Saturday, 14th December 2024

Tirupati Laddu Row: ತಿರುಪತಿ ಲಡ್ಡು ಕಲಬೆರಕೆ ಪ್ರಕರಣ; ಸಿಬಿಐ ತನಿಖೆಗೆ ಒತ್ತಾಯಿಸಿ ಸಹಿ ಸಂಗ್ರಹ ಚಳವಳಿ

Tirupati Laddu Row

ಬೆಂಗಳೂರು: ತಿರುಪತಿ ತಿರುಮಲ ದೇವಸ್ಥಾನದಲ್ಲಿ ಲಾಡು ಪ್ರಸಾದದಲ್ಲಿ (Tirupati Laddu Row) ಪ್ರಾಣಿಯ ಕೊಬ್ಬು ಬೆರೆಸಿದ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಬೇಕು ಎಂದು ಆಗ್ರಹಿಸಿ, ರಾಷ್ಟ್ರೀಯ ಪ್ರಜ್ಞಾನ ಪ್ರತಿಷ್ಠಾನದ ವತಿಯಿಂದ ನಗರದ ಮಹಾಲಕ್ಷ್ಮಿ ಲೇಔಟ್‌ನ ಶಂಕರಮಠ ಅವನಿ ಶಂಕರಮಠ ಸಭಾಂಗಣದಲ್ಲಿ ಜನಜಾಗೃತಿ ಸಭೆ ಮತ್ತು ಸಹಿ ಸಂಗ್ರಹ ಚಳುವಳಿ ಹಮ್ಮಿಕೊಳ್ಳಲಾಗಿತ್ತು.

ಸಭೆಯಲ್ಲಿ ಮಾಜಿ ಸಚಿವ, ಶಾಸಕ ಕೆ. ಗೋಪಾಲಯ್ಯ ಮಾತನಾಡಿ ʼʼತಿರುಪತಿ ಲಾಡು ತಯಾರಿಕೆಯಲ್ಲಿ ಬಳಸಿದ ತುಪ್ಪದಲ್ಲಿ ದನದ ಕೊಬ್ಬು ತುಪ್ಪ ಸರಬರಾಜು ಮಾಡಿದರು ಯಾರು ಎಂಬ ತನಿಖೆಯಾಗಬೇಕು ಎಂದು ಆಗ್ರಹಿಸಿದ ಅವರು, ವಿಶ್ವದಲ್ಲಿ ಕೊಟ್ಯಂತರ ಭಕ್ತರ ಭಾವನೆಗಳಿಗೆ ಧಕ್ಕೆಯಾಗಿದೆ, ಹಲವಾರು ದೊಡ್ಡ, ದೊಡ್ಡ ದೇವಸ್ಥಾನಗಳಲ್ಲಿ ಪ್ರಸಾದ ಪರಿಶುದ್ಧತೆ ಪರೀಕ್ಷೆ ಮಾಡಬೇಕು ಹಾಗೂ ಅಂತಾರಾಷ್ಟ್ರಿಯ ಜಾಲ ಇರುವ ಸಾಧ್ಯತೆ ಇರುವುದರಿಂದ ರಾಷ್ಟ್ರಪತಿಗಳು ಮತ್ತು ಪ್ರಧಾನಿಮಂತ್ರಿಗಳು ಮಧ್ಯಪ್ರವೇಶ ಮಾಡಿ ಸಿಬಿಐ ತನಿಖೆಗೆ ವಹಿಸಬೇಕು ಎಂದು ಸಾರ್ವಜನಿಕರಿಂದ ಸಹಿ ಸಂಗ್ರಹ ಮಾಡಲಾಗುತ್ತಿದೆʼʼ ಎಂದು ಹೇಳಿದರು.

ಈ ಸುದ್ದಿಯನ್ನೂ ಓದಿ | Reliance Retail: ಬೆಂಗಳೂರಿನ 1ಎಂಜಿ ಮಾಲ್‌ನಲ್ಲಿ ಫ್ರೆಶ್‌ಪಿಕ್ ಮಳಿಗೆಗೆ ಚಾಲನೆ ಕೊಟ್ಟ ನಟಿ ಶ್ರೀನಿಧಿ ಶೆಟ್ಟಿ

ಮಾಜಿ ಶಾಸಕ ನೆ.ಲ.ನರೇಂದ್ರಬಾಬು ಮಾತನಾಡಿ, ʼʼಧಾರ್ಮಿಕ ಶ್ರದ್ದೆಗೆ ಧಕ್ಕೆ ಬಂದಾಗ ನಾವು ಹೋರಾಟ ಮತ್ತು ಪ್ರತಿಕ್ರಿಯೆ ನೀಡುವುದು ನಮ್ಮ ಧರ್ಮ. ತಿರುಪತಿ ಲಾಡು ಪ್ರಸಾದ ಎಲ್ಲರು ಪ್ರಸಾದ ರೂಪದಲ್ಲಿ ತಿಂದಿದ್ದಾರೆ. ಪ್ರಸಾದದಲ್ಲಿ ದನದ ಕೊಬ್ಬು ಬೆರೆಸಿದ್ದಾರೆ. ಕೊಟ್ಯಾಂತರ ಜನರ ಭಕ್ತಿ ಭಾವನೆ ಜತೆ ಚಲ್ಲಾಟವಾಡಿದ್ದಾರೆʼʼ ಎಂದು ದೂರಿದರು.

ಈ ಸುದ್ದಿಯನ್ನೂ ಓದಿ | Bengaluru Power Cut: ಬೆಂಗಳೂರಿನ ಈ ಪ್ರದೇಶಗಳಲ್ಲಿ ನಾಳೆ ಕರೆಂಟ್‌ ಇರಲ್ಲ!

ಈ ಸಂದರ್ಭದಲ್ಲಿ ಕೇಂದ್ರ ಜಿಲ್ಲಾ ಬಿಜೆಪಿ ಜಿಲ್ಲಾಧ್ಯಕ್ಷರಾದ ಸಪ್ತಗಿರಿಗೌಡ, ಹಿಂದೂಪರ ಹೋರಾಟಗಾರ ಹರ್ಷ ಮುತಾಲಿಕ್, ರಾಷ್ಟ್ರಿಯ ಪ್ರಜ್ಞಾನ ಪ್ರತಿಷ್ಠಾನದ ಪ್ರಧಾನ ಕಾರ್ಯದರ್ಶಿ ಡಾ. ಎಸ್. ನಾಗೇಂದ್ರ ಜೋಯಿಸ್, ಬಿಜೆಪಿ ಮುಖಂಡರಾದ ಜಯರಾಮಣ್ಣ, ರಾಘವೇಂದ್ರ, ಶಿವಾನಂದಮೂರ್ತಿ ಹಾಗೂ ಅಗಮ ಪಂಡಿತರು, ಅರ್ಚಕರು ಹಾಗೂ ಹಿಂದೂ ಪರ ಹೋರಾಟಗಾರರು ಪಾಲ್ಗೊಂಡಿದ್ದರು.