Friday, 13th December 2024

17 ಐಎಎಸ್ ಅಧಿಕಾರಿಗಳ ವರ್ಗಾವಣೆ

ಬೆಂಗಳೂರು: ಆಡಳಿತ ಯಂತ್ರಕ್ಕೆ ಚುರುಕು ಮುಟ್ಟಿಸುವ ಸಲುವಾಗಿ, ರಾಜ್ಯ ಸರ್ಕಾರದಿಂದ ಗುರುವಾರ 17 ಐಎಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಆದೇಶಿಸಿದೆ.

ರಾಜ್ಯ ಸರ್ಕಾರವು ಅಧಿಸೂಚನೆ ಹೊರಡಿಸಿದ್ದು, ಬಿಬಿಎಂಪಿಯ ಮುಖ್ಯ ಆಯುಕ್ತರಾಗಿ ಗೌರವ್ ಗುಪ್ತ ಅವರನ್ನು ವರ್ಗಾವಣೆ ಮಾಡಿ, ಮೂಲ ಸೌಕರ್ಯಾಭಿವೃದ್ಧಿ ಇಲಾಖೆಯ ಮುಖ್ಯ ಕಾರ್ಯದರ್ಶಿಯನ್ನಾಗಿ ನೇಮಕ ಮಾಡ ಲಾಗಿದೆ. ಕಂದಾಯ ಇಲಾಖೆಯ ಮುಖ್ಯ ಕಾರ್ಯದರ್ಶಿಯಾಗಿದ್ದ ತುಷಾ ಗಿರಿನಾಥ್ ಅವರನ್ನು ಬಿಬಿಎಂಪಿಯ ಮುಖ್ಯ ಆಯುಕ್ತರನ್ನಾಗಿ ನೇಮಕ ಮಾಡಲಾಗಿದೆ.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಮುಖ್ಯ ಕಾರ್ಯದರ್ಶಿ ಟಿ.ಕೆ ಅನಿಲ್ ಕುಮಾರ್ ರನ್ನು ವರ್ಗಾ ವಣೆ ಮಾಡಿ ಕಂದಾಯ ಇಲಾಖೆಯ ಮುಖ್ಯ ಕಾರ್ಯದರ್ಶಿಯನ್ನಾಗಿ ನೇಮಕ ಮಾಡಲಾಗಿದೆ.

ಐಎಎಸ್ ಅಧಿಕಾರಿ ವಿ ಪೊನ್ನುರಾಜ್ ಅವರನ್ನು, ಕೆಪಿಸಿಎಲ್ ನ ಎಂಡಿಯಾಗಿ, ಮನೋಜ್ ಕುಮಾರ್ ಜೈನ್ ಅವರನ್ನು, ಕಾರ್ಮಿಕ ಇಲಾಖೆಯ ಸೆಕ್ರೇಟರಿಯನ್ನಾಗಿ ನೇಮಕ ಮಾಡಲಾಗಿದೆ.

ಶ್ರೀಮತಿ ಖುಷ್ಬು ಸಿ ಚೌಧರ್ ಅವರನ್ನು ನವದೆಹಲಿಯ ಕಂದಾಯ ಭವನದ ಡೆಪ್ಯುಟಿ ರೆಸಿಡೆಂಟ್ ಕಮೀಷನರ್ ಆಗಿ ನೇಮಕ ಮಾಡಲಾಗಿದೆ.

ಬಾಗಲಕೋಟೆ ಡಿಸಿ ಡಾ.ರಾಜೇಂದ್ರ ಕೆ ಅವರನ್ನು ಕರ್ನಾಟಕ ಲೋಕಸೇವಾ ಆಯೋಗ ಕಾರ್ಯದರ್ಶಿಯನ್ನಾಗಿ ನೇಮಕ ಮಾಡಲಾಗಿದೆ. ಬೆಳಗಾವಿ ಡಿಸಿ ಎಂ.ಜಿ ಹಿರೇಮಠ್ ಅವರನ್ನು KRIDL ಎಂಡಿಯಾಗಿ ನೇಮಕ ಮಾಡಲಾಗಿದೆ. ಧಾರವಾಡ ಜಿಲ್ಲಾಧಿಕಾರಿ ನಿತೀಶ್ ಪಾಟೀಲ್ ಅವರನ್ನು, ಬೆಳಗಾವಿ ಡಿಸಿಯಾಗಿ ನೇಮಕ ಮಾಡಲಾಗಿದೆ.

ಉಡುಪಿ ಜಿಲ್ಲಾಪಂಚಾಯ್ತಿ ಸಿಇಓ ಡಾ.ನವೀನ್ ಭಟ್ ವೈ ಅವರನ್ನು, ಕೆ ಎಸ್ ಆರ್ ಟಿ ಸಿಯ ನಿರ್ದೇಶಕರನ್ನಾಗಿ ನೇಮಕ ಮಾಡಲಾಗಿದೆ. ಬಾಗಲಕೋಟೆ ಜಿಲ್ಲಾಪಂಚಾಯ್ತಿ ಸಿಇಓ ಟಿ ಭೂಬಾಲನ್ ರನ್ನು ಭಾಗಲಕೋಟೆ ಡಿಸಿಯನ್ನಾಗಿ ನೇಮಕ ಮಾಡಲಾಗಿದೆ.

ಕಲಬುರ್ಗಿ ಸಿಇಓ ಡಾ.ದಿಲೀಶ್ ಶಶಿ ಅವರನ್ನು, ಡಿಪಿಎಆರ್ ನ ಡೈರೆಕ್ಟರ್ ಆಗಿ, ಎಸ್ ಭಾರತ್ ಅವರನ್ನು NWKRTCಯ ಎಂಡಿಯಾಗಿ ನೇಮಕ ಮಾಡ ಲಾಗಿದೆ. ಎಂ ಶಿಲ್ಪ ಅವರನ್ನು ಕರ್ನಾಟಕ ನಗರಾಭಿವೃದ್ಧಿ ಇಲಾಖೆಯ ಎಂಡಿಯಾಗಿ, ಕರ್ನಾಟಕ ಭವನದ ಡಿಆರ್ಸಿ ಆಗಿದ್ದ ಹೆಚ್ ಪ್ರಸನ್ನ ಅವರನ್ನು, ಉಡುಪಿ ಜಿಲ್ಲಾಪಂಚಾಯ್ತಿಯ ಸಿಇಓ ಆಗಿ ನೇಮಕ ಮಾಡಲಾಗಿದೆ. ಕೊಳ್ಳೇಗಾಲದ ಎಸಿ ಡಾ.ಗಿರೀಶ್ ದಿಲೀಪ್ ಬಾದೊಲೆ ಅವರನ್ನು ಕಲಬುರ್ಗಿ ಜಿಲ್ಲಾ ಪಂಚಾಯ್ತಿಯ ಸಿಇಓ ಆಗಿ ನೇಮಕ ಮಾಡಲಾಗಿದೆ.