ಇಂಡಿ: ಭೀಮಾ ತೀರದ ಭಾಗ ಅಧ್ಯಾತ್ಮಿಕ, ಧಾರ್ಮಿಕ ಸಂಸ್ಕೃತಿ ಪುಣ್ಯ ಪುರುಷರು ಈ ಭಾಗದಲ್ಲಿ ನಡೆದಾಡಿ ಪಾವನಗೊಳಿಸಿ ದ್ದಾರೆ ಎಂದು ಶಾಸಕ ಯಶವಂತರಾಯಗೌಡ ಪಾಟೀಲ ಹೇಳಿದರು.
ತಾಲೂಕಿನ ಅಗರಖೇಡ ಗ್ರಾಮದಲ್ಲಿ ಶ್ರೀಗಂಗಲಿಂಗ ಮಹಾರಾಜರ ಜಾತ್ರಾ ಮೋತೋ ತ್ಸವ ಹಾಗೂ ಶ್ರೀಗಂಗಲಿಂಗ ಮಹರಾಜರ ನೂತನ ಮೂರ್ತಿ ಪ್ರತಿಷ್ಠಾಪನೆ ಮಾಡಿ ಮಾತನಾಡಿದ ಅವರು ಭಾರತ ದೇಶ ಭಾವೈಕ್ಯತೆಯ ಬೀಡು ಹಬ್ಬ ಹರಿದಿನಗಳನ್ನು ಮಾಡುವ ಮೂಲಕ ಜನತೆ ಭಾವೈಕ್ಯತೆ, ಸಾಮರಸ್ಯದಿಂದ ಬದುಕು ಸಾಗಿಸುತ್ತಿದ್ದಾರೆ.
ಇಂಡಿ ಭಾಗದಲ್ಲಿ ಮಠಮಾನ್ಯಗಳ, ಸಾಧು -ಸಂತರು ದಾರ್ಶನಿಕ ಯುಗಪುರುಷರು ಸಾಹಿತಿಗಳ ತವರೂರು ಎಂದರೆ ತಪ್ಪಾಗುವುದಿಲ್ಲ. ಶ್ರೀಗಂಗಲಿಂಗ ಮಹಾರಾಜರು ಪವಾಡ ಪುರುಷರು ಅವರು ಜೀವಿತ ಅವಧಿಯಲ್ಲಿ ಮಾಡಿದ ಪವಾಡಗಳು ಅಷ್ಠೀಷ್ಟಲ್ಲ ಅವರು ನುಡಿದ ಮಾತುಗಳು ಸತ್ಯದ ಪ್ರತೀಕವಾಗಿದ್ದವು ಕರ್ನಾಟಕ, ಮಹಾರಾಷ್ಟ್ರ ಇತರೆ ರಾಜ್ಯಗಳಲ್ಲಿ ಅವರ ಭಕ್ತರ ದಂಡು ಇದೆ. ಇಂತಹ ಸತ್ಪುರುಷರ ದಿವ್ಯ ದರ್ಶನದಿಂದ ಈ ಭಾಗದ ಜನರು ಸಂಸ್ಕಾರವ೦ತರು ಮತ್ತು ಹೃದಯಶ್ರೀಮಂತಿಕೆಯಿಂದ ಕೂಡಿದೆ ಎಂದರು.
ಸೋಮಣ್ಣ ಮಹಾರಾಯ ಪೂಜಾರಿ ದಿವ್ಯಸಾನಿಧ್ಯ ವಹಿಸಿದರು. ಮಾಜಿ ಜಿ.ಪಂ ಸದಸ್ಯ ಹಣಮಂತ ಖಂಡೇಕಾರ, ಗ್ರಾ.ಪಂ ಅಧ್ಯಕ್ಷ ಸೋಮಣ್ಣಾ ರೂಗಿ, ಮಾಜಿ ತಾ.ಪಂ ಅಧ್ಯಕ್ಷ ಅಣ್ಣಾರಾಯ ಬಿದರಕೋಟಿ, ಭೀಮಣ್ಣಾ ಕೌಲಗಿ, ಹುಸೇನಿ ಕಾಣೆ, ವಿಠ್ಠಲಗೌಡ ಪಾಟೀಲ, ಹುಚ್ಚಪ್ಪ ತಳವಾರ, ರಾಮ ಮೋಹರೆ, ಗೌಡಪ್ಪಗೌಡ ಪಾಟೀಲ, ಮಲ್ಲನಗೌಡ ತೋಳನೂರ, ನಾಮದೇವ ಕೋಳೆಕರ್, ಚಂದು ಬಡಿಗೇರ, ಮಹಾದೇವ ರಾಠೋಡ ಸೇರಿದಂತೆ ಗ್ರಾಮದ ಮುಖಂಡರಿದ್ದರು.