Friday, 13th December 2024

ಇಂದು ವಿಜಯನಗರ ಜಿಲ್ಲೆಗೆ ಅಧಿಕೃತ ಚಾಲನೆ

ವಿಜಯನಗರ : ಇದುವರೆಗೆ ಬಳ್ಳಾರಿ ಜಿಲ್ಲೆಯೊಂದಿಗೆ ಸೇರಿಕೊಂಡಿದ್ದ ವಿಜಯನಗರವು, ಶನಿವಾರ ನೂತನ ಜಿಲ್ಲೆಯಾಗಿ ಉದಯ ವಾಗಲಿದೆ. ಈ ಮೂಲಕ 6 ತಾಲೂಕುಗಳ ರಾಜ್ಯದ 31ನೇ ಜಿಲ್ಲೆಯಾಗಿ ವಿಜಯನಗರ ಜಿಲ್ಲೆಗೆ ಅಧಿಕೃತವಾಗಿ ಚಾಲನೆ ಸಿಗಲಿದೆ.

ಅದ್ದೂರಿಯಾಗಿ ಆಯೋಜಿಸಿರುವ ಕಾರ್ಯಕ್ರಮದ ಬೃಹತ್ ವೇದಿಕೆಯಲ್ಲಿ, ಸಂಜೆ 6 ಗಂಟೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಯಾಯಿ ಅವರಿಂದ, ನೂತನ ಜಿಲ್ಲೆಗೆ ಚಾಲನೆ ಸಿಗಲಿದೆ. ಈ ಕಾರ್ಯಕ್ರಮದಲ್ಲಿ ಮಾಜಿ ಸಿಎಂ ಯಡಿಯೂರಪ್ಪ ಸೇರಿದಂತೆ ಹಲವು ಸಚಿವರು, ಗಣ್ಯರು ಭಾಗಿಯಾಗಲಿದ್ದಾರೆ.

80ಕ್ಕೂ ಹೆಚ್ಚು ಕಲಾತಂಡಗಳಿಂದ ವಿಜಯನಗರ ಜಿಲ್ಲೆ ಉದಯಕ್ಕೂ ಮುನ್ನಾ ವಡಕರಾಯ ದೇವಸ್ಥಾನದಿಂದ ರಥಬೀದಿಯಲ್ಲಿ ವಿಜಯನಗರ ವೈಭವದ ಮೆರವಣಿಗೆ ಸಾಗಲಿದೆ. ನೂತನ ಜಿಲ್ಲೆಯಾಗಿ ಉದಯವಾಗುತ್ತಿರುವ ಈ ಸಂದರ್ಭದಲ್ಲಿ ವಿದ್ಯುತ್ ದೀಪಗಳಿಂದ ಅಲಂಕಾರಗೊಂಡ ಹೊಸಪೇಟೆ ನಗರ, ಕಂಗೊಳಿಸುತ್ತಿದೆ.