ಪಾವಗಡ: ವಿಶ್ವ ಕುಂಚಿಟಿಗ ಯುವಶಕ್ತಿ ಕಾರ್ಯಕಾರಣಿ ಸಭೆಯಲ್ಲಿ ನೂತನ ಪದಾಧಿಕಾರಿಗಳನ್ನು ನೇಮಕವನ್ನು ಭಾನುವಾರ ಕರೆಕ್ಯಾತನಹಳ್ಳಿಯ ಸ್ವಾರಮ್ಮ ದೇವಸ್ಥಾನದ ಅವರಣದಲ್ಲಿ ಹಮ್ಮಿಕೊಂಡಿದ್ದ ಸಭೆಯಲ್ಲಿ ಮಾಡಲಾಯಿತ್ತು ಎಂದು ಸಂಸ್ಥಾಪಕ ರಾಷ್ಟ್ರೀಯ ಅಧ್ಯಕ್ಷರು ರಾದ ಶಾಂತ್ ರವರು ಪದಾಧಿಕಾರಿಗಳನ್ನು ನೇಮಕ ಮಾಡಿ ಮಾತನಾಡಿದ ಅವರು ಕುಲದಲ್ಲಿ ಕುಂಚಿಟಿಗನೇ ಸಾರ್ವ ಭೌಮ ಸರ್ಕಾರವೇ ನಮ್ಮ ಸಮುದಾಯದ ಅಂಕಿಅಂಶಗಳು ಬಿಡುಗಡೆ ಮಾಡಲು ತಬಿಬ್ ಆಗುತ್ತಿದೆ. ಕುಂಚಿಟಿಗದಲ್ಲಿ ಹಲವು ಕುಲಗಳು ಬರುವುದರಿಂದಲೇ ಕುಂಚಿಟಿಗ ಎಂದು ಕರೆಯುತ್ತಾರೆ.
ಸಮುದಾಯ ಹಿಂದುಳಿದಿದೆ ಬರುವ ಹೊಸ ಪಿಳಿಗೆಗಾದರು ಉತ್ತಮ ಶಿಕ್ಷಕ . ನಿರುದ್ಯೋಗ ಯುವಕ ರಿಗೆ ಉದ್ಯೋಗ ಸೃಷ್ಟಿಸುವುದು. ಬಡತನ ಸನ್ ಆರೈಕೆಯಲ್ಲಿ ಇರುವಂತಹ ಜನರಿಗೆ ಆರ್ಥಿಕವಾಗಿ ಸಬಲೀಕರಣ ಮಾಡುವುದು ಮಾಡುವಂತ ಕೆಲಸ ಮಾಡುವುದು ಜಮಾಜ ಹೇಳಿಗೆಗೆ ದುಡಿಯುವ ಕೆಲಸ ಮಾಡುವುದೆ ನಮ್ಮ ಉದ್ದೇಶ ವಾಗಿದೆ ಎಂದರು.
ಪಾವಗಡ ತಾಲ್ಲೂಕು ಅಧ್ಯಕ್ಷರನ್ನಾಗಿ ನರಸೇಗೌಡ ಮದ್ದೆ ಮತ್ತು ಉಪಾಧ್ಯಕ್ಷರಾಗಿ ಸುರೇಶ್ ಜಿ ಅವರನ್ನು ರಾಷ್ಟ್ರೀಯ ಘಟಕದ ಅಧ್ಯಕ್ಷರಾದ ಶಾಂತ್ ರವರು ಹಾಗೂ ಕಾರ್ಯಕಾರಿಣಿ ಸಭೆಯಲ್ಲಿ ನಿರ್ಧಾರ ಮಾಡಿ ಆಯ್ಕೆ ಮಾಡಲಾಗಿದೆ. ನೂತನ ತಾಲ್ಲೂಕಿನ ಅಧ್ಯಕ್ಷ ನರಸೇಗೌಡ ಮದ್ಯೆ ಮತನಾಡಿ ನನ್ನಗೆ ಅಧ್ಯಕ್ಷ ಸ್ನಾನಕ್ಕೆ ಆಯ್ಕೆ ಮಾಡಿದ ಕುಲ ಕುಲಬಾಂಧವರಿಗೆ ಧನ್ಯವಾದಗಳು. ಕುಂಚಿಟಿಗ ಸಮುದಾಯ ಅಭಿವೃದ್ಧಿ ಗೊಳಿಸಲು ಹೆಚ್ಚು ಕೆಲಸ ಮಾಡುತ್ತೇನೆ. ತಾಲ್ಲೂಕಿನ ಪ್ರತಿಯೊಂದು ಗ್ರಾಮದಲ್ಲಿ ಇರುವ ಸಮುದಾಯದ ಜನರೊಂದಿಗೆ ಬೆರೆತ್ತು ಸಂಘಟಿಸುತ್ತೇನೆ ಎಂದರು.
ತಾಲ್ಲೂಕಿನಲ್ಲಿ ಕುಂಚಿಟಿಗ ಸಮುದಾಯದಿಂದ ಗ್ರಾಮ ಪಂಚಾಯಿತಿಗೆ ಸ್ಪರ್ಧಿಸಿದ್ದ ಸದಸ್ಯರುಗಳನ್ನು ಹಾಗೂ ಸರಕಾರಿ ನೌಕರಿಯಲ್ಲಿರುವ ಸಮುದಾಯದ ಅಧಿಕಾರಿಗಳನ್ನು ಸನ್ಮಾನಿಸುವ ಕಾರ್ಯಕ್ರಮದ ಪೂರ್ವಭಾವಿ ಸಭೆಯನ್ನು ಆಗಸ್ಟ್ 22 ರಂದು ನಿಡಗಲ್ ಐಬಿಯಲ್ಲಿ ಸೇರಿ ಸಭೆ ನಡೆಸಿ ತೀರ್ಮಾನಿಸ ಲಾಗುವುದು ಎಂದರು.
ಪಾವಗಡ ತಾಲ್ಲೂಕಿನಲ್ಲಿ ಸುಮಾರು 25000 ಕುಂಚಿಟಿಗ ಜನರು ವಾಸಿಸುತ್ತಿರುವ ಪಾವಗಡ ತಾಲ್ಲೂಕಿನಲ್ಲಿ ಒಂದು ಬಲಿಷ್ಠ ಕುಂಚಿಟಿಗ ಸಂಘ ಕಟ್ಟುವ ಉದ್ದೇಶ ದಿಂದ ವಿಶ್ವ ಕುಂಚಿಟಿಗ ಯುವಶಕ್ತಿ ತೀರ್ಮಾನಿಸಿದೆ ಎಂದರು.
ಈ ಸಂದರ್ಭದಲ್ಲಿ ಮಾತನಾಡಿದ ರಾಷ್ಟ್ರೀಯ ಅಧ್ಯಕ್ಷರು ಮುಂದಿನ ಕೆಲವೇ ದಿನಗಳಲ್ಲಿ ಕುಂಚಿಟಿಗರ ಜನಗಣತಿ ಆನ್ಲೈನ್ ಅಪ್ಲಿಕೇಶನ್ ಬಿಡುಗಡೆ ಮಾಡಲಾಗು ತ್ತಿದೆ ಎಂದು ತಿಳಿಸಿದರು ಹಾಗೂ ಸಮುದಾಯಕ್ಕೆ ಅನುಕೂಲವಾಗುವಂತೆ VKU ನ್ಯೂಸ್ ಚಾನೆಲ್ ಈಗಾಗಲೇ ಪ್ರಾಯೋಗಿಕವಾಗಿ ಕಾರ್ಯನಿರ್ವಹಿಸುತ್ತಿದ್ದು ಅಧಿಕೃತವಾಗಿ ಬಿಡುಗಡೆ ಮಾಡಲಾಗುವುದು ಹಾಗೂ ಸಮುದಾಯದ ಮದುವೆ ಕಾರ್ಯಗಳಿಗೆ ಮತ್ತು ಕುಲಗಳ ಹೊಂದಾಣಿಕೆಗೆ ಅನುಕೂಲವಾಗಲೆಂದು ಈಗಾಗಲೇ Vishwaa kula app ಅನ್ನು ಗೂಗಲ್ ಪ್ಲೇ ಸ್ಟೋರಲ್ಲಿ ಬಿಡುಗಡೆ ಮಾಡಲಾಗಿದೆ ಎಂದು ತಿಳಿಸಿದರು. ಸಭೆಯಲ್ಲಿ ನೂರಾರು ಕುಂಚಿಟಿಗ ಸಮುದಾಯ ಹಿರಿಯರು. ಯುವಕರು ಸೇರಿದ್ದರು.