Saturday, 12th October 2024

Pralhad Joshi: ಖರ್ಗೆಯವರು ಆಯುರಾರೋಗ್ಯವಂತರಾಗಿ ವಿಕಸಿತ ಭಾರತಕ್ಕೆ ಸಾಕ್ಷಿಯಾಗಲಿ ಎಂದ ಜೋಶಿ

Pralhad Joshi

ನವದೆಹಲಿ: ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ (Mallikarjun Kharge) ಅವರು ಆಯುರಾರೋಗ್ಯವಂತರಾಗಿ “2047ರ ವಿಕಸಿತ ಭಾರತ”ಕ್ಕೆ ಸಾಕ್ಷಿಯಾಗಲಿ ಎಂದು ಕೇಂದ್ರ ಆಹಾರ ಮತ್ತು ಗ್ರಾಹಕ ವ್ಯವಹಾರಗಳ ಸಚಿವ ಪ್ರಲ್ಹಾದ್‌ ಜೋಶಿ (Pralhad Joshi) ಆಶಿಸಿದ್ದಾರೆ. ವಿರೋಧಿಯೇ ಆಗಲಿ, ವಿರೋಧ ಪಕ್ಷದವರೇ ಆಗಲಿ ಗೌರವಿಸುವುದು ನಮ್ಮ ಸಂಸ್ಕೃತಿ ಮತ್ತು ಬಿಜಿಪಿಯ (BJP) ಧ್ಯೇಯ-ಬದ್ಧತೆ ಎಂದಿರುವ ಜೋಶಿ, ದೇವರು ಮಲ್ಲಿಕಾರ್ಜುನ ಖರ್ಗೆ ಅವರಿಗೆ ಇನ್ನಷ್ಟು ಆಯುರಾರೋಗ್ಯ ನೀಡಿ 2047 ರ ವಿಕಸಿತ ಭಾರತದ ನಿರ್ಮಾಣಕ್ಕೆ ಸಾಕ್ಷೀಕರಿಸಲೆಂದು ಪ್ರಾರ್ಥಿಸುವೆ ಎಂದು ಹೇಳಿದ್ದಾರೆ.

ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಭಾಷಣದ ವೇಳೆ, “ಪ್ರಧಾನಿ ನರೇಂದ್ರ ಮೋದಿ ಅವರನ್ನು ಅಧಿಕಾರದಿಂದ ಕೆಳಗಿಳಿಸೋವರೆಗೆ ನಾನು ಸಾಯುವುದಿಲ್ಲ” ಎಂಬ ಹೇಳಿಕೆಗೆ ಸಚಿವ ಜೋಶಿ ಹೀಗೆ ಪ್ರತಿಕ್ರಿಯಿಸಿದ್ದಾರೆ.

ಈ ಸುದ್ದಿಯನ್ನೂ ಓದಿ | Small Savings Schemes : ಸಣ್ಣ ಉಳಿತಾಯದ ಬಡ್ಡಿ; ಸರ್ಕಾರದ ಹೊಸ ನಿರ್ಧಾರವೇನು?

ನರೇಂದ್ರ ಮೋದಿ ಅವರನ್ನು ಪ್ರಧಾನಮಂತ್ರಿ ಸ್ಥಾನದಿಂದ ಇಳಿಸೋವರೆಗೆ ನಾನು ಸಾಯುವುದಿಲ್ಲ ಎಂಬ ಖರ್ಗೆ ಅವರ ಮಾತು ನಿಜಕ್ಕೂ ಅಚ್ಚರಿ ಎನಿಸಿದೆ. ಒಂದು ಪಕ್ಷದ ವರಿಷ್ಠರಾಗಿ, ಹಿರಿಯರಾಗಿ ಹೀಗೆ ನುಡಿದದ್ದು ಶೋಭೆ ತರುವಂಥದ್ದಲ್ಲ ಎಂದು ಜೋಶಿ ಟಾಂಗ್ ಕೊಟ್ಟಿದ್ದಾರೆ.

ದ್ವೇಷದ ರಾಜಕಾರಣದ ರೀತಿ ಮಾತನಾಡಿರುವುದು ಸರಿಯಲ್ಲ

ಕಾಂಗ್ರೆಸ್ ಪಕ್ಷವನ್ನು, ಮುಖಂಡರನ್ನು, ಕಾರ್ಯಕರ್ತರನ್ನು ಸನ್ಮಾರ್ಗದಲ್ಲಿ ನಡೆಸುವ ಹೊಣೆ ಹೊತ್ತಿರುವ ಹಿರಿಯ ರಾಜಕಾರಣಿ ಮಲ್ಲಿಕಾರ್ಜುನ ಖರ್ಗೆ ಅವರೇ ಈ ರೀತಿ ದ್ವೇಷದ ರಾಜಕಾರಣದ ರೀತಿ ಮಾತನಾಡಿರುವುದು ಸರಿಯಲ್ಲ ಎಂದು ಪ್ರಲ್ಹಾದ್‌ ಜೋಶಿ ಆಕ್ಷೇಪಿಸಿದ್ದಾರೆ.

ಈ ಸುದ್ದಿಯನ್ನೂ ಓದಿ | Madhyantara Short Movie: ಮನಕ್ಕೆ ಮುದನೀಡುವ ರಾಷ್ಟ್ರಪ್ರಶಸ್ತಿ ಪುರಸ್ಕೃತ ಕಿರುಚಿತ್ರ ‘ಮಧ್ಯಂತರ’

ಸೌಜನ್ಯ ಮೆರೆದ ಮೋದಿ

ಖರ್ಗೆ ಅವರು ಹೀಗೆ ಮಾತನಾಡಿದರೂ ಪ್ರಧಾನಿ ನರೇಂದ್ರ ಮೋದಿಯವರು ಖರ್ಗೆ ಅಸ್ವಸ್ಥರಾದ ವಿಷಯ ತಿಳಿದು ದೂರವಾಣಿ ಕರೆ ಮಾಡಿ ಅವರ ಆರೋಗ್ಯದ ಬಗ್ಗೆ ವಿಚಾರಿಸಿ ಸೌಜನ್ಯ, ಹೃದಯ ವೈಶಾಲ್ಯತೆ ತೋರಿದರು. ಇದು ಬಿಜಿಪಿಯ ಬದ್ಧತೆ ಮತ್ತು ಶಿಸ್ತನ್ನು ಪ್ರತಿಬಿಂಬಿಸುತ್ತದೆ ಎಂದು ಕೇಂದ್ರ ಸಚಿವ ಪ್ರಲ್ಹಾದ್‌ ಜೋಶಿ ಪ್ರತಿಪಾದಿಸಿದ್ದಾರೆ.