Thursday, 3rd October 2024

Water Supply Cut: ಗಮನಿಸಿ, ಬೆಂಗಳೂರಿನ ಈ ಪ್ರದೇಶಗಳಲ್ಲಿ ಸೆ.21ರಂದು ಕಾವೇರಿ ನೀರು ಪೂರೈಕೆಯಾಗದು!

Water Supply Cut

ಬೆಂಗಳೂರು: ಕಾವೇರಿ ನೀರು (Cauvery water) ಸರಬರಾಜು 5ನೇ ಹಂತದ ಚಾಲನೆಯ ಪೂರ್ವಭಾವಿ ಚಾಲನೆಯ ಚಟುವಟಿಕೆಯ ಭಾಗವಾಗಿ, 5ನೇ ಹಂತದ 700 ಮಿ.ಮೀ ಎಂ.ಎಸ್‌ ಕೊಳವೆ ಮಾರ್ಗವನ್ನು ಹೆಗ್ಗನಹಳ್ಳಿ ಜಿ.ಎಲ್‌.ಆರ್‌ ಆವರಣದಲ್ಲಿ ಹಾಲಿ ಇರುವ 5 ಎಂ.ಎಲ್‌ ಜಿ.ಎಲ್‌.ಆರ್‌ಗೆ ಇರುವ ಫೇಸ್‌ 2 ಇನ್‌ಲೆಟ್‌ 1000 ಮಿ.ಮೀ ಎಂ.ಎಸ್‌ ಕೊಳವೆ ಮಾರ್ಗಕ್ಕೆ ಜೋಡಣೆ ಮಾಡುವ ಕಾಮಗಾರಿ ಕೈಗೊಳ್ಳುವ ಹಿನ್ನೆಲೆಯಲ್ಲಿ ಸೆ.21 ರಂದು ಬೆಂಗಳೂರು ನಗರದ ಹಲವೆಡೆ ನೀರಿನ ಸರಬರಾಜಿನಲ್ಲಿ ವ್ಯತ್ಯಯ (Water Supply Cut) ಉಂಟಾಗಲಿದೆ.

ಫೇಸ್‌-2 ಕೊಳವೆ ಮಾರ್ಗದಲ್ಲಿ ನಿರಂತರ 24*7 ನೀರು ಸರಬರಾಜು ಇರುವುದರಿಂದ ಸೆ. 21 ರಂದು ಮಧ್ಯಾಹ್ನ 1 ಗಂಟೆಯಿಂದ ರಾತ್ರಿ 10 ಗಂಟೆಯವರೆಗೆ 9 ಗಂಟೆಗಳ ಕಾಲ ಲೋಕಲ್‌ ಶಟ್‌ಡೌನ್‌ ಮಾಡಲಾಗುತ್ತಿದ್ದು, ನಗರದ ಹಲವೆಡೆ ನೀರಿನ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

ವ್ಯತ್ಯಯ ಉಂಟಾಗಲಿರುವ ಪ್ರದೇಶಗಳು

ದಾಸರಹಳ್ಳಿ ವಲಯದ ನೀರು ಸರಬರಾಜಿನಲ್ಲಿ ವ್ಯತ್ಯಯ ಆಗುವ ಪ್ರದೇಶಗಳು

ನಾರ್ತ್‌ ವೆಸ್ಟ್‌ ವಿಭಾಗ 1

ನಾರ್ತ್‌ ವೆಸ್ಟ್‌ – ಉಪ ವಿಭಾಗ 1: ಸುಬ್ರಮಣ್ಯನಗರ, ಗಾಯತ್ರಿ ನಗರ, ಪ್ರಕಾಶನಗರ, ನಂದಿನಿ ಲೇಔಟ್‌, ಗೋರುಗುಂಟೆಪಾಳ್ಯ, ಕೃಷ್ಣಾನಂದ ನಗರ, ಶಂಕರ ನಗರ, ಕಂಠೀರವ ನಗರ, ಮಹಾಲಕ್ಷ್ಮಿ ಲೇಔಟ್‌, ಸರಸ್ವತಿ ನಗರ, ಗಣೇಶ ಬ್ಲಾಕ್‌, ರಾಜಾಜಿನಗರ ಮೊದಲನೇ ಹಂತ ದಿಂದ 6 ನೇ ಹಂತದವರೆಗೆ.

ಈ ಸುದ್ದಿಯನ್ನೂ ಓದಿ | CM Siddaramaiah: ಕನ್ನಡ ಬಳಗ ಯುಕೆಯಿಂದ ದೀಪಾವಳಿ, ಕನ್ನಡ ರಾಜ್ಯೋತ್ಸವಕ್ಕೆ ಸಿಎಂಗೆ ಆಹ್ವಾನ

ನಾರ್ತ್‌ ವೆಸ್ಟ್‌ – ಉಪ ವಿಭಾಗ 2: ರಾಜಗೋಪಾಲನಗರ, ಜಿಕೆಡಬ್ಲೂ ಲೇಔಟ್‌, ಲಕ್ಷ್ಮಿದೇವಿ ನಗರ, ಚಾಮುಂಡಿಪುರ, ಪಾರ್ವತಿನಗರ, ಪೀಣ್ಯ ಕೈಗಾರಿಕಾ ಪ್ರದೇಶ, ಚೊಕ್ಕಸಂದ್ರ, ಎಚ್‌ಎಂಟಿ ಲೇಔಟ್‌, ಗೃಹಲಕ್ಷ್ಮಿ ಲೇಔಟ್‌, ಪೀಣ್ಯ ಮೊದಲನೇ ಹಂತ, ಪೀಣ್ಯ ವಿಲೇಜ್‌.

ನಾರ್ತ್‌ ವೆಸ್ಟ್‌ ವಿಭಾಗ-2

ನಾರ್ತ್‌ ವೆಸ್ಟ್‌ – ಉಪ ವಿಭಾಗ 3: ಎಂಇಐ ಲೇಔಟ್‌, ಬಗಲುಗುಂಟೆ, ಮಲ್ಲಸಂದ್ರ, ದಾಸರಹಳ್ಳಿ, ರಾಮಯ್ಯ ಲೇಔಟ್‌, ಪ್ರಶಾಂತ ನಗರ, ಕಮ್ಮಗೊಂಡನಹಳ್ಳಿ, ಭುವನೇಶ್ವರಿ ನಗರ.

ನಾರ್ತ್‌ ವೆಸ್ಟ್‌ – ಉಪ ವಿಭಾಗ 4: ಹೆಗ್ಗನಹಳ್ಳಿ, ಹೇರೋಹಳ್ಳಿ, ಸುಂಕದಕಟ್ಟೆ, ಪೈಪ್‌ಪೈನ್‌ ರಸ್ತೆ, ಶ್ರೀನಿವಾಸ ನಗರ, ಹೋಯ್ಸಳ ನಗರ, ಸಂಜೀವಿನಿ ನಗರ, ಲಕ್ಷ್ಮಣ ನಗರ, ಶ್ರೀಗಂಧ ನಗರ, ಮಯೂರ ನಗರ, ಶಿವಾನಂದ ನಗರ, ಫ್ರೆಂಡ್ಸ್‌ ಸರ್ಕಲ್‌.

ನಾರ್ತ್‌ ವೆಸ್ಟ್‌ – ಉಪ ವಿಭಾಗ 5: ಎಜಿಬಿ ಲೇಔಟ್‌, ಚಿಕ್ಕಸಂದ್ರ, ಕಿರ್ಲೋಸ್ಕರ್‌ ಲೇಔಟ್‌, ಸೌಂದರ್ಯ ಲೇಔಟ್‌, ಸಿದ್ದೇಶ್ವರ ಲೇಔಟ್‌.

ವೆಸ್ಟ್‌ ವಿಭಾಗ 1

ವೆಸ್ಟ್‌ 1-1 ಉಪವಿಭಾಗ: ಕೆ.ಪಿ ಅಗ್ರಹಾರ, ಚೆನ್ನಪ್ಪ ಗಾರ್ಡನ್‌, ಗಾಣಪ್ಪ ಲೇಔಟ್‌, ಮಂಜುನಾಥ ನಗರ, ಚೌಡರಪಾಳ್ಯ, ವಿದ್ಯಾರಣ್ಯನಗರ.

ವೆಸ್ಟ್‌1-2 ಉಪವಿಭಾಗ: ಮಾರೇನಹಳ್ಳಿ 20 ನೇ ಮೇನ್‌, ಕೆಹೆಚ್‌ಬಿ ಕ್ವಾಟರ್ಸ್‌, ಹೌಸಿಂಗ್‌ ಬೋರ್ಡ್‌, ಕಾರ್ಪೋರೇಷನ್‌ ಕಾಲೋನಿ, ತಿಮ್ಮನಹಳ್ಳಿ, ಎಂ.ಸಿ ಲೇಔಟ್‌, ಮೂಡಲಪಾಳ್ಯ.

ಈ ಸುದ್ದಿಯನ್ನೂ ಓದಿ | Eshwar Khandre: ಕಸ್ತೂರಿ ರಂಗನ್‌ ವರದಿ; ಪರಿಸರ, ಜನಜೀವನ ಹಿತಾಸಕ್ತಿ ರಕ್ಷಣೆಗೆ ಸರ್ಕಾರದ ಕ್ರಮ

ವೆಸ್ಟ್‌ 1-3 ಉಪವಿಭಾಗ: ನಾಗಾಪುರ, ಅಗ್ರಹಾರ ದಾಸರಹಳ್ಳಿ, ರಾಜಾಜಿನಗರ 6ನೇ ಬ್ಲಾಕ್‌, ವೆಸ್ಟ್‌ ಆಫ್‌ ಕಾರ್ಡ್‌ ರೋಡ್‌, ಇಂದಿರನಗರ ಸ್ಲಂ, ಕೆಎಚ್‌ಬಿ ಕಾಲೋನಿ, ಮಹಾಗಣಪತಿ ನಗರ, ಶಿವನಹಳ್ಳಿ.

ಆರ್‌ಆರ್‌ ನಗರದಲ್ಲಿ ನೀರು ಸರಬರಾಜಿನಲ್ಲಿ ವ್ಯತ್ಯಯ

ಎನ್‌ ಡಬ್ಲೂ 1 ವಿಭಾಗ

ಎನ್‌.ಡಬ್ಲೂ. 1 ಉಪ ವಿಭಾಗ: ರಾಜಾಜಿನಗರ 6ನೇ ಬ್ಲಾಕ್‌, ಎನ್‌.ಡಬ್ಲೂ. 2 ಉಪ ವಿಭಾಗ: ಶಿವಪುರ, ನೆಲಗದರನಹಳ್ಳೀ, ಐಪಿನಗರ, ದೊಡ್ಡಣ್ಣ ಇಂಡಸ್ಟ್ರಿಯಲ್‌ ಏರಿಯಾ, ರಾಮಯ್ಯ ಲೇಔಟ್‌, ನಂದಿನ ಲೇಔಟ್‌, ಜೈಭುವನೇಶ್ವರಿ ನಗರ, ಗೃಹಲಕ್ಷ್ಮಿ ಲೇಔಟ್‌, ಸಂಜಯಗಾಂಧಿ ನಗರ, ಲಕ್ಷ್ಮಿದೇವಿ ನಗರ, ಪೀಣ್ಯ ವಿಲೇಜ್‌, ಪೀಣ್ಯ ಮೊದಲನೇ ಹಂತ.

ಎನ್‌.ಡಬ್ಲೂ. 2 ವಿಭಾಗ

ಎನ್‌.ಡಬ್ಲೂ. 3 ಉಪ ವಿಭಾಗ: ಮಲ್ಲಸಂದ್ರ, ರವೀಂದ್ರ ನಗರ, ಸಂತೋಷ್‌ ನಗರ, ಬಿಎಚ್‌ಇಎಲ್‌ ಕಾಲೋನಿ, ಬಾಬಣ್ಣ ಲೇಔಟ್‌, ಕಲ್ಯಾಣ ನಗರ, ಪ್ರಶಾಂತ ನಗರ, ಶನಿಮಹಾತ್ಮ ಟೆಂಪಲ್‌, ಭುವನೇಶ್ವರಿ ನಗರ, ಎಂಇಐ ಲೇಔಟ್‌, ಬಗಲಗುಂಟೆ, ಹಾವನೂರು ಲೇಔಟ್‌, ಡಿಫೆನ್ಸ್‌ ಕಾಲೋನಿ.

ಎನ್‌.ಡಬ್ಲೂ. 4 ಉಪ ವಿಭಾಗ: ಹೆಗ್ಗನಹಳ್ಳಿ, ಹೇರೋಹಳ್ಳಿ, ಸುಂಕದಕಟ್ಟೆ, ಪೈಪ್‌ಲೈನ್‌ ರಸ್ತೆ, ಶ್ರೀನಿವಾಸ ನಗರ, ಹೋಯ್ಸಳ ನಗರ.

ವೆಸ್ಟ್‌ – 1 ವಿಭಾಗ

ವೆಸ್ಟ್‌- 1 – 1 ಉಪವಿಭಾಗ: ಶಂಕ್ರಪ್ಪ ಗಾರ್ಡನ್‌ 1 ನೇ ಕ್ರಾಸ್‌ ನಿಂದ 6 ನೇ ಕ್ರಾಸ್‌, ಗೋಪಾಲಪುರ. ವೆಸ್ಟ್‌ – 1 – 2 ಉಪವಿಭಾಗ: ಕಾವೇರಿಪುರ, ರಂಗನಾಥಪುರ, ಬಿಡಿಎ ಲೇಔಟ್‌, ರಾಜೀವ್‌ ಗಾಂಧಿ ಕೊಳಚೆ ಪ್ರದೇಶ, ಮುನೇಶ್ವರ ನಗರ, ಮೂಡಲಪಾಳ್ಯ, ಎಂಟಿ ಲೇಔಟ್‌, ಮಾರೇನಹಳ್ಳಿ, ಜಿಕೆಡಬ್ಲೂ ಲೇಔಟ್‌, ವಿನಾಯಕ ಲೇಔಟ್‌, ಮಾರುತಿ ಮಂದಿರ, ಶಿವಾನಂದ ನಗರ.

ವೆಸ್ಟ್‌- 1 – 3 ಉಪವಿಭಾಗ: ಕೋಮಲನಗರ, ಸಂಜಯಗಾಂಧಿ ನಗರ, ವಿಶ್ವಭಾರತಿ ನಗರ, ಸಣ್ಣಕ್ಕಿ ಬಯಲು, ಕಾಮಾಕ್ಷಿಪಾಳ್ಯ, ರಾಗ್ಗಿ ನಗರ ಆರನೇ ಬ್ಲಾಕ್‌, ಶಕ್ತಿ ಗಣಪತಿ ನಗರ.

ವೆಸ್ಟ್‌ – 2 ವಿಭಾಗ

ವೆಸ್ಟ್‌- 2 – 1 ಉಪವಿಭಾಗ: ಆರ್‌.ಆರ್‌. ನಗರ, ಬಿಎಚ್‌ಇಎಲ್‌ ಲೇಔಟ್‌, ಕನ್ನಹಳ್ಳಿ, ಐಡಿಐಲ್‌ ಹೋಮ್‌ ಟೌನ್‌ಶಿಪ್‌, ಬಿಇಎಂಎಲ್‌ ಮೂರು, ನಾಲ್ಕು ಮತ್ತು ಐದನೇ ಹಂತ, ಮೈಲಾಸಂದ್ರ, ಕೆಂಗೇರಿ, ಕೆಂಗೇರಿ ಸ್ಯಾಟಲೈಟ್‌ ಟೌನ್‌, ಬಂಡೇ ಮಠ, ಕೆಂಗೇರಿ ಪೋರ್ಟ್‌, ಸ್ವಾತಿ ಲೇಔಟ್‌, ಕೋಡಿ ಪಾಳ್ಯ, ವಿಜಯಶ್ರೀ ಲೇಔಟ್‌, ಭುವನೇಶ್ವರ ನಗರ, ಜ್ಞಾನಭಾರತಿ, ದುಬಾಸಿಪಾಳ್ಯ, ನಾಗದೇವನಹಳ್ಳಿ.

ಈ ಸುದ್ದಿಯನ್ನೂ ಓದಿ | London Fashion Week 2024: ಲಂಡನ್‌ ಫ್ಯಾಷನ್‌ ವೀಕ್‌‌‌ನಲ್ಲಿ ಹೈಲೈಟಾದ ಹೈ ಸ್ಟ್ರೀಟ್‌ ಫ್ಯಾಷನ್‌!

ವೆಸ್ಟ್‌- 2 – 2 ಉಪವಿಭಾಗ: ಅನ್ನಪೂರ್ಣೇಶ್ವರಿ ನಗರ, ಜ್ಞಾನಗಂಗಾ ನಗರ, ರೈಲ್ವೇ ಲೇಔಟ್‌, ಎಂಪಿಎಂ ಲೇಔಟ್‌, ಮಲ್ಲತ್ತಹಳ್ಳಿ, ಪಾಪರೆಡ್ಡಿಪಾಳ್ಯ, ಐಪಿಎ ಲೇಔಟ್‌, ಡಿ ಗ್ರೂಪ್‌ ಬ್ಲಾಕ್‌, ನಾಗರಭಾವಿ, ಎನ್‌ಜಿಎಫ್‌ ಲೇಔಟ್‌, ಟೆಲಿಕಾಂ ಲೇಔಟ್‌.