Wednesday, 11th December 2024

Uttarakhand Bus Tragedy: ಉತ್ತರಾಖಂಡ ಬಸ್ ದುರಂತ; ಹಿಂದೂ ಯಾತ್ರಾರ್ಥಿಗಳ ಸಾವನ್ನು ಅಣಕಿಸಿದ ರೆಹಮಾನ್ ಅರೆಸ್ಟ್

Uttarakhand Bus Tragedy

ಉತ್ತರಾಖಂಡದ ಅಲ್ಮೋರಾದ ಮಾರ್ಚುಲಾ ಬಳಿಯ ಕುಪಿ ಗ್ರಾಮದಲ್ಲಿ ಇತ್ತೀಚೆಗೆ ಬಸ್ಅ ಅಪಘಾತದಲ್ಲಿ(Uttarakhand Bus Tragedy) 36 ಮಂದಿ ಹಿಂದೂ ಯಾತ್ರಾರ್ಥಿಗಳು ಮೃತಪಟ್ಟಿದ್ದರು. ಈ ಘಟನೆಯ ಬಗ್ಗೆ ಹಿಂದೂಗಳು ತೀವ್ರ ದುಃಖ ವ್ಯಕ್ತಪಡಿಸಿದ್ದರು. ಆದರೆ ಮೊಹಮ್ಮದ್ ಅಮೀರ್ ರೆಹಮಾನ್ ಎಂಬ ಯುವಕ ಮಾತ್ರ ಜನರ ಸಾವಿನ ಬಗ್ಗೆ ಸಂತಾಪ ಸೂಚಿಸುವ ಬದಲು ಅಣಕಿಸಿದ್ದಾನೆ. ಹೀಗಾಗಿ ಪೊಲೀಸರು ಆತನನ್ನು ಅರೆಸ್ಟ್ ಮಾಡಿದ್ದಾರೆ.

ರೆಹಮಾನ್ ಅಪಘಾತದ ಚಿತ್ರವನ್ನು ಫೇಸ್‍ಬುಕ್‍ನಲ್ಲಿ ಹಂಚಿಕೊಂಡು ಹಿಂದೂ ಸಾವನ್ನು ಅಣಕಿಸುತ್ತ  “ದೀಪಾವಳಿಯ ಶುಭಾಶಯಗಳು” ಎಂದು ಶೀರ್ಷಿಕೆ ನೀಡಿದ್ದಾನೆ. ಅದರ ಜೊತೆಗೆ ವಿವೇಕ್ ಒಬೆರಾಯ್ ಅಭಿನಯದ ‘ಹೋಮ್ ಡೆಲಿವರಿ’ ಚಿತ್ರದ ದೀಪಾವಳಿ ಹಾಡನ್ನು ಸಹ ಹಾಕಿದ್ದಾನೆ. ಈ ಪೋಸ್ಟ್ ಹಲವಾರು ಸ್ಥಳೀಯರು ಮತ್ತು ಹಿಂದೂ ಸಮುದಾಯದ ಜನರ ಆಕ್ರೋಶಕ್ಕೆ ಕಾರಣವಾಗಿದೆ. ಅವರು ರೆಹಮಾನ್ ವಿರುದ್ಧ ಸ್ಥಳೀಯ ಪೊಲೀಸ್ ಠಾಣೆಗೆ ದೂರು ನೀಡಿದ್ದು,  ಆರೋಪಿಯನ್ನು ಬಂಧಿಸಲು ಎಸ್‍ಪಿ ಲೋಕೇಶ್ವರ್ ಸಿಂಗ್ ಆದೇಶ ಹೊರಡಿಸಿದ್ದಾರೆ.

“ಭೀಕರ ಅಪಘಾತಗಳಲ್ಲಿ ಸುಮಾರು 36 ಜನರು ಪ್ರಾಣ ಕಳೆದುಕೊಂಡಿದ್ದಾರೆ. ಈ ಮಧ್ಯೆ, ಮೊಹಮ್ಮದ್ ರೆಹಮಾನ್ ಅಪಘಾತದ ಚಿತ್ರವನ್ನು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿ ಹಿಂದೂ ಯಾತ್ರಾರ್ಥಿಗಳ ಸಾವನ್ನು ‘ಹ್ಯಾಪಿ ದೀಪಾವಳಿ’ ಎಂದು ಶೀರ್ಷಿಕೆ ನೀಡುವ ಮೂಲಕ ಅಣಕಿಸಿದ್ದಾನೆ. ಈ ಘಟನೆ ಹಿಂದೂಗಳ  ಭಾವನೆಗಳಿಗೆ ನೋವುಂಟು ಮಾಡಿದೆ. ವರದಿಗಳ ಪ್ರಕಾರ, ಬಂಧಿತ ಆರೋಪಿ ಉತ್ತರಾಖಂಡದ ರಾಮ್‍ನಗರ ನಿವಾಸಿಯಾಗಿದ್ದು, ಇತ್ತೀಚೆಗೆ ಪೌಡಿ ಜಿಲ್ಲೆಯಲ್ಲಿ ವಾಸಿಸುತ್ತಿದ್ದ. ಸ್ಥಳೀಯರಲ್ಲದೆ, ಬಜರಂಗದಳ ಕೂಡ ಪೊಲೀಸರಿಗೆ ಪತ್ರ ಬರೆದು ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದೆ.

ಇದನ್ನೂ ಓದಿ:ಈ ದೇಶದಲ್ಲಿ ಹೆಂಗಸರನ್ನು ಕಂಡರೆ ಸಾಕು, ಗಂಡಸರು ಅಲ್ಲಿಂದ ಜಾಗ ಖಾಲಿ ಮಾಡುತ್ತಾರೆ!

ನವೆಂಬರ್ 4ರಂದು ಉತ್ತರಾಖಂಡದ ಮಾರ್ಚುಲಾ ಬಳಿಯ ಕುಪಿ ಗ್ರಾಮದಲ್ಲಿ ಬಸ್ ನಿಯಂತ್ರಣ ತಪ್ಪಿ ಕಮರಿಗೆ ಬಿದ್ದ ಪರಿಣಾಮ ಕನಿಷ್ಠ 36 ಜನರು ಮೃತಪಟ್ಟಿದ್ದರು. 27 ಜನರು ಗಾಯಗೊಂಡಿದ್ದರು. 63 ಪ್ರಯಾಣಿಕರನ್ನು ಹೊತ್ತ ಬಸ್ ನೈನಿದಂಡಾದ ಕಿರಾತ್‍ನಿಂದ ರಾಮನಗರಕ್ಕೆ ತೆರಳುತ್ತಿತ್ತು. ಅಪಘಾತವು ಎಷ್ಟು ತೀವ್ರವಾಗಿತ್ತೆಂದರೆ, ಬಸ್ ಬಿದ್ದ ರಭಸಕ್ಕೆ ಹಲವಾರು ಪ್ರಯಾಣಿಕರು ವಾಹನದಿಂದ ತುಂಬಾ ದೂರ ಎಗರಿ ಬಿದ್ದಿದ್ದರು.