Friday, 13th December 2024

ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಲಸಿಕಾ ಅಭಿಯಾನ

ಸುರಪುರ: ಕರೋನಾ ಸೋಂಕು ಇಡೀ ಮನುಕುಲ ವನ್ನು ಸಂಕಷ್ಟಕ್ಕೆ ಸಿಲುಕಿಸಿದ್ದು, ಸೋಂಕಿನಿಂದ ಮುಕ್ತರಾಗ ಬೇಕಾದರೆ ಪ್ರತಿಯೊಬ್ಬರು ಕಡ್ಡಾಯವಾಗಿ ಲಸಿಕೆ ಪಡೆದು ಕೊಳ್ಳಬೇಕು ಎಂದು ತಾಲೂಕು ಆರೋಗ್ಯ ಇಲಾಖೆ ಲಸಿಕಾಧಿಕಾರಿ ಎಂ. ವೈ. ಪಾಟೀಲ್ ಹೇಳಿದರು.

ಪಟ್ಟಣದ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ವಿದ್ಯಾರ್ಥಿಗಳು ಮತ್ತು ಸಿಬ್ಬಂದಿಗೆ ಹಮ್ಮಿಕೊಂಡಿದ್ದ ಕೋವಿಡ್ – 19 ಉಚಿತ ಲಸಿಕಾ ಅಭಿಯಾನ ಕಾರ್ಯಕ್ರಮ ದಲ್ಲಿ ಮಾತನಾಡಿದ ಅವರು, ಕೋವಿಡ್ ಲಸಿಕೆ ಬಗ್ಗೆ ಆತಂಕ ಪಡುವ ಅಗತ್ಯವಿಲ್ಲ. ಲಸಿಕೆ ಪಡೆಯುವುದರಿಂದ ಯಾವುದೇ ಅಡ್ಡ ಪರಿಣಾಮ ಬೀರುವುದಿಲ್ಲ. ಪ್ರತಿಯೊಬ್ಬರು ಲಸಿಕೆ ಪಡೆಯುವುದನ್ನು ತಮ್ಮ ಕರ್ತವ್ಯ ಎಂದು ಭಾವಿಸಬೇಕು. ಲಸಿಕಾ ಪಡೆದ ಬಳಿಕ ಮೈ ಮರೆಯದೆ ಸರ್ಕಾರದ ಮಾರ್ಗಸೂಚಿಗಳನ್ನು ಪಾಲಿಸ ಬೇಕೆಂದು ಎಂದು ಹೇಳಿದರು.

ಇದೇ ವೇಳೆ ಸಂಸ್ಥೆಯ ವಿದ್ಯಾರ್ಥಿಗಳು, ಸಿಬ್ಬಂದಿ ಸೇರಿದಂತೆ ಒಟ್ಟು 52 ಮಂದಿಗೆ ಲಸಿಕೆ ನೀಡಲಾಯಿತು. ಅಭಿಯಾನ ಕಾರ್ಯಕ್ರಮದಲ್ಲಿ ಆರೋಗ್ಯ ಇಲಾಖೆ ಸಿಬ್ಬಂದಿ ಮರಿಯಪ್ಪ, ಕಾಲೇಜಿನ ಪ್ರಾಂಶುಪಾಲ ಶ್ರೀಕಾಂತ್ ಜಿ.ಕೆ., ಉಪನ್ಯಾಸಕರಾದ ರಾಮನ ಗೌಡ, ಸಿದ್ದರಾಮ ಪಾಟೀಲ್, ಶ್ರೀಶೈಲ್ ಹಿರೇಮಠ್, ಡಾ. ಸಿದ್ದರಾಮ, ಎಫ್ ಡಿಎ ನಾರಾಯಣರಾವ್, ಸಿಬ್ಬಂದಿ ಮತ್ತಿತರರು ಇದ್ದರು.