Wednesday, 11th December 2024

ನಾವೆಲ್ಲರು ಒಂದು; ನಾವೆಲ್ಲರು ಬಂಧು:ಹಳ್ಳೂರ

ಹಾರೂಗೇರಿ : ರಾಷ್ಟ್ರದ ಸ್ವಾತಂತ್ರ್ಯ ಹಾಗೂ ಐಕ್ಯತೆಯನ್ನು ಕಾಪಾಡಲು ಸಮರ್ಪಣಾ ಭಾವದಿಂದ ಕಾರ್ಯನಿರ್ವಹಿಸ ಬೇಕು. ನಾವೆಲ್ಲರು ಒಂದುˌಬಂಧುಗಳಾಗಿದ್ದೆವೆಂದು ಕನ್ನಡ ಭಾಷಾ ಶಿಕ್ಷಕ ಎಸ್.ಬಿ.ಹಳ್ಳೂರ ಹೇಳಿದರು.

ಅವರು ಸನಿಹದ ಚಿಕ್ಕೂಡ ಸರಕಾರಿ ಪ್ರೌಢಶಾಲೆಯಲ್ಲಿ ರಾಷ್ಟ್ರೀಯ ಐಕ್ಯತಾ ಸಪ್ತಾಹದಂಗವಾಗಿ ಆಯೋಜಿಸಿದ ರಾಷ್ಟ್ರೀಯ ಐಕ್ಯತಾ ಪ್ರಮಾಣವಚನ ಕಾರ್ಯಕ್ರಮದಲ್ಲಿ ಮಾತನಾಡುತ್ತ ರಾಷ್ಟ್ರೀಯ ಭಾವೈಕ್ಯತೆಗೆ ಧಕ್ಕೆ ತರುವ ಅಂಶಗಳನ್ನು ಚಿವುಟ ಬೇಕೆಂದು ಅಭಿಮತ ವ್ಯಕ್ತಪಡಿಸಿದರು.

ಹಿರಿಯ ಶಿಕ್ಷಕ ಸಾವನಕುಮಾರ ಗಸ್ತಿ ಮಾತನಾಡಿ ಅಹಿಂಸೆˌ ಜಾತ್ಯಾತೀತತೆˌˌ ಕೋಮು ಸೌಹಾರ್ದತೆಯ ಮಹತ್ವವನ್ನು ಬಿತ್ತರಿಸಿ ದರು.

ಮುಖ್ಯೋಪಾಧ್ಯಾಯ ಆರ್.ಎಮ್.ಪಾಟೀಲ ಸಮಾರೋಪ ನುಡಿಯಾಡುತ್ತಾ ಭಾರತ ಮಾತೆಯ ಸುಪುತ್ರರಾದ ನಾವು ಭೇದ ಭಾವ ಬಿಸಾಕಿ ಏಕತೆಯ ಡಿಂಡಿಮ ಬಾರಿಸಬೇಕೆಂದು ಉಸುರಿದರು. ಐಕ್ಯತಾ ಸಪ್ತಾಹದ ನಿಮಿತ್ತ ಅಲ್ಪ ಸಂಖ್ಯಾತರ ಕಲ್ಯಾಣ ದಿನ ˌ ˌಭಾಷಾ ಸೌಹಾರ್ದತಾ ದಿನˌ ದುರ್ಬಲ ವರ್ಗಗಳ ದಿನˌ ಸಾಂಸ್ಕೃತಿಕ ಏಕತಾ ದಿನˌ ಮಹಿಳಾ ದಿನˌ ಪರಿಸರ ರಕ್ಷಣಾ ದಿನಗಳ ಕುರಿತು ಚರ್ಚೆˌ ಸಂವಾದ ಏರ್ಪಡಿಸುವುದರ ಮೂಲಕ ಏಕತೆಯ ಬೆಸುಗೆಗೆ ಮುನ್ನುಡಿ ಬರೆಯಲಾಗುವುದೆಂದು ಸಂಘಟಕ ಶಿಕ್ಷಕ ಎಸ್.ಎಸ್.ಕಾಂಬಳೆ ತಿಳಿಸಿದರು.

ಹಿಂದಿ ಭಾಷಾ ಬೋಧಕಿ ಜ್ಯೋತಿ ಮಹಾಬಳಶೆಟ್ಟಿ ವಿಜ್ಞಾನ ಶಿಕ್ಷಕಿ ಸುಮಿತ್ರಾ ಮಗೆಣ್ಣವರ ದೈಹಿಕ ಶಿಕ್ಷಣ ಶಿಕ್ಷಕ ಎಮ್.ಕೆ.ಕಳ್ಳಿ ಗುದ್ದಿ, ಎಲ್.ಎಸ್.ಮಗದುಮ್ ಉಪಸ್ಥಿತರಿದ್ದರು. ಸಮಾಜ ವಿಜ್ಞಾನ ಶಿಕ್ಷಕ ಎಸ್.ಎಸ್.ಕಾಂಬಳೆ ಸ್ವಾಗತಿಸಿದರು. ಚಿತ್ರಕಲಾ ಶಿಕ್ಷಕ ಎನ್.ಎಸ್.ಕಾಂಬಳೆ ನಿರೂಪಿಸಿ ವಂದಿಸಿದರು.