Wednesday, 11th December 2024

ಮೀಸಲಾತಿ ಹೆಚ್ಚಳ: ಬಿಜೆಪಿ ಸರಕಾರಕ್ಕೆ ಕೃತಜ್ಞತೆ

ಕೊಲ್ಹಾರ: ಪರಿಶಿಷ್ಟ ಸಮುದಾಯಗಳ ದಶಕಗಳ ಬೇಡಿಕೆ ಮೀಸಲಾತಿ ಹೆಚ್ಚಳ ಮಾಡಿರುವ ರಾಜ್ಯ ಬಿಜೆಪಿ ಸರಕಾರಕ್ಕೆ ಕೃತಜ್ಞತೆ ಸಲ್ಲಿಸಲಾಗುವುದು ಎಂದು ಬಿಜೆಪಿ ಎಸ್ ಸಿ ಮೋರ್ಚಾ ಅಧ್ಯಕ್ಷ ಶಿವಪುತ್ರ ಮೇತ್ರಿ ಅವರು ಹೇಳಿದರು.

ಪಟ್ಟಣದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು ಪರಿಶಿಷ್ಟ ಸಮುದಾಯಗಳ ಬಹುದಶಕಗಳ ಬೇಡಿಕೆಯಾಗಿದ್ದ ಮೀಸಲಾತಿ ಹೆಚ್ಚಳವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಸಚಿವ ಸಂಪುಟ ಸಹೋದ್ಯೋಗಿಗಳ ಸಹಕಾರ ದಿಂದ ಪರಿಶಿಷ್ಟ ಜಾತಿಗೆ 15 ರಿಂದ 17 ಹಾಗೂ ಪರಿಶಿಷ್ಟ ಪಂಗಡಗಳಿಗೆ 3 ರಿಂದ 7 ರ ವರೆಗೆ ಮೀಸಲಾತಿ ಹೆಚ್ಚಿಸಿ ಸುಗ್ರಿವಾಜ್ಞೆಯ ಮೂಲಕ ರಾಜ್ಯಪಾಲರ ಅಂಕಿತ ಪಡೆದು ಜಾರಿಗೆ ತಂದ ಮುಖ್ಯ ಮಂತ್ರಿಗಳ ಕಾರ್ಯ ಅಭಿನಂದನಿಯ ಎಂದು ಹೇಳಿದರು.

ಮಾಜಿ ಸಚಿವ ಎಸ್ ಕೆ ಬೆಳ್ಳುಬ್ಬಿ ಮಾತನಾಡುತ್ತಾ ಕಾಂಗ್ರೆಸ್ ಸರಕಾರ ದಲಿತ, ಅಲ್ಪ ಸಂಖ್ಯಾತ ಹಿಂದುಳಿದ ಸಮುದಾಯಗಳನ್ನು ಓಟ್ ಬ್ಯಾಂಕನ್ನಾಗಿ ಬಳಸಿಕೊಂಡು ಪರ್ಯಾಯವಾಗಿ ಆ ಸಮುದಾಯಗಳನ್ನು ಕಡೆಗಣಿಸುತ್ತಾ ಬಂದಿದೆ ಆದರೆ ನಮ್ಮ ಬಿಜೆಪಿ ಸರಕಾರ ದೇಶದ ಪ್ರತಿಯೊಂದು ಸಮುದಾಯವನ್ನು ಗಣನೆಗೆ ತೆಗೆದುಕೊಂಡು ಅವುಗಳನ್ನು ಮೇಲೆತ್ತುವ ಕೆಲಸ ಮಾಡುತ್ತಿದೆ ಎಂದು ಹೇಳಿದರು.

ಪ್ರಶಾಂತ ಪವಾರ್, ಪ.ಪಂ ಸದಸ್ಯ ಬಾಬು ಬಜಂತ್ರಿ, ಪ.ಪಂ ನಾಮನಿರ್ದೇಶಿತ ಸದಸ್ಯ ಲಕ್ಷ್ಮಣ ಬ್ಯಾಲ್ಯಾಳ, ಗೋವಿಂದ ದೇವಕರ್, ತ್ರಿಮೂರ್ತಿ ಶಿಲ್ಪಿ, ಭೀಮಶಿ ಕುನಬಕಡ್ಡಿ ಇತರರು ಇದ್ದರು.