ಇಂಡಿ: ದೇಶದ ಸ್ವಾತಂತ್ರ‍್ಯ ಹೋರಾಟದಲ್ಲಿ ಕಾಗ್ರೆಸ್ ತನ್ನದೆಯಾದ ಕೊಡುಗೆ ನೀಡಿದೆ. ಕಾಂಗ್ರೆಸಿನ ನೂರು ವರ್ಷದ ಹೋರಾಟ ದ ಪ್ರತಿಫಲವೆ ಸ್ವಾತಂತ್ರ‍್ಯ ಇಂದು ನಮ್ಮೇಲ್ಲರ ನೆಮ್ಮದಿಗೆ ಕಾಂಗ್ರೆಸ್ ಕೊಡುಗೆ ಎಂದರೆ ತಪ್ಪಾಗುವುದಿಲ್ಲ ಎಂದು ಶಾಸಕ ಯಶವಂತರಾಯಗೌಡ ಪಾಟೀಲ ಹೇಳಿದರು.
೭೫ ನೇ ಅಮೃತ ಮಹೋತ್ಸವದ ಅಂಗವಾಗಿ ಶಾಸಕ ಯಶವಂತರಾಯಗೌಡ ಪಾಟೀಲ ಅವರ ನೈತೃತ್ವದಲ್ಲಿ ಭಾರತ ಜೋಡೋ ಪಾದಯಾತ್ರೆ ಸ್ಟೇಶನ್ ದಿಂದ ಇಂಡಿ ಪಟ್ಟಣ ದವರೆಗೆ ಸುಧೀರ್ಘ ಕಾಲ್ನಡಿಗೆಯ ನಂತರ ಪಟ್ಟಣದ ಶಂಕರ ಪಾರ್ವತಿ ಭವನದಲ್ಲಿ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಅವರು ದೇಶದ ಸ್ವಾತಂತ್ರ‍್ಯಕ್ಕಾಗಿ ಲಾಲ,ಬಾಲ್ ,ಪಾಲ,ಮಹತ್ಮಾಗಾಂಧಿ, ಸರದಾರ ವಲ್ಲಾಭಾಯಿ ಪಟೇಲ, ಜವ್ಹಾರಲಾಲ ನೇಹರು ಸುಭಾಷ ಚಂದ್ರಬೋಸ್, ಭಗತಸಿಂಗ ಮೌಲಾನಾ ಅಬ್ದುಲ ಕಲಾಂ ಅಜಾದ ಇಂತಹ ಅನೇಕ ವೀರರು ದೇಶ ಸ್ವಾತಂತ್ರö್ಯಗೋಳಿಸಿದ್ದಾರೆ ದೇಶದ ಪ್ರಜಾಪ್ರಭುತ್ವ ಬದ್ರ ಬುನಾದಿಗೆ ಡಾ|| ಬಿ.ಆರ್.ಅಂಬೇಡ್ಕರ ವರ ಕೋಡುಗೆ ಸಾಕಷ್ಟು ಸರ್ವರಿಗೂ ಸಮಬಾಳು ಸಮಪಾಲು ಎಂಬ ಸಂದೇಶದೊ೦ದಿಗೆ ಇಡೀ ವಿಶ್ವದಲ್ಲಿಯೇ ಶ್ರೇಷ್ಠ ಸಂವಿಧಾನ ನೀಡಿದ್ದಾರೆ.
ಅಧಿಕಾರ ಶಾಶ್ವತ ಅಲ್ಲ ಸ್ವಾತಂತ್ರ‍್ಯ ತಂದು ಕೊಟ್ಟ ಕಾಂಗ್ರೆಸ್ ನಿಷ್ಠಾವಂತ ಕಾರ್ಯಕರ್ತ ನಾಗಿ ಕೆಲಸ ಮಾಡುತ್ತಿದ್ದೆನೆ, ಬಡವರ ದೀನ ದುರ್ಬಲರ ,ಅಲ್ಪಸಂಖ್ಯಾತರ ಸರ್ವಜನಾಂಗ ದ ಹಿತ ರಕ್ಷಣೆಗೆ ಈ ದೇಶದಲ್ಲಿ ಕಾಂಗ್ರೆಸ್ ಇರಬೇಕು . ಜಿಲ್ಲೆಯಲ್ಲಿ ವಯಕ್ತಿಕ ಕಚಾಟ ಇರಲಿ ಅದನ್ನು ಬದಿಗೊತ್ತಿ ಪಕ್ಷದ ಪ್ರತಿಷ್ಠೇ ಮುಖ್ಯ ಎಂದು ಇಂದು ನಾವೇಲ್ಲರೂ ವಿಜಯಪೂರ ೮ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಪಕ್ಷವನ್ನು ಗೆಲ್ಲಿಸಿಯೇ ತೀರುತ್ತೇವೆ .೨೦೨೩ ರಲ್ಲಿ ಚುನಾವಣೆ ಗೆದ್ದು ವಿಧಾನಸೌಧಾದಲ್ಲಿ ಕಾಂಗ್ರೇಸ್ ಅಧಿಕಾರ ಗದ್ದುಗೆ ಹಿಡಿಯಲಿದೆ.
ಒಬ್ಬ ಚಹಾ ಮಾರು ವ್ಯಕ್ತಿ ಈ ದೇಶದ ಪ್ರಧಾನಿಯಾಗಿದ್ದಾರೆ ಎಂದರೆ ಅದು ಕಾಂಗ್ರೆಸಿನಿಂದ ಎಂಬುದು ಬಿಜೆಪಿಯವರು ತಿಳಿದು ಕೊಳ್ಳಬೇಕು. ಉಕ್ಕಿನ ಮಹಿಳೆ ದಿ. ಇಂಧಿರಾಗಾAಧಿಯವರು ಬಡವರ ತಾಯಿಯಾಗಿದ್ದಾರೆ ಅವರ ಅವಧಿಯಲ್ಲಿ ಗರಿಬೀ ಹಟಾವೋ, ಉಳ್ಳುವವನೇ ಭೂಮಿಯ ಒಡೆಯ, ಇಪ್ಪತ್ತು ಅಂಶಗಳ ಕಾರ್ಯಕ್ರಮ, ಪಂಚವಾರ್ಷಿಕ ಯೋಜನೆ, ಬ್ಯಾಂಕ ರಾಷ್ಟ್ರೀಕರಣ ಹೀಗೆ ಬಡವರ, ದೀನ, ದುರ್ಬಲರ ಪರವಾಗಿ ಅನೇಕ ಯೋಜನೆಗಳು ಮಾಡಿರುವುದರಿಂದ ಇಂದಿಗೂ ಜನಮಾನಸ ದಲ್ಲಿ ಅಚ್ಚು ಹಸಿರಾಗಿ ಉಳಿದಿದ್ದಾರೆ. ಗಾಂಧಿ ಮನೇತನ ತ್ಯಾಗಕ್ಕೆ ಹೆಸರು ಶ್ರೀಮತಿ ಸೋನಿಯಾಗಾಂಧಿಯವರು ಅಧಿಕಾರಕ್ಕಾಗಿ ಆಸೆ ಮಾಡದೆ ನಯವಾಗಿ ತಿರಸ್ಕರಿಸಿ ಒಬ್ಬ ಅರ್ಥಶಾಸ್ತçಜ್ಞನನ್ನು ಈ ದೇಶದ ಪ್ರಧಾನಿಯನ್ನಾಗಿ ಮಾಡಿದ ಕೀರ್ತಿ ಗಾಂಧಿ ಮನೆತನಕ್ಕೆ ಸಲ್ಲುತ್ತದೆ.
ಕೆಟ್ಟ ಶಕ್ತಿಗಳು ದೇಶದಲ್ಲಿ ಪಿತೂರಿ ಮಾಡಿ ದೇಶ ಇಭ್ಭಾಗ ಮಾಡುವ ತಂತ್ರ ರೂಪಿಸುತ್ತಿದ್ದಾರೆ ನೆರೆ ರಾಷ್ಟçಗಳು ತಲೆ ಎತ್ತುತ್ತಿವೆ ಕಾಂಗ್ರೆಸ ಅಧಿಕಾರಕ್ಕೆ ಬಂದ ನಂತರ ಬಗ್ಗು ಬಡಿಯುತ್ತೇವೆ.
೨೦೧೩ರಲ್ಲಿ ರಾಜ್ಯದ ಮುಖ್ಯ ಮಂತ್ರಿ ಸಿದ್ದರಾಮಯ್ಯನವರು ಅಧಿಕಾರ ವಹಿಸಿದ ಕೆಲವೆ ಕ್ಷಣಗಳಲ್ಲಿ ಅನ್ನಭಾಗ್ಯ ಯೋಜನೆ ಜಾರಿಗೆ ತಂದು ಬಡವರ ಹಸಿವನ್ನು ನೀಗಿಸಿದಲ್ಲದೆ ಬಡವರ ,ರೈತರ ಸಾಲ ಮನ್ನಾ ಮಾಡಿದ ಕೀರ್ತಿ ಸಿದ್ದರಾಮಯ್ಯನವರಿಗೆ ಸಲ್ಲುತ್ತದೆ. ಈ ನಾಡು ಕಂಡ ಮುತ್ಸದಿ ನಾಯಕ ಸುಮಾರು ೫ ವರ್ಷಗಳ ಪೂರ್ಣ ಅಧಿಕಾರ ಪೂರೈಸಿ ಧೀಮಂತ ನಾಯಕ.
**
೧೨ನೇ ಶತಮಾನದ ಕ್ರಾಂತಿಕಾರಿ ಬಸವಣ್ಣನ ಸಂದೇಶದAತೆ ಹಾಗೂ ಡಾ.ಬಿ.ಆರ್ ಅಂಬೇಡ್ಕರವರ ತತ್ವಸಿದ್ದಾಂತ ತಳಹದಿಯ ಮೇಲೆ ರಾಜಕಾರಣ ಮಾಡಿದ್ದೇನೆ. ತಾಲೂಕಿನಲ್ಲಿ ಎಲ್ಲ ಸಮುದಾಯಕ್ಕೆ ರಾಜಕೀಯ ಅಧಿಕಾರ ನೀಡಿ ಸರ್ವರಿಗೂ ಸಮಬಾಳು ಸಮಪಾಲು ನೀಡಲಾಗಿದೆ. ಕಾಂಗ್ರೆಸ ಅಸ್ತಿತ್ವ ಇಲ್ಲದೆ ಇರುವ ಇಂಡಿ ಕ್ಷೇತ್ರದಲ್ಲಿ ನಾನು ಭದ್ರ ಬುನಾದಿ ಹಾಕಿದ್ದೇನೆ ಇನ್ನು ೨೦ ವರ್ಷ ಕಾಂಗ್ರೆಸ್ ಭಾವುಟ ಸದಾ ಹಾರಾಡಲಿದೆ, ಕಾಂಗ್ರೆಸ್ ಪಕ್ಷದಲ್ಲಿ ಯಾರು ದುಡಿಯುತ್ತಾರೆ ಅಂತವರಿಗೆ ಮಾತ್ರ ಮುಂಬರುವ ದಿನಗಳಲ್ಲಿ ಒಳ್ಳೆಯ ಸಾನ ಮಾನ ನೀಡಿ ಗೌರವಿಸುತ್ತೇನೆ ಎಂದರು.
ಶಾಸಕ ಯಶವಂತರಾಯಗೌಡ ಪಾಟೀಲ.
ಮಹಿಳಾ ಜಿಲ್ಲಾ ಅಧ್ಯಕ್ಷೆ ವಿಧ್ಯಾಶ್ರೀ ತುಂಗಳ ಮಾತನಾಡಿದರು. ಮಾಜಿ ತಾ.ಪಂ ಅಧ್ಯಕ್ಷ ಶೇಖರ ರಾಠೋಡ, ಅಣ್ಣರಾಯ ಬಿದರಕೋಟಿ, ಗುರಣ್ಣಗೌಡ ಪಾಟೀಲ, ಸಾಂಬಾಜಿ ಮಿಸಾಳೆ,ಜಟ್ಟೆಪ್ಪ ರವಳಿ, ಹಣಮಂತ ಖಂಡೇಕಾರ, ಮಹಿಳಾ ಜಿಲ್ಲಾ ಅಧ್ಯಕ್ಷೆ ವಿಧ್ಯಾಶ್ರೀ ತುಂಗಳ, ಶ್ರೀಕಾಂತ ಕುಡಿಗನೂರ, ಮುತ್ತಪ್ಪ ಪೋತೆ,ರುಕ್ಮದೀನ ತದ್ದೇವಾಡಿ,ನಿರ್ಮಲಾ ತಳಕೇರಿ, ಮಹಾದೇವ ಗಡ್ಡದ, ಬಿ.ಎಂ ಕೋರೆ, ಅಬ್ಜಲ ಹವಾಲ್ದಾರ , ರಷೀದ ಅರಬ,ಶೈಲಜಾ ಚವ್ಹಾಣ, ಭೀಮಣ್ಣಾ ಕೌಲಗಿ, ಕಲ್ಲನಗೌಡ ಬಿರಾದಾರ,ಮಲ್ಲುಗೌಡ ಪಾಟೀಲ,ಜಾವೀದ ಮೋಮಿನ, ಇಲಿಯಾಸ ಬೋರಾಮಣಿ, ಅವಿನಾಶ ಬಗಲಿ, ಸದಾಶಿವ ಪ್ಯಾಟಿ, ಸತೀಶ ಹತ್ತಿ, ಧರ್ಮುವಾಲೀಕಾರ, ಸಂತೋಷ ಪರಶೇನವರ್ ವೇದಿಕೆಯಲ್ಲಿದ್ದರು.