Saturday, 30th November 2024

Viral News: ಅರಿಶಿನ ಶಾಸ್ತ್ರದಂದು ಕುರ್ತಾವನ್ನು ಖರೀದಿಸಲು ಮರೆತ ಮದುಮಗ; ಆಮೇಲೆ ಆಗಿದ್ದೇನು?

Viral News

ಬೆಂಗಳೂರು: ಮರೆವು ಎನ್ನುವುದು ಈಗ ಯಾರನ್ನೂ ಬಿಟ್ಟಿಲ್ಲ. ಈ ಮರೆವಿನಿಂದ ಪೇಚಿಗೆ ಸಿಲುಕಿಕೊಂಡವರು ಸಾಕಷ್ಟು ಮಂದಿ ಇದ್ದಾರೆ. ಇದೇ ರೀತಿಯ ಘಟನೆಯೊಂದು ಬೆಂಗಳೂರಿನಲ್ಲಿ ನಡೆದಿದ್ದು, ಮದುಮಗ ಒಬ್ಬರು ಪೇಚಿಗೆ ಸಿಲುಕಿದ್ದಾರೆ. ಆಗಿದ್ದೇನೆಂದರೆ ಬೆಂಗಳೂರಿನ ಈ ವರ ಮದುವೆ ಆಚರಣೆಯ ಅರಿಶಿನ ಶಾಸ್ತ್ರದ  ದಿನದಂದು ಹಳದಿ ಬಣ್ಣದ ಉಡುಪನ್ನು ಧರಿಸಲು ಮರೆತಿದ್ದರು. ಈ ವಿಚಾರವನ್ನು ಖುದ್ದು ಅವರೇ ಸೋಶಿಯಲ್ ಮಿಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ. ಇದು ಸಿಕ್ಕಾಪಟ್ಟೆ ವೈರಲ್‌(Viral News) ಆಗಿದೆ.

ರಾಮನಾಥ್ ಶೆಣೈ ಅವರು ಅರಿಶಿನಶಾಸ್ತ್ರದಂದು ಧರಿಸುವ ಹಳದಿ ಬಣ್ಣದ ಖರ್ತಾವನ್ನು ಖರೀದಿಸಲು ಮರೆತಿದ್ದಾರಂತೆ. ಮದುವೆಯ ಪೂರ್ವ ಆಚರಣೆಯ ಭಾಗವಾದ ಈ ವಿಶೇಷದಂದು ಅವರು ಈ ತಪ್ಪನ್ನು ಮಾಡಿರುವುದಾಗಿ ಒಪ್ಪಿಕೊಂಡಿದ್ದಾರೆ.  “ಅರಿಶಿನ ಶಾಸ್ತ್ರದ ಆಚರಣೆಯ ವೇಳೆ ಹಳದಿ ಬಣ್ಣದ ಕುರ್ತಾವನ್ನು ಖರೀದಿಸಲು ಮರೆತಿದ್ದೇನೆ ಎಂದು ತಿಳಿಯಿತು. ಇದರಿಂದ ಗೊಂದಲದ ವಾತಾವರಣ ಸೃಷ್ಟಿಯಾಗಿದ್ದು, ಕುಟುಂಬದವರು ಸಿಕ್ಕಾಪಟ್ಟೆ ಕೋಪಗೊಂಡಿದ್ದರು” ಎಂದು ಅವರು ಬರೆದಿದ್ದಾರೆ.

ಕುರ್ತಾ ಇಲ್ಲ ಎಂದು ತಿಳಿದ ಅವರು ಅರೆಕ್ಷಣದಲ್ಲಿಯೇ ಹೊಸ ಕುರ್ತಾವನ್ನು ಖರೀದಿಸಿದ್ದಾರಂತೆ. ಅರೆ… ಇದು ಹೇಗೆ ಸಾಧ್ಯವಾಯಿತು ಎಂಬ ಕುತೂಹಲ ನಿಮಗೂ ಇದೆಯಾ? ಕುರ್ತಾ ಇಲ್ಲದ್ದು ನೋಡಿ ಅವರು ಅರೆಕ್ಷಣ ಕೂಡ ತಡಮಾಡದೇ ಸ್ವಿಗ್ಗಿ ಇನ್‌ಸ್ಟಾಮಾರ್ಟ್‌ನಲ್ಲಿ  ಹೊಸ ಹಳದಿ ಕುರ್ತಾವನ್ನು ಆರ್ಡರ್ ಮಾಡಿದ್ದಾರಂತೆ. ಅದನ್ನು ಹತ್ತು ನಿಮಿಷಗಳಿಗಿಂತ ಕಡಿಮೆ ಅವಧಿಯಲ್ಲಿ ಸ್ವಿಗ್ಗಿ ಅವರು ಇವರ ಮನೆ ಬಾಗಿಲಿಗೆ ತಲುಪಿಸಿದ್ದಾರೆಂದು ಅವರು ಪೋಸ್ಟ್‌ನಲ್ಲಿ  ಬಹಿರಂಗಪಡಿಸಿದ್ದಾರೆ.

ಇದನ್ನೂ ಓದಿ:ಸಪ್ನಾ ಚೌಧರಿ ‘ಥೆಕೆ ಆಲಿ ಗಲಿ’ ಮೋಹಕ ನೃತ್ಯಕ್ಕೆ ಅಭಿಮಾನಿಗಳು ಫಿದಾ! ವಿಡಿಯೊ ಇದೆ

ಸ್ವಿಗ್ಗಿ ಇನ್‌ಸ್ಟಾಮಾರ್ಟ್‌ನಲ್ಲಿ ಕೂಡಲೇ ಡೆಲಿವರಿ ಮಾಡಿದಕ್ಕೆ ಅವರು ಖುಷಿಯಾಗಿದ್ದಾರೆ. ಸ್ವಿಗ್ಗಿ ಇನ್‌ಸ್ಟಾಮಾರ್ಟ್‌ ಅನ್ನು ಹೊಗಳುತ್ತಾ ತಮ್ಮ ಅರಿಶಿನ ಶಾಸ್ತ್ರದ ಹಳದಿ ಕುರ್ತಾದೊಂದಿಗೆ ಫೋಟೋ ಪೋಸ್ಟ್ ಮಾಡಿದ್ದಾರೆ. ಈ ಪೋಸ್ಟ್‌ನ ಶೀರ್ಷಿಕೆಯಲ್ಲಿ “ನನ್ನ ಮದುವೆಗೆ 36 ಗಂಟೆಗಳು ಬಾಕಿ ಇದ್ದವು ಮತ್ತು ಸ್ವಿಗ್ಗಿ ಇನ್‌ಸ್ಟಾಮಾರ್ಟ್ ಸಹಾಯದಿಂದ ನಾನು ಅರಿಶಿನ ಶಾಸ್ತ್ರದ ಸಮಾರಂಭಕ್ಕೆ ಕೂರಲು ಸಾಧ್ಯವಾಯಿತು. ಸ್ವಿಗ್ಗಿ ಇನ್‌ಸ್ಟಾಮಾರ್ಟ್ ಕೇವಲ 8 ನಿಮಿಷಗಳಲ್ಲಿ ಮಾನ್ಯವರ್ ಕುರ್ತಾವನ್ನು ನನಗೆ ತಂದುಕೊಟ್ಟಿತು ಮತ್ತು ನನ್ನ ಸಮಯವನ್ನು ಉಳಿಸಿತು. ನಂತರ 10 ನಿಮಿಷಗಳಲ್ಲಿಯೇ ನಾನು ಅದನ್ನು ಧರಿಸಿಕೊಂಡು ಈ ಸಮಾರಂಭದಲ್ಲಿ ಕೂರಲು ಸಾಧ್ಯವಾಯಿತು,” ಎಂದು ಬರೆದುಕೊಂಡಿದ್ದಾರೆ.