ಹುಬ್ಬಳ್ಳಿ ಏರ್ ಪೋರ್ಟ್: ಲ್ಯಾಂಡಿಂಗ್ ವೇಳೆ ಟೈರ್ ಸ್ಫೋಟ Tuesday, June 15th, 2021 ವಿಶ್ವವಾಣಿ ಹುಬ್ಬಳ್ಳಿ : ಇಂಡಿಗೊ ವಿಮಾನ ಕರ್ನಾಟಕದ ಹುಬ್ಬಳ್ಳಿ ಏರ್ ಪೋರ್ಟ್ ನಲ್ಲಿ ಲಾಂಡ್ ಆಗುವ ವೇಳೆ ಅದರ ಟೈರ್ ಸ್ಫೋಟಗೊಂಡಿದೆ. ಅದೃಷ್ಟವಶಾತ್ ಪ್ರಯಾಣಿಕರು ಮತ್ತು ಸಿಬ್ಬಂದಿ ಪ್ರಾಣಾಪಾಯದಿಂದ ಕೂದಲೆಳೆ ಅಂತರದಲ್ಲಿ ಪಾರಾಗಿದ್ದಾರೆ. ಇಂಡಿಗೊ ಫ್ಲೈಟ್ ಕಣ್ಣೂರಿನಿಂದ ಹುಬ್ಬಳ್ಳಿಗೆ ತೆರಳುತ್ತಿತ್ತು ಎನ್ನಲಾಗಿದೆ.