾಯಾಧೀಶ ರನ್ನಾಗಿ ನೇಮಕ ಮಾಡಿ ಕೇಂದ್ರ ಸರ್ಕಾರವು ಗುರುವಾರ ಅಧಿಸೂಚನೆ ಹೊರಡಿಸಿದೆ.

ಕರ್ನಾಟಕದ ನ್ಯಾಯಾಧೀಶರಾಗಿ ನೇಮಕಗೊಂಡ ನ್ಯಾಯಾಧೀಶರು: ಮರಳೂರು ಇಂದ್ರಕುಮಾರ್ ಅರುಣ್, ಎಂಗಲಗುಪ್ಪೆ ಸೀತಾರಾಮಯ್ಯ ಇಂದಿರೇಶ್, ರವಿ ವೆಂಕಪ್ಪ ಹೊಸಮನಿ, ಸವಣೂರು ವಿಶ್ವಜಿತ್ ಶೆಟ್ಟಿ, ಶಿವಶಂಕರ್ ಅಮರಣ್ಣವರ್, ಮಕ್ಕಿಮನೆ ಗಣೇಶಯ್ಯ ಉಮಾ, ವೇದವ್ಯಾಸಾಚಾರ್ ಶ್ರೀಶಾನಂದ, ಹಂಚಾಟೆ ಸಂಜೀವಕುಮಾರ, ಪದ್ಮರಾಜ್ ನೇಮಚಂದ್ರ ದೇಸಾಯಿ, ಪಂಜಿಗದ್ದೆ ಕೃಷ್ಣ ಭಟ್ ಮುಂತಾದವರು.

ತಿಂಗಳ ಆರಂಭದಲ್ಲಿ, 12 ಹೈಕೋರ್ಟ್‌ಗಳಲ್ಲಿ ನ್ಯಾಯಾಧೀಶರ ಹುದ್ದೆಗೆ 68 ಹೆಸರುಗಳನ್ನು ಏಕಕಾಲದಲ್ಲಿ ಶಿಫಾರಸು ಮಾಡುವ ಐತಿಹಾಸಿಕ ನಿರ್ಧಾರದ ನಂತರ, ಮುಖ್ಯ ನ್ಯಾಯಮೂರ್ತಿ ಎನ್ವಿ ರಮಣ ನೇತೃತ್ವದ ಸುಪ್ರೀಂ ಕೋರ್ಟ್ ಕೊಲಿಜಿಯಂ 10 ಹೆಸರುಗಳನ್ನು ಕೇಂದ್ರಕ್ಕೆ ಕಾಯಂ ನ್ಯಾಯಾಧೀಶರನ್ನಾಗಿ ನೇಮಿಸಲು ಶಿಫಾರಸು ಮಾಡಿದೆ.

ಸೆ.7 ರಂದು ನಡೆದ ಸಭೆಯಲ್ಲಿ, ನ್ಯಾಯಮೂರ್ತಿಗಳಾದ ಯು ಯು ಲಲಿತ್ ಮತ್ತು ಎ ಎಂ ಖಾನ್ವಿಲ್ಕರ್ ಅವರನ್ನೊಳಗೊಂಡ ತ್ರಿಸದಸ್ಯ ಕೊಲಿಜಿಯಂ, ಕೇರಳ ಹೈಕೋರ್ಟ್ ಕೊಲಿಜಿಯಂನ ಪ್ರಸ್ತಾವನೆಯನ್ನು ಅನುಮೋದಿಸಿದೆ.