ಇಂಡಿ: ಉದಯವಾಣಿ ದಿನಪತ್ರಿಕೆಯ ಇಂಡಿ ತಾಲೂಕಾ ಪತ್ರಕರ್ತ ಯಲಗೊಂಡ ಬೇವ ನೂರ ಅವರ ತಾಯಿ ಗೌರಾಬಾಯಿ ಮಾಳಪ್ಪ ಬೇವನೂರ (೮೦) ಭಾನುವಾರ ಸಾಯಂಕಾಲ ವಯೋಸಹಜ ಕಾಯಿಲೆಯಿಂದ ನಿಧನರಾದರು.
ಮೃತರು ಪತಿ, ಪುತ್ರ ಪತ್ರಕರ್ತ ಯಲಗೊಂಡ ಸೇರಿದಂತೆ ಮೂವರು ಪುತ್ರರು, ಓರ್ವ ಪುತ್ರಿ ಮತ್ತು ಅಪಾರ ಬಂಧು ಬಳಗವನ್ನು ಬಿಟ್ಟು ಅಗಲಿದ್ದಾರೆ. ಮೃತರ ಅಂತ್ಯೆಕ್ರಿಯೆ ಸೋಮ ವಾರ ಸ್ವ ಗ್ರಾಮ ಆಳೂರದ ತೋಟದ ವಸತಿಯಲ್ಲಿ ಬೆಳಿಗ್ಗೆ ೧೦ಘಂಟೆಗೆ ನೆರವೇರಲಿದೆ.
ಸಕ ಯಶವಂತ್ರಾಯಗೌಡ ಪಾಟೀಲ, ಬಿಜೆಪಿ ಮುಖಂಡರಾದ ಕಾಸುಗೌಡ ಬಿರಾದಾರ, ದಯಾಸಾಗರ ಪಾಟೀಲ, ಶ್ರೀಶೈಲಗೌಡ ಬಿರಾದಾರ, ಜೆಡಿಎಸ್ ಅಧ್ಯಕ್ಷ ಬಿ.ಡಿ. ಪಾಟೀಲ, ಪಂಚಮಸಾಲಿ ಸಮಾಜದ ಅಧ್ಯಕ್ಷ ವಿ.ಹೆಚ್. ಬಿರಾದಾರ, ಶಿವಾನಂದ ಚಾಳೀಕಾರ ಕಾಂಗ್ರೇಸ್ ಮುಖಂಡರಾದ ಮಂಜು ಕಾಮಗೊಂಡ, ಪ್ರಶಾಂತ ಕಾಳೆ, ಜಟ್ಟೆಪ್ಪ ರವಳಿ ಸೇರಿದಂತೆ ಹಲವು ಸಂತಾಪ ಸೂಚಿಸಿದ್ದಾರೆ.