Friday, 13th December 2024

ಭಕ್ತರ ಮೇಲೆ ಉರುಳಿದ ರಥ: ಇಬ್ಬರ ಸಾವು

ಆನೇಕಲ್ (ಬೆಂಗಳೂರು ಗ್ರಾಮಾಂತರ): ತಮಿಳುನಾಡು ಗಡಿಭಾಗದ ಮಾದೇನಹಳ್ಳಿ ಯಲ್ಲಿ ಕಾಳಿಯಮ್ಮ ರಥೋತ್ಸವದ ವೇಳೆ ರಥದ ಚಕ್ರ ತುಂಡಾಗಿ ಭಕ್ತರ ಮೇಲೆ ಬಿದ್ದು ಇಬ್ಬರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.

ಮಾದೇನಹಳ್ಳಿ ಮನೋಹರಂ ಮತ್ತು ಶರವಣನ್ ಮೃತರು. ಘಟನೆಯಲ್ಲಿ ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ.

ಪ್ರತಿವರ್ಷದಂತೆ ಈ ವರ್ಷವೂ ಕಾಳಿಯಮ್ಮ ರಥೋತ್ಸವವನ್ನು ಅದ್ದೂರಿಯಾಗಿ ಮಾಡಲಾಗಿತ್ತು. ರಥವನ್ನು ನೂರಾರು ಭಕ್ತರು ಎಳೆದುಕೊಂಡು ಹೋಗುವ ವೇಳೆ ರಥದ ಚಕ್ರ ತುಂಡಾಗಿದೆ.

ಕೂಡಲೇ ಸ್ಥಳದಲ್ಲಿದ್ದ ಪೊಲೀಸರು ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಿದ್ದಾರೆ. ಜಾತ್ರೆ ಯಲ್ಲಿ ಸುಮಾರು 18 ಹಳ್ಳಿಯ ಸಾವಿರಾರು ಭಕ್ತಾದಿಗಳು ಪಾಲ್ಗೊಂಡಿದ್ದರು. ಘಟನೆಗೆ ಸಂಬಂಧಿಸಿದಂತೆ ಪಾಪರಪಟ್ಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡ ಲಾಗಿದೆ.