-ಶೀಲಾ ಸಿ. ಶೆಟ್ಟಿ, ಬೆಂಗಳೂರು
ನೆಕ್ ಸ್ಕಾರ್ಫ್ ಫ್ಯಾಷನ್ (Winter Neck Scarf Fashion) ಇಂದು ಸೀಸನ್ ಟ್ರೆಂಡ್‌ನಲ್ಲಿ ಟಾಪ್ ಲಿಸ್ಟ್‌ನಲ್ಲಿದೆ. ಅದರಲ್ಲೂ ಕಾರ್ಪೋರೇಟ್ ಕ್ಷೇತ್ರದ ಯುವತಿಯರ ಡ್ರೆಸ್‌ಕೋಡ್ ಲಿಸ್ಟ್‌ಗೆ ಸೇರಿದೆ. ಪ್ರತಿ ಬಾರಿ ವಿಂಟರ್ ಸೀಸನ್ ಬಂದ್ರೆ ಸಾಕು, ಸ್ಕಾರ್ಫ್ ಫ್ಯಾಷನ್ ಎಂಟ್ರಿ ನೀಡುತ್ತದೆ. ಇದೀಗ ಸ್ಕಾರ್ಫ್ ಫ್ಯಾಷನ್‌ನಲ್ಲೆಇಂದು ಲೆಕ್ಕವಿಲ್ಲದಷ್ಟು ಬಗೆಯ ಸ್ಟೈಲಿಂಗ್ ಕಾನ್ಸೆಪ್ಟ್‌ಗಳು ಬಂದಿವೆ. ಅವುಗಳಲ್ಲಿ ನೆಕ್ ಸ್ಕಾರ್ಫ್ ಫ್ಯಾಷನ್ ಟ್ರೆಂಡ್ ಚಾಲ್ತಿಯಲ್ಲಿದೆ. ಇತರೆ ಕ್ಷೇತ್ರದಲ್ಲಿರುವ ಮಾನಿನಿಯರಿಗೆ ಹೋಲಿಸಿದಲ್ಲಿಅತಿ ಹೆಚ್ಚು ಸ್ಕಾರ್ಫ್ ಬಳಸುವುದು ಹಾಗೂ ಧರಿಸುವುದು ಕಾರ್ಪೋರೇಟ್ ಕ್ಷೇತ್ರದ ಯುವತಿಯರು ಎನ್ನುತ್ತಾರೆ ಸ್ಟೈಲಿಸ್ಟ್‌ಗಳು.

ವೈವಿಧ್ಯಮಯ ಸ್ಕಾರ್ಫ್ ಫ್ಯಾಷನ್
ಒಂದಕ್ಕಿಂತ ಒಂದು ಭಿನ್ನ, ನೋಡಲು ಬಯಸುವ ಮೆಟೇರಿಯಲ್ ಒಂದೇ ಆಗಿದ್ದರೂ ಡಿಸೈನ್ ಮಾಡುವ ರೀತಿ ಬೇರೇ ಬೇರೇಯದ್ದಾಗಿದೆ. ಒಂದೇ ಸ್ಕಾರ್ಫ್‌ನಲ್ಲಿಊಹೆಗೆ ತಕ್ಕಂತೆ ಡಿಸೈನ್ ಮಾಡಬಹುದು ಎನ್ನುತ್ತಾರೆ ಸ್ಟೈಲಿಸ್ಟ್ . ಅವರ ಪ್ರಕಾರ, ಸ್ಕಾರ್ಫ್ ಅಳತೆಗೆ ತಕ್ಕಂತೆ ಡಿಸೈನ್‌ಗಳನ್ನು ಮಾಡಲು ಸಾಧ್ಯ ಎನ್ನುತ್ತಾರೆ.

ಕಾರ್ಪೋರೇಟ್ ಕ್ಷೇತ್ರದಲ್ಲಿ ಟ್ರೆಂಡಿಯಾದ ಸ್ಟೈಲಿಂಗ್
ನೆಕ್ ಸ್ಕಾರ್ಫ್ ಸ್ಟೈಲ್ ಸ್ಟೇಟ್‌ಮೆಂಟ್ ಅತಿ ಹೆಚ್ಚಾಗಿ ಟ್ರೆಂಡ್‌ನಲ್ಲಿರುವುದು ಕಾರ್ಪೋರೇಟ್ ಕ್ಷೇತ್ರದಲ್ಲಿ. ನೋಡಲು ಡಿಸೆಂಟಾಗಿ ಕಾಣುವಂತೆ ಮಾಡಬಲ್ಲಈ ಫ್ಯಾಷನ್, ವಿವಾಹಿತರ ಹಾಗೂ ಮಧ್ಯ ವಯಸ್ಕರಿಗೂ ಪ್ರಿಯವಾಗಿದೆ ಎನ್ನುತ್ತಾರೆ ಕಾರ್ಪೋರೇಟ್ ಕ್ಷೇತ್ರದ ಸ್ಟೈಲಿಸ್ಟ್‌ಗಳು. ಅವರ ಪ್ರಕಾರ, ಆಯಾ ಸ್ಕಾರ್ಫ್ ಡಿಸೈನ್ ಹಾಗೂ ಅಳತೆಗೆ ತಕ್ಕಂತೆ ಸ್ಟೈಲಿಶ್ ಆಗಿ ಧರಿಸಬೇಕು.

ಠಪೋರಿ ಲುಕ್ ಬೇಡ
ಕೆಲವೊಮ್ಮೆ ಸ್ಟೈಲಿಶ್ ಲುಕ್ ನೀಡುವ ಭರದಲ್ಲಿ ಠಪೋರಿಯಂತೆ ಕಾಣಿಸಲೂಬಹುದು ಎನ್ನುತ್ತಾರೆ ಡಿಸೈನರ್ ಗೌರವ್. ಕುತ್ತಿಗೆಗೆ ಸ್ಕಾರ್ಫ್ ಕಟ್ಟುವ ಸ್ಟೈಲನ್ನು ಪಕ್ಕಾ ಲೋಕಲ್ ಸಿನಿಮಾಗಳಲ್ಲಿ ಕಾಣಬಹುದು. ಇದು ಯಾವ ಮಟ್ಟಿಗೆ ಪಾಪುಲರ್ ಆಯಿತೆಂದರೇ, ಬಹಳಷ್ಟು ಲೋಕಲ್ ಹುಡುಗರು ಈ ಸ್ಟೈಲನ್ನು ಅನುಕರಿಸಿದ್ದರು ಕೂಡ. ಆದರೆ, ಇದು ಹೆಚ್ಚು ಕಾಲ ಪ್ರಚಲಿತದಲ್ಲಿರಲಿಲ್ಲ ಎನ್ನುತ್ತಾರೆ ಡಿಸೈನರ್ಸ್. ಹಾಗೆಂದು ಹುಡುಗರು ಧರಿಸುವ ಸ್ಕಾರ್ಫ್‌ನಂತೆ ಹುಡುಗಿಯರ ಸ್ಕಾರ್ಫ್ ಕಾಣುವುದಿಲ್ಲ. ಬದಲಿಗೆ ಕೊಂಚ ಟೈಯಿಂಗ್ ಶೈಲಿ ಬದಲಾಗಿರುವುದನ್ನು ಗಮನಿಸಬಹುದು.

ಆನ್‌ಲೈನ್‌ನಲ್ಲಿ ಸ್ಕಾರ್ಫ್ ಟುಟೋರಿಯಲ್
ಲಾಂಗ್ ಸ್ಕಾರ್ಫ್, ಶಾರ್ಟ್ ಲೆಂಥ್, ಸ್ಟೋಲ್ ಸ್ಟೈಲ್ ಸ್ಕಾರ್ಫ್‌ಗಳನ್ನು ಕುತ್ತಿಗೆಗೆ ಸುತ್ತುವ ಕುರಿತಂತೆ ಸಾಕಷ್ಟು ಆನ್‌ಲೈನ್ ಟುಟೋರಿಯಲ್‌ಗಳು ಇಂದು ಟ್ಯೂಷನ್ ನೀಡುತ್ತಿವೆ. ವಾರಕ್ಕೊಂದು ಟ್ರೆಂಡ್ ಸೃಷ್ಠಿಸುತ್ತಿವೆ. ಇದರಿಂದ ಆಕರ್ಷಿತರಾಗುತ್ತಿರುವ ಯುವತಿಯರು ಎಲ್ಲವನ್ನೂ ಸ್ವಾಗತಿಸ ತೊಡಗುತ್ತಿದ್ದಾರೆ. ಜತೆಗೆ ಸ್ಟೈಲಿಶ್ ಲುಕ್ ಪಡೆಯತೊಡಗಿದ್ದಾರೆ ಎನ್ನುತ್ತಾರೆ ಸ್ಟೈಲಿಸ್ಟ್ ಜಾನ್. ಅವರು ಹೇಳುವಂತೆ, ಕೆಲವು ಆ್ಯಪ್‌ಗಳಲ್ಲೂ ನಾವು ಹೊಸ ಹೊಸ ಬಗೆಯ ಸ್ಕಾರ್ಫ್ ಡಿಸೈನ್ ಮಾಡುವುದನ್ನು ನೋಡಬಹುದು. ಟಿಪ್ಸ್ ಬಳಸಿಕೊಳ್ಳಬಹುದು ಎನ್ನುತ್ತಾರೆ.
ಈ ಸುದ್ದಿಯನ್ನೂ ಓದಿ | Christmas Dress 2024: ಕ್ರಿಸ್‌ಮಸ್ ಫೆಸ್ಟಿವ್ ಸೀಸನ್‌ನಲ್ಲಿ ಟ್ರೆಂಡಿಯಾದ ಲೇಡಿಸ್ ಫ್ಯಾಷನ್ ವೇರ್‌ಗಳಿವು!
ಸ್ಕಾರ್ಫ್ ಸ್ಟೈಲಿಂಗ್ ಟೆಕ್ನಿಕ್ಸ್
- ಉದ್ದವಿರುವ ಸ್ಕಾರ್ಫ್ ಆದಲ್ಲಿ ಕ್ಲಿಷ್ಟಕರ ಡಿಸೈನ್ ಮಾಡಬಹುದು.
- ಡಬ್ಬಲ್ ಶೇಡ್‌ನದ್ದು ಕ್ಯಾಶುವಲ್ ಡ್ರೆಸ್‌ಗೆ ಬೆಸ್ಟ್.
- ಸಿಂಪಲ್ ಸ್ಕಾರ್ಫ್ ಡಿಸೈನ್ ಡೈಲಿ ರೂಟಿಗೆ ಸೂಟ್ ಆಗುತ್ತದೆ.
- ಎಥ್ನಿಕ್ ಲುಕ್‌ಗೆ ನೆಕ್ ಸ್ಕಾರ್ಫ್ ಧರಿಸುವುದು ಬೇಡ.
- ಯಾವುದೇ ಕಾರಣಕ್ಕೂ ಸೀರೆಗೆ ಟ್ರೈ ಮಾಡಬೇಡಿ.
(ಲೇಖಕಿ ಫ್ಯಾಷನ್ ಪತ್ರಕರ್ತೆ)