Thursday, 3rd October 2024

Washroom video case: ಕಾಲೇಜಿನ ಲೇಡಿಸ್ ಟಾಯ್ಲೆಟ್‌ನಲ್ಲಿ ವಿಡಿಯೊ ಮಾಡುತ್ತಿದ್ದ ಯುವಕನ ಬಂಧನ; ಮೊಬೈಲ್‌ನಲ್ಲಿ 8 ಸಾವಿರ ವಿಡಿಯೊ!

Washroom video case

ಬೆಂಗಳೂರು: ನಗರದ ಖಾಸಗಿ ಕಾಲೇಜಿನ ಮಹಿಳೆಯರ ಶೌಚಾಲಯದಲ್ಲಿ ಮೊಬೈಲ್ ಇಟ್ಟು ವಿಡಿಯೊ ಚಿತ್ರೀಕರಣ ಮಾಡಿದ ಆರೋಪದಲ್ಲಿ ವಿದ್ಯಾರ್ಥಿಯೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ. ಲೇಡಿಸ್ ಟಾಯ್ಲೆಟ್‌ನಲ್ಲಿ ಅದೇ ಕಾಲೇಜಿನ ವಿದ್ಯಾರ್ಥಿ ವಿಡಿಯೊ ಚಿತ್ರೀಕರಣ ಮಾಡುತ್ತಿದ್ದ. ರೆಡ್‌ ಹ್ಯಾಂಡ್‌ ಆಗಿ ಸಿಕ್ಕಿಬಿದ್ದ ಹಿನ್ನೆಲೆಯಲ್ಲಿ ಆತನ ಬಂಧನಕ್ಕೆ ಆಗ್ರಹಿಸಿ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದ್ದರಿಂದ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ.

ಕುಶಾಲ್ ಎಂಬ ವಿದ್ಯಾರ್ಥಿ ಬಂಧಿತ ಆರೋಪಿ. ಮೈಸೂರು ರಸ್ತೆಯ ಖಾಸಗಿ ಕಾಲೇಜಿನಲ್ಲಿ ಘಟನೆ ನಡೆದಿದ್ದು, ಶೌಚಾಲಯದಲ್ಲಿ ಕ್ಯಾಮೆರಾ ಇರುವುದನ್ನು ವಿದ್ಯಾರ್ಥಿನಿಯೊಬ್ಬಳು ಗಮನಿಸಿ, ಗಾಬರಿಗೊಂಡು ಹೊರಗೆ ಓಡಿ ಬಂದಿದ್ದಾಳೆ. ಈ ವೇಳೆ ಆರೋಪಿ ಕುಶಾಲ್‌ನನ್ನು ವಿದ್ಯಾರ್ಥಿಗಳು ರೆಡ್‌ ಹ್ಯಾಂಡ್‌ ಆಗಿ ಹಿಡಿದಿದ್ದಾರೆ. ಬಳಿಕ ಆರೋಪಿ ಬಂಧನಕ್ಕೆ ಆಗ್ರಹಿಸಿ ಕಾಲೇಜಿನ ಆವರಣದಲ್ಲಿ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದ್ದಾರೆ.

ಪ್ರತಿಭಟನೆ ತೀವ್ರಗೊಂಡ ಹಿನ್ನೆಲೆಯಲ್ಲಿ ಕುಂಬಳಗೂಡು ಪೊಲೀಸರು ಸ್ಥಳಕ್ಕೆ ತೆರಳಿ ಪರಿಸ್ಥಿತಿ ನಿಯಂತ್ರಿಸುವ ಪ್ರಯತ್ನ ಮಾಡಿದರು. ಶೌಚಾಲಯದಲ್ಲಿ ಸಿಸಿಟಿವಿ ಮಾದರಿಯ ಕ್ಯಾಮೆರಾ ಇಡಲಾಗಿತ್ತು ಎನ್ನಲಾಗಿದ್ದು, ಆರೋಪಿಯು ಅದೇ ಕಾಲೇಜಿನ ಕಂಪ್ಯೂಟರ್ ಸೈನ್ಸ್ ವಿಭಾಗದ ವಿದ್ಯಾರ್ಥಿಯಾಗಿದ್ದಾನೆ.

ಇನ್ನು ಬಂಧನವಾಗಿರುವ ವಿದ್ಯಾರ್ಥಿಯ ಮೊಬೈಲ್‌ನಲ್ಲಿ ಸುಮಾರು 8 ಸಾವಿರ ವಿಡಿಯೊ ಕ್ಲಿಪ್‌ಗಳಿವೆ ಎನ್ನಲಾಗಿದೆ. ಈತ ಹಲವು ತಿಂಗಳಿಂದ ವಿಡಿಯೋ ರೆಕಾರ್ಡ್ ಮಾಡುತ್ತಿದ್ದ ಎನ್ನಲಾಗಿದೆ. ಘಟನೆ ಹಿನ್ನೆಲೆಯಲ್ಲಿ ವಿದ್ಯಾರ್ಥಿನಿಯರು ಆತಂಕದಲ್ಲಿದ್ದು, ಪೋಷಕರಿಗೂ ಮಾಹಿತಿ ನೀಡಿದ್ದಾರೆ.

ಈ ಸುದ್ದಿಯನ್ನೂ ಓದಿ | CN Ashwathanarayana: ನಾಗಮಂಗಲದಲ್ಲಿ ರಾಜಕೀಯ, ತುಷ್ಟೀಕರಣದಿಂದ ಗಲಭೆ: ಡಾ. ಅಶ್ವತ್ಥನಾರಾಯಣ್

ಬಿಎಂಟಿಸಿ ಬಸ್ ಚಲಿಸುತ್ತಿರುವಾಗಲೇ ಚಾಲಕನಿಗೆ ಹೃದಯಾಘಾತ, 45 ಜನ ಪಾರು!

viral news bmtc bus

ಬೆಂಗಳೂರು : ಬಿಎಂಟಿಸಿ ಬಸ್ (BMTC bus) ಚಾಲನೆ ಮಾಡುತ್ತಿರುವಾಗಲೇ ಬಿಎಂಟಿಸಿ ಚಾಲಕನಿಗೆ ಏಕಾಏಕಿ ಎದೆನೋವು (Heart Attack) ಕಾಣಿಸಿಕೊಂಡಿದ್ದು, ಅಪಾಯದ ಅಂಚಿನಲ್ಲಿದ್ದ ಪ್ರಯಾಣಿಕರು ಹಾಗೂ ಚಾಲಕನನ್ನು ಸಂಚಾರಿ ಪೊಲೀಸರು (Viral news) ರಕ್ಷಿಸಿದ್ದಾರೆ. ಸಂಚಾರಿ ಪೊಲೀಸರ ಸಮಯ ಪ್ರಜ್ಞೆಯಿಂದ ಚಾಲಕ ಸೇರಿದಂತೆ 45 ಜನರ ಜೀವ ಉಳಿದಿದೆ.

ಗುರುವಾರ ಮಧ್ಯಾಹ್ನ ಬೆಂಗಳೂರಿನ ಶಾಂತಿನಗರ ಡಬಲ್ ರೋಡ್ ಬಳಿ ಘಟನೆ ನಡೆದಿದೆ. ಕೆಎ 51 ಎಜೆ 6905 ನಂಬರ್ ಬಸ್ ಡ್ರೈವರ್ ದಿನೇಶ್ ಅವರಿಗೆ ಚಾಲನೆ ಮಾಡುತ್ತಿರುವಾಗಲೇ ಹೃದಯಘಾತ ಸಂಭವಿಸಿದೆ. ಬಸ್ ನಿಧಾನಕ್ಕೆ ಚಲಿಸುತ್ತಿರುವುದನ್ನು ಗಮನಿಸಿದ ಸಂಚಾರಿ ಪೊಲೀಸರು ಕೂಡಲೇ ಧಾವಿಸಿ ಬಸ್ ಚಾಲಕನನ್ನು ರಕ್ಷಿಸಿದ್ದಾರೆ.

ಇದನ್ನೂ ಓದಿ: ಹೆದ್ದಾರಿಯಲ್ಲಿ ಸತ್ತ ನಾಯಿಯನ್ನು ಪಕ್ಕಕ್ಕೆ ಇಡುವ ವೇಳೆ ಅಪಘಾತ, ಓರ್ವ ಸಾವು, ಮತ್ತೊರ್ವನ ಸ್ಥಿತಿ ಗಂಭೀರ

ಹಲಸೂರಿನ ಟ್ರಾಫಿಕ್ ASI ರಘು ಹಾಗೂ ಕಾನ್ಸ್ಟೇಬಲ್ ಅವರ ಸಮಯ ಪ್ರಜ್ಞೆಯಿಂದ 45 ಜನರ ಪ್ರಾಣ ಉಳಿದಿದೆ. ಬಸ್‌ನಲ್ಲಿ ಸುಮಾರು 45 ಜನ ಪ್ರಯಾಣಿಕರಿದ್ದರು. ಸಂಚಾರಿ ಪೊಲೀಸರ ಈ ಸಮಯ ಪ್ರಜ್ಞೆಯಿಂದ ಅದೃಷ್ಟವಶಾತ್ ಯಾವುದೇ ಪ್ರಾಣ ಹಾನಿ ಸಂಭವಿಸದೆ 45 ಜನರ ಜೀವ ಉಳಿದಿದೆ.