Wednesday, 11th December 2024

ತೀರ್ಥಹಳ್ಳಿಯಲ್ಲಿ ಎನ್ ಐಎ: ಉಗ್ರರೊಂದಿಗೆ ಸಂಪರ್ಕ ಶಂಕೆ

ತೀರ್ಥಹಳ್ಳಿ: ಉಗ್ರರೊಂದಿಗೆ ಇಬ್ಬರು ಯುವಕರು ಸಂಪರ್ಕ ಹೊಂದಿರುವ ಶಂಕೆ‌ ಹಿನ್ನೆಲೆಯಲ್ಲಿ, ಎನ್ ಐಎ ಅಧಿಕಾರಿಗಳ ತಂಡ ತಲೆಮರೆಸಿಕೊಂಡಿರುವ ಇಬ್ಬರು ಯುವಕರ ಮನೆಗೆ ಭೇಟಿ‌ ನೀಡಿ ವಿಚಾರಣೆ ನಡೆಸಿದೆ.

ಸ್ಯಾಟಲೈಟ್ ಫೋನ್ ಬಳಕೆಯ ಹಿನ್ನೆಲೆಯಲ್ಲಿ ಕಳೆದ ವರ್ಷ ಮಾರ್ಚ್ ನಲ್ಲಿ ತೀರ್ಥಹಳ್ಳಿ ತಾಲೂಕಿನಾದ್ಯಂತ ಎನ್ ಐಎ ಅಧಿಕಾರಿಗಳು ಕೂಬಿಂಗ್ ನಡೆಸಿದ್ದ‌ರು. ಈ ವೇಳೆ ತೀರ್ಥಹಳ್ಳಿಯ ಯುವಕರು ಉಗ್ರರೊಂದಿಗೆ ಸಂಪರ್ಕ ಹೊಂದಿರುವುದು ದೃಢಪಟ್ಟಿತ್ತು.

ಇದೀಗ ಹೆಚ್ಚಿನ ತನಿಖೆಗಾಗಿ ಮತ್ತೆ ಯುವಕರ ಮನೆಗೆ ಭೇಟಿ ನೀಡಿರುವ ಅಧಿಕಾರಿಗಳು ತಲೆಮರೆಸಿಕೊಂಡಿರುವ ಯುವಕರು ತಮ್ಮ ಕುಟುಂಬದೊಂದಿಗೆ ಸಂಪರ್ಕ ಸಾಧಿಸಿದ್ದಾರೆಯೇ ಎಂದು ತನಿಖೆಗೆ ನಡೆಸಿದ್ದಾರೆ. ನಾಲ್ವರು ಅಧಿಕಾರಿಗಳ ತಂಡದಿಂದ ತಲೆಮರೆಸಿ ಕೊಂಡ ಯುವಕರ ಕುಟುಂಬದವರ ತನಿಖೆ ನಡೆದಿದ್ದು, ಸ್ಥಳೀಯ ಪೊಲೀಸರ ಸಹಕಾರ ಪಡೆದುಕೊಂಡಿದ್ದಾರೆ.