Wednesday, 11th December 2024

ಶ್ರೀಶೈಲ ಪೀಠದ ಶ್ರೀಗಳ ಪಾದಯಾತ್ರೆಗೆ ಅದ್ದೂರಿ ಸ್ವಾಗತ

ಬಸವನಬಾಗೇವಾಡಿ: ಶ್ರೀಶೈಲ ಪೀಠದ ಡಾ.ಚನ್ನಸಿದ್ದರಾಮ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಅವರ ದ್ವಾದಶ ಪೀಠಾರೋಹಣ ಮಹೋತ್ಸವ ಹಾಗೂ ಜನ್ಮ ಸುವರ್ಣಮಹೋತ್ಸವದ ಅಂಗವಾಗಿ ಲೋಕ ಕಲ್ಯಾಣಕ್ಕಾಗಿ, ಧರ್ಮ ಹಾಗೂ ಪರಿಸರ ರಕ್ಷಣೆಗಾಗಿ  ಹಮ್ಮಿಕೊಂಡಿರುವ
ಪಾದಯಾತ್ರೆಗೆ ಪಟ್ಟಣದಲ್ಲಿ ಮಂಗಳವಾರ ಸಂಜೆ ಅದ್ಧೂರಿ ಸ್ವಾಗತ ಕೋರಲಾಯಿತು. ಪಟ್ಟಣದ ಬಸವೇಶ್ವರ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯ ಹತ್ತಿರ  ಅಪಾರ ಸಂಖ್ಯೆಯ ಭಕ್ತರ ಜಯಘೋಷಣೆಗಳೊಂದಿಗೆ ಶ್ರೀಗಳಿಗೆ ಸ್ವಾಗತ ಕೋರಲಾಯಿತು.
ಮಹಿಳೆಯರು ಶ್ರೀಗಳಿಗೆ ಆರತಿ ಬೆಳಗಿದರು.  ಅಪಾರ ಸಂಖ್ಯೆಯ ಭಕ್ತರೊಂದಿಗೆ ಪಾದಯಾತ್ರೆಯು ಪಟ್ಟಣದ ವಿಜಯಪುರ ರಸ್ತೆಯ ಮೂಲಕ ತೆರಳಿ ಬಸವ ಜನ್ಮ ಸ್ಕಾರಕಕ್ಕೆ ತೆರಳಿ ಬಸವ ಜನ್ಮ ಸ್ಮಾರಕದ ದರ್ಶನವನ್ನು ಜಗದ್ಗುರು ಪಡೆದುಕೊಂಡ ನಂತರ ಧರ್ಮಸಭೆಯಲ್ಲಿ ನಡೆಯುವ ಬಸವ ಭವನಕ್ಕೆ ಆಗಮಿಸಿದರು.
ಪಾದಯಾತ್ರೆ ತೆರಳುವ ಮಾರ್ಗದ ರಸ್ತೆಗಳಲ್ಲಿ ರಂಗವಲ್ಲಿ ಚಿತ್ತಾರ ಬಿಡಿಸಲಾಗಿತ್ತು. ಹಿರೇಮಠದ ಶಿವಪ್ರಕಾಶ ಶಿವಾಚಾರ್ಯರು, ವಿರಕ್ತಮಠದ ಸಿದ್ದಲಿಂಗಸ್ವಾಮೀಜಿ, ಮನ ಗೂಳಿಯ ಅಭಿನವ ಸಂಗನಬಸವ ಶಿವಾಚಾರ್ಯರು, ಮಸಬಿನಾಳಶ್ರೀಗಳು, ಇಂಗಳೇಶ್ವರಶ್ರೀಗಳು, ಅರಳಿಚಂಡಿಯಶ್ರೀಗಳು, ಶಾಸಕರಾದ ಶಿವಾನಂದ ಪಾಟೀಲ, ಎ.ಎಸ್‌.ಪಾಟೀಲ ನಡಹಳ್ಳಿ, ಮಾಜಿ ಸಚಿವ ಎಸ್.ಕೆ.ಬೆಳ್ಳುಬ್ಬಿ, ಈರಣ್ಣ ಪಟ್ಟಣಶೆಟ್ಟಿ, ಸುರೇಶ ಹಾರಿವಾಳ, ಬಸವರಾಜ ಗೊಳಸಂಗಿ, ಪಂಚಾಕ್ಷರಿ ಕಾಳಹಸ್ತೇಶ್ವರಮಠ, ಶಿವರುದ್ರಯ್ಯ ಹಿರೇಮಠ, ಸಂಗಮೇಶ ಓಲೇಕಾರ, ಶೇಖರ ಗೊಳಸಂಗಿ, ಬಸವರಾಜ ಹಾರಿವಾಳ, ಶಿವಾನಂದ ಮಂಗಾನವರ, ಸಂಗಣ್ಣ ಕಲ್ಲೂರ, ಶಂಕರಗೌಡ ಚಿಕ್ಕೊಂಡ, ಭರತು ಅಗರವಾಲ, ಲೋಕನಾಥ ಅಗರವಾಲ, ಎಸ್.ಎಸ್.ಝಳಕಿ, ಶೇಖರಗೌಡ ಪಾಟೀಲ, ಹಣಮಂತರಾಗೌಡ ಪಡಗಾನೂರ, ವಿ.ಬಿ.ಮರ್ತುರ, ವಿವೇಕಾನಂದ ಕಲ್ಯಾಣಶೆಟ್ಟಿ, ಪರಶುರಾಮ ಅಡಗಿಮನಿ ಸೇರಿದಂತೆ ಇತರರು ಇದ್ದರು.