Wednesday, 11th December 2024

ಶಿಕ್ಷಕ ಸ್ನೇಹಿತರೊಂದಿಗೆ ಸುಮಧುರ ಬಾಂಧವ್ಯ ಶ್ಲಾಘನೀಯ

ಇಂಡಿ: ನಿಮ್ಮ ಸೇವಾ ಅವಧಿಯಲ್ಲಿ ವಿಧ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಯ ಜೊತೆ ಶುದ್ದ ಶುಚಿತ್ವ ಆಹಾರ ನೀಡುವ ಮೂಲಕ ಶಾಲೆಯಲ್ಲಿ ಒಳ್ಳೆಯ ಪರಿಸರ ಮಕ್ಕಳ, ಶಿಕ್ಷಕ ಸ್ನೇಹಿತರೊಂದಿಗೆ ಸುಮಧುರ ಬಾಂಧವ್ಯ ಹೊಂದಿರುವ ಕಾರ್ಯ ಶ್ಲಾಘನೀಯ ನಿಮಗೆ ಭಗವಂತ ದೀರ್ಘಾಯುಷ್ಯ ನೀಡಲಿ ಎಂದು ಅಕ್ಷರ ದಾಸೋಹ ಸಹಾಯ ಮಲ್ಲಿಕಾರ್ಜುನ ಯರಗುದರಿ ಹೇಳಿದರು.

ಸರಕಾರಿ ಪ್ರೌಢ ಶಾಲೆಯ ಮುಖ್ಯೋಪಾಧ್ಯಾಯ ಮಲ್ಲಿಕಾರ್ಜುನ.ಪಿ ಬಿರಾದಾರ ಇವರ ನಿವೃತ್ತಿ ನಿಮಿತ್ಯೆ ಸನ್ಮಾನ ಮಾಡಿ ಮಾತನಾಡಿದ ಅವರು ನಾವು ಎಷ್ಟು ವರ್ಷ ಇರುತ್ತೇವೆ ಎಂಬುದು ಮುಖ್ಯವಲ್ಲ ನಾವು ಮಾಡಿರುವ ಕೆಲಸ ಕಾರ್ಯಗಳು ಶಾಶ್ವತ. ಶಿಕ್ಷಕ ಹುದ್ದೆ ಅತ್ಯೆಂತ ಪವಿತ್ರವಾಗಿದ್ದು ಅದರಲ್ಲಿ ೩೦ ವರ್ಷ ಸುಧೀರ್ಘ ಮುಖ್ಯೋಪಾಧ್ಯಾಯರಾಗಿ ಒಳ್ಳೆಯ ಕೆಲಸ ಮಾಡಿ ದ್ದಾರೆ.

ಕಳೆದ ಬಾರಿ ವಿಧ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡಿ ಎಸ್.ಎಸ್.ಎಲ್.ಸಿ ಪರೀಕ್ಷೆ ಯಲ್ಲಿ ಒಳ್ಳೇಯ ಫಲೀತಾಂಶ ಬರುವಂತೆ ಇಡೀ ಶಿಕ್ಷಕ ಬಳಗ ಶ್ರಮಿಸಿ ಮಕ್ಕಳ ಶ್ರೇಯೋ ಭಿವೃದ್ದಿಗೆ ಹಗಲು ರಾತ್ರಿ ಎನ್ನದೆ ಉತ್ತಮ ಫಲೀತಾಂಶಕ್ಕೆ ಕಾರಣರಾದ ತಮಗೆ ಸಿಬಂದ್ದಿ ವರ್ಗಕ್ಕೆ ಕೃತಜ್ಞತೆ ಸಲ್ಲಿಸುವುದಾಗಿ ತಿಳಿಸಿದರು.

ಸರಕಾರಿ ನೌಕರಿ ಸಿಗುವುದು ಕಷ್ಟ ಇಂತಹ ಸಂಧರ್ಬದಲ್ಲಿ ಸಾರ್ವಜನಿಕ ವಲಯಗಳಲ್ಲಿ ನಿಮ್ಮ ಹೆಸರು ಉಳಿಯುವಂತೆ ೩೦ ವರ್ಷ ಸುಧೀರ್ಘ ಶೈಕ್ಷಣಿಕ ಪ್ರಗತಿಗೆ ಮಕ್ಕಳ ಹಿತ ದೃಷ್ಠಿಯಿಂದ ಗಣಾತ್ಮಕ ಶಿಕ್ಷಣ ನೀಡಿದ್ದೀರಿ ತಮ್ಮ ಸೇವೆ ಇಲ್ಲಿಗೆ ಕುಂಟಿತ ಗೊಳ್ಳದೆ ನಿವೃತ್ತಿ ನಂತರದ ದಿನಗಳಲ್ಲಿ ತಾವು ಸಮಾಜ ಮುಖಿಯಾಗಿ ಕೆಲಸ ಮಾಡಬೇಕು ಎಂದರು.

ಶಿಕ್ಷಕ ಜಿ.ಜಿ ಬರಡೋಲ, ನಿವೃತ್ತ ಮುಖ್ಯೋಪಾಧ್ಯಾಯ ಮಲ್ಲಿಕಾರ್ಜುನ ಬಿರಾದಾರ, ನಾಗೇಶ .ವ್ಹಿ ಹಿರೇಮಠ, ಲೋಹಿತ ಗಜಾಕೋಶ ಇದ್ದರು.