Friday, 13th December 2024

ವಕೀಲರ ಸಂಘದಿಂದ ನೀರಿನ ಅರವಟ್ಟಿಗೆ ಮಾಡಿದ್ದು ಶ್ಲಾಘನೀಯ ಕಾರ್ಯ: ವಿಜಯಕುಮಾರ್ ಎಸ್.ಹಿರೇಮಠ

ಮಾನವಿ : ತಾಲೂಕಿನ ವಕೀಲರ ಸಂಘದಿಂದ ಬೇಸಿಗೆ ಕಾಲದ ಪ್ರಯುಕ್ತ ಸಾರ್ವಜನಿಕರಿಗೆ ಹಾಗೂ ಕಕ್ಷಿದಾರರಿಗೆ ಅನುಕೂಲ ವಾಗಲಿ ಸುಡು ಬಿಸಿಲಿನಲ್ಲಿ ನೀರಿನ ದಾಹ ತಣಿಸಿಕೊಳ್ಳುವ ಉದ್ದೇಶದಿಂದ ನೀರಿನ ಅರವಟ್ಟಿಗೆ ಮಾಡಿದ್ದು ವಕೀಲರ ಸಂಘದ ಶ್ಲಾಘನೀಯ ಕಾರ್ಯವಾಗಿದೆ ಎಂದು ಮಾನ್ವಿ ನ್ಯಾಯಧೀಶ ವಿಜಯಕುಮಾರ್ ಎಸ್.ಹಿರೇಮಠ ಹೇಳಿದರು.

ಪಟ್ಟಣದ ಕೋರ್ಟ್ ಆವರಣದ ಮುಂಭಾಗದಲ್ಲಿ ವಕೀಲರ ಸಂಘದ ಅಧ್ಯಕ್ಷ ಮಲ್ಲಿಕಾರ್ಜುನ ಪಾಟೀಲ ಹಾಗೂ ಕಾರ್ಯದರ್ಶಿ ರವಿಕುಮಾರ್ ಪಾಟೀಲ ಮತ್ತು ಪದಾಧಿಕಾರಿಗಳ ಸಹಯೋಗದೊಂದಿಗೆ ನೂತನವಾಗಿ ಆರಂಭವಾದ ಶುದ್ದ ಕುಡಿಯುವ ನೀರಿನ ಅರವಟ್ಟಿಗೆಯನ್ನು ಉದ್ಘಾಟನೆ ಮಾಡಿ ಮಾತಾನಾಡಿದ ನ್ಯಾಯದೀಶರು ವಕೀಲರ ಸಂಘದಿಂದ ಸಾರ್ವಜನಿಕರಿಗೆ ಹಾಗೂ ಕಕ್ಷಿದಾರರಿಗೆ ಅನುಕೂಲವಾಗಲಿ ಎನ್ನುವ ಸೇವಾ ಮನೋಭಾವದ ಗುಣವನ್ನು ಶ್ಲಾಘಿಸಿದರು.

ನಂತರ ಅಧ್ಯಕ್ಷ ಮಲ್ಲಿಕಾರ್ಜುನ ಪಾಟೀಲ, ಕಾರ್ಯದರ್ಶಿ ರವಿಕುಮಾರ್ ಪಾಟೀಲ ಮಾತನಾಡಿ, ವಕೀಲರ ಸಂಘದಿಂದ ಕುಡಿಯುವ ನೀರಿನ ಅರವಟ್ಟಿಗೆ ಮಾಡಿ ಸಾರ್ವಜನಿಕ ಸೇವೆಯನ್ನು ಮಾಡುವ ಉದ್ದೇಶದಿಂದ ಆರಂಭ ಮಾಡಲಾಗಿದೆ ಇದಕ್ಕೆ ಸಹಕಾರಿದ ಎಲ್ಲಾ ವಕೀಲರಿಗೆ ಅಭಿನಂದನೆಗಳು ಎಂದರು. ಉದ್ಘಾಟನೆ ದಿನವಾದರಿಂದ ಸಂಪೂರ್ಣವಾಗಿ ಇವತ್ತು ಒಂದು ದಿನ ನೀರಿನ ಜೊತೆಗೆ ಮಜ್ಜಿಗೆಯನ್ನು ಕೂಡ ನೀಡಲಾಗುತ್ತದೆ ಎಂದರು.

ಈ ಸಂದರ್ಭದಲ್ಲಿ ಹಿರಿಯ ವಕೀಲರಾದ ಎ ಬಿ ಉಪ್ಪಳಮಠ, ಗುಮ್ಮ ಬಸವರಾಜ, ಸರ್ಕಾರಿ ಅಭಿಯೋಜಕರಾದ ಅರ್ಚನಾ ಯಾದವ್, ಹನುಮಂತಪ್ಪ ಮೂಸ್ಟೂರು, ಶ್ಯಾಮ್ ಸುಂದರ್ ನಾಯಕ, ಸೈಯಾದ್ ಯಾದುಲ್ಲಾ ಹುಸೇನಿ ಮತವಾಲೆ, ಲಕ್ಷ್ಮೀ ದೇವಿ ನಾಯಕ, ಧೂಮಣ್ಣ ನಾಯಕ, ಅಶೋಕ ಮೂಸ್ಟೂರು, ಮನೋಹರ ವಿಶ್ವಕರ್ಮ, ಶರಣಬಸವ ಹರವಿ, ವಿಶ್ವನಾಥ ಮೂಸ್ಟೂರು, ವಿರೂಪಾಕ್ಷಿ, ಚನ್ನಬಸವ ಬಲ್ಲಟಿಗಿ, ಚಂದ್ರಶೇಖರ ಮದ್ಲಾಪೂರ. ಯಲ್ಲಪ್ಪ ನಾಯಕ, ಉರುಕುಂದ ಜಗ್ಲಿ, ಯಲ್ಲಪ್ಪ ಬಾದರದಿನ್ನಿ, ಸಿದ್ದಪ್ಪ.ದತ್ತಾತ್ರೇಯ. ಚಂದ್ರಕಲಾ.ವಿಜಯಲಕ್ಷ್ಮಿ ಹೊಸಮನಿ, ಗುಂಡಮ್ಮ ಮೇಟಿ, ಇಂದಿರಾ ಸುಹಾಸಿನಿ, ಝರೀನಾ ಸೇರಿದಂತೆ ಅನೇಕ ಹಿರಿಯ ಕಿರಿಯ ಮಹಿಳಾ ವಕೀಲರು ಉಪಸ್ಥಿತರಿದ್ದರು.