Saturday, 14th December 2024

೬ ಜನ ಕ್ಷಯರೋಗಿಗಳಿಗೆ ದತ್ತು ಪಡೆಯಲಾಗಿದೆ: ಶೀಲವಂತ ಉಮರಾಣಿ

ಇಂಡಿ: ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಕ್ಷಯ ರೋಗ ನಿರ್ಮೂಲನೆ ಮಾಡುವ ಉದ್ದೇಶದಿಂದ ಸೇವಾ ಸಪ್ತಾಹ ಅ.೨ ಕೊನೆಯ ದಿನವಾಗಿದ್ದು ಭಾರತೀಯ ಜನತಾ ಪಕ್ಷದ ಮುಖಂಡರು ಕ್ಷಯ ರೋಗಿಗಳಿಗೆ ದತ್ತು ಪಡೇದುಕೊಂಡು ಅವರಿಗೆ ಪೌಷ್ಠೀಕ ಆಹಾರ ಒದಗಿಸಲಾಗುತ್ತಿದೆ ಎಂದು ಭಾ.ಜ.ಪ ರಾಜ್ಯಕರ‍್ಯಕಾರಣಿ ಸದಸ್ಯ ಶೀಲವಂತ ಉಮರಾಣಿ ಹೇಳಿದರು.

ತಾಲೂಕಾ ಸಾರ್ವಜನಿಕ ಆಸ್ಪತ್ರೆಯಲ್ಲಿ ಏರ್ಪಡಿಸಿ ಭಾರತೀಯ ಜನತಾ ಪಾರ್ಟಿ ಎಸ್.ಸಿ ಮೋರ್ಚಾ ಇಂಡಿ, ಮಂಡಲ ವತಿ ಯಿಂದ ಪ್ರಧಾನ ಮಂತ್ರಿ ನರೇಂದ್ರ ಮೋದಿಜೀಯವರ ಜನ್ಮದಿನದ ಪ್ರಯುಕ್ತ ಸೇವಾ ಪಾಕ್ಷಿಕ ಕಾರ್ಯಕ್ರಮ ಹಾಗೂ ಅ.೨ ಮಹಾತ್ಮಾ ಗಾಂಧಿಜೀ ಯವರ ಕಾರ್ಯಕ್ರಮದ ಪ್ರಯುಕ್ತ ಕ್ಷಯ ರೋಗ ನಿರ್ಮೂಲನ ಅಭಿಯಾನದ ೬ ಜನ ಕ್ಷಯ ರೋಗಿಗಳಿಗೆ ದತ್ತು ಪಡೆದ ನಂತರ ಪೌಷ್ಠಿಕ ಆಹಾರ ನೀಡಿ ಸುದ್ದಿಗಾರರೊಂದಿಗೆ ಮಾತ ನಾಡಿದ ಅವರು ಮಹಾತ್ಮಾ ಗಾಂಧಿಜೀಯವರು ಬಡವರ ದೀನರ ದುರ್ಬಲರ ರೋಗಿಗಳ ಸೇವೆಯೇ ದೇವರ ಸೇವೆ ಎಂದು ಸ್ವತ ತಾವೇ ಕುಷ್ಠರೋಗಿಗಳ ಸೇವೆ ಮಾಡಿದ್ದಾರೆ.

ಕೇಂದ್ರದ ಪ್ರಧಾನ ಮಂತ್ರಿಗಳು ೨೦೨೫ ರಷ್ಟರಲ್ಲಿಯೇ ಕ್ಷಯ ಮುಕ್ತ ದೇಶ ಮಾಡುವ ಸಂಕಲ್ಪ ಹೊಂದಿದ್ದಾರೆ. ಇದಕ್ಕೆ ದೇಶದ ಪ್ರತಿಯೋಬ್ಬ ನಾಗರೀಕರು ಸಹಕರಿಸಬೇಕು ಎಂದರು.