Tuesday, 17th September 2024

Yettinahole Project: ಬಯಲುಸೀಮೆಯ 7 ಜಿಲ್ಲೆಗಳ ಚಿತ್ರಣ ಬದಲಿಸಲಿದೆ ಎತ್ತಿನಹೊಳೆ ಯೋಜನೆ; ಇದರ ವೈಶಿಷ್ಟ್ಯಗಳು ಏನೇನು?

Yettinahole Project

ಬೆಂಗಳೂರು: ರಾಜ್ಯದ ಬರಪೀಡಿತ 7 ಜಿಲ್ಲೆಗಳಿಗೆ ಕುಡಿಯುವ ನೀರು ಒದಗಿಸಲು ಹಾಗೂ 527 ಕೆರೆಗಳನ್ನು ತುಂಬಿಸಲು ರಾಜ್ಯ ಸರ್ಕಾರ ಕೈಗೆತ್ತಿಕೊಂಡಿರುವ ಮಹತ್ವಾಕಾಂಕ್ಷೆಯ ಎತ್ತಿನಹೊಳೆ ಸಮಗ್ರ ಕುಡಿಯುವ ನೀರಿನ ಯೋಜನೆಯ (Yettinahole Project) ಮೊದಲ ಹಂತದ ಕಾಮಗಾರಿಗಳನ್ನು, ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ಹೆಬ್ಬನಹಳ್ಳಿಯಲ್ಲಿ ಸಿಎಂ ಸಿದ್ದರಾಮಯ್ಯ (CM Siddaramaiah) ಅವರು ಉದ್ಘಾಟಿಸಿದ್ದಾರೆ. ಬಯಲು ಸೀಮೆ ಜಿಲ್ಲೆಗಳ ಜನರ ಬದುಕು ಬದಲಿಸುವ ಈ ಯೋಜನೆಯ ಉದ್ದೇಶ ಹಾಗೂ ವೈಶಿಷ್ಟ್ಯಗಳ ಕುರಿತ ಮಾಹಿತಿ ಇಲ್ಲಿದೆ.

ಎತ್ತಿನಹೊಳೆ ಸಮಗ್ರ ಕುಡಿಯುವ ನೀರಿನ ಯೋಜನೆಯ ವೈಶಿಷ್ಟ್ಯಗಳು

ಯೋಜನೆಯ ಉದ್ದೇಶ: ಏನು?

ಪಶ್ಚಿಮ ಘಟ್ಟದ ಮೇಲ್ಭಾಗದಲ್ಲಿ ಹರಿಯುವ ಎತ್ತಿನಹೊಳೆ, ಕಾಡುಮನೆಹೊಳೆ, ಹೊಂಗದಹಳ್ಳ ಹಾಗೂ ಕೇರಿಹೊಳೆ ಹಳ್ಳಗಳಿಗೆ ಅಡ್ಡಲಾಗಿ 8 ವಿಯರ್‌ಗಳನ್ನು ನಿರ್ಮಿಸಿ, ಈ ಹಳ್ಳಗಳ ಪ್ರವಾಹದಿಂದ ದೊರೆಯಬಹುದಾದ ನೀರಿನ ಪೈಕಿ 24.01 ಟಿ.ಎಂ.ಸಿ ನೀರನ್ನು ಮುಂಗಾರಿನ ಅವಧಿಯಲ್ಲಿ ಪೂರ್ವಾಭಿಮುಖವಾಗಿ ತಿರುಗಿಸಿ, ರಾಜ್ಯದ ಬರಪೀಡಿತ 7 ಜಿಲ್ಲೆಗಳಿಗೆ ಕುಡಿಯುವ ನೀರನ್ನು ಒದಗಿಸುವುದು ಹಾಗೂ 527 ಕೆರೆಗಳನ್ನು ತುಂಬಿಸುವುದು.

ಫಲಾನುಭವಿ ಜಿಲ್ಲೆಗಳು ಯಾವವು?:

7 ಜಿಲ್ಲೆಗಳ 29 ತಾಲೂಕಿನ 38 ಪಟ್ಟಣ ಪ್ರದೇಶದ ಹಾಗೂ 6657 ಗ್ರಾಮಗಳ 75.59 ಲಕ್ಷ (Projected population for 2023-24) ಜನ ಮತ್ತು ಜಾನುವಾರುಗಳಿಗೆ ಕುಡಿಯುವ ನೀರನ್ನು ಒದಗಿಸುವುದು.

Yettinahole Project

ಪ್ರಯೋಜನ ಪಡೆಯಲಿರುವ ಜಿಲ್ಲೆಗಳು:

7 ಜಿಲ್ಲೆಗಳು (ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ, ರಾಮನಗರ, ತುಮಕೂರು, ಹಾಸನ ಹಾಗೂ ಚಿಕ್ಕಮಗಳೂರು)

ಬಳಸಿಕೊಳ್ಳುವ ನೀರಿನ ಪ್ರಮಾಣ ಎಷ್ಟು?:

24.01 ಟಿ.ಎಂ.ಸಿ
ಕುಡಿಯುವ ನೀರಿಗಾಗಿ-14.056 ಟಿಎಂಸಿ
ಕೆರೆ ತುಂಬಿಸಲು- 9.953 ಟಿಎಂಸಿ

ಯೋಜನೆಯ ವೆಚ್ಚ:

  • ಯೋಜನೆಯ ಅಂದಾಜು ಮೊತ್ತ: 23,251,66 ಕೋಟಿ ರೂ.
  • ಇಲ್ಲಿಯವರೆಗಿನ ಸಂಚಿತ ವೆಚ್ಚ: 16,152.05 ಕೋಟಿ ರೂ.

ಯೋಜನೆಯ ಹಂತ-1ರ ಕಾಮಗಾರಿಗಳು:
ನದಿ ಪಾತ್ರದ ಕಾಮಗಾರಿಗಳು- 2 – Head Works: Rs.4115.33 Cr. (7 packages) (Lift Components)

ಯೋಜನೆಯ ಹಂತ-2ರ ಕಾಮಗಾರಿಗಳು:

  • ಗುರುತ್ವ ಮುಖ್ಯ ಕಾಲುವೆ- (Gravity Main Canal) 8638.37 ಕೋಟಿ ರೂ. (33 packages)
  • ಫೀಡರ್‌ ಪೈಪ್‌ಲೈನ್‌ ಕಾಮಗಾರಿಗಳು (Feeders) 8858.25 ಕೋಟಿ ರೂ. (13 packages)
  • ಸಮತೋಲನಾ ಜಲಾಶಯ (Balancing Reservoir) 592.34 ಕೋಟಿ ರೂ. (1 package)

ಯೋಜನಾ ಕಾಮಗಾರಿಗಳ ಪ್ರಸ್ತುತ ಹಂತ:

  1. ಹಂತ-1ರಲ್ಲಿ: ಏತ ಕಾಮಗಾರಿಗಳು ಮತ್ತು ವಿದ್ಯುತ್ ಪೂರೈಕೆ ಕಾಮಗಾರಿಗಳನ್ನು ಪೂರ್ಣಗೊಳಿಸಲಾಗಿದೆ (ವಿಯರ್-3ರ ವಿದ್ಯುತ್ ಕಾಮಗಾರಿಗಳನ್ನು ಹೊರತುಪಡಿಸಿ).
  2. ಹಂತ-2ರಲ್ಲಿ ಗುರುತ್ವ ಕಾಲುವೆ
    ಒಟ್ಟು ಕಾಲುವೆ ಉದ್ದ: 252.61 ಕಿ.ಮೀ
    ಪೂರ್ಣಗೊಂಡಿರುವುದು: 164.47 ಕಿ.ಮೀ
    ಪ್ರಗತಿಯಲ್ಲಿರುವುದು: 25.87 ಕಿ.ಮೀ

ಫೀಡರ್ ಕಾಮಗಾರಿಗಳು:
ಪ್ರಗತಿಯಲ್ಲಿರುವ ಫೀಡರ್ ಪೈಪ್‌ ಲೈನ್ ಕಾಮಗಾರಿಗಳು- ಮಧುಗಿರಿ-ಪಾವಗಡ ಫೀಡರ್. ಟಿ.ಜಿ.ಹಳ್ಳಿ-ರಾಮನಗರ ಫೀಡರ್ ಹಾಗೂ ಗೌರಿಬಿದನೂರು ಫೀಡರ್.

  • ಒಟ್ಟು ಉದ್ದ: 256.81 ಕಿ.ಮೀ
  • ಪೂರ್ಣಗೊಂಡಿರುವುದು: 231,73 ಕಿ.ಮೀ
  • ಪ್ರಗತಿಯಲ್ಲಿರುವುದು: 25.08 ಕಿ.ಮೀ

ಪ್ರಾರಂಭಿಸಬೇಕಿರುವ ಫೀಡರ್ ಪೈಪ್‌ ಲೈನ್ ಕಾಮಗಾರಿಗಳು- ಕೋಲಾರ ಮತ್ತು ಶ್ರೀನಿವಾಸಪುರ ಫೀಡರ್

  • ಒಟ್ಟು ಉದ್ದ- 227.93 0 ಕಿ.ಮೀ
  • ಕೋಲಾರ ಫೀಡರ್: 90.48 ಕಿ.ಮೀ
  • ಶ್ರೀನಿವಾಸಪುರ ಫೀಡರ್: 137.45 ಕಿ.ಮೀ (ಬಾಗೇಪಲ್ಲಿ ಮತ್ತು ಕನ್ನಮಂಗಲ ಫೀಡರ್ ಒಳಗೊಂಡಂತೆ)
  • ಸಮತೋಲನಾ ಜಲಾಶಯ:
  • 1.88 ಟಿ.ಎಂ.ಸಿ ಸಂಗ್ರಹಣಾ ಸಾಮರ್ಥ್ಯದ ಸಮತೋಲನಾ ಜಲಾಶಯ ನಿರ್ಮಾಣ ಕಾಮಗಾರಿಯನ್ನು ಬದಲಾದ ಕಾಮಗಾರಿಯ ಸ್ವರೂಪಕ್ಕನುಗುಣವಾಗಿ ಕೈಗೊಳ್ಳಲು ಕ್ರಮ ವಹಿಸಲಾಗುತ್ತಿದೆ.
  • ಈ ಯೋಜನೆಯನ್ನು 2026-27ನೇ ಸಾಲಿನಲ್ಲಿ 2027ರ ಮಾರ್ಚ್‌ 31ಕ್ಕೆ ಅಂತ್ಯಕ್ಕೆ ಆದ್ಯತೆ ಮೇರೆಗೆ ಪೂರ್ಣಗೊಳಿಸಲು ಕಾರ್ಯಕ್ರಮ ರೂಪಿಸಲಾಗಿದೆ.
  • ಪ್ರಸ್ತುತ ಸಮಗ್ರ ಕುಡಿಯುವ ನೀರಿನ ಯೋಜನೆಯ ಹಂತ-1 ರ ವಿಯರ್,2,4,5,6,7&8 ರಿಂದ ಒಟ್ಟಾರೆ 79.50 ಕ್ಯುಮೆಕ್ಸ್ (2800.00 ಕ್ಯೂಸೆಕ್) ನೀರನ್ನೆತ್ತಿ ವಿತರಣಾ ತೊಟ್ಟಿ-3 ರವರೆಗೆ (Delivery Chamber-3) ಪೂರೈಸಿ ತದನಂತರ ವಿತರಣಾ ತೊಟ್ಟಿ-3 ರಿಂದ ನೀರನ್ನೆತ್ತಿ ವಿತರಣಾ ತೊಟ್ಟಿ-4 (Delivery Chamber-4) ರ ಮುಖಾಂತರ 79.50 ಕ್ಯುಮೆಕ್ಸ್‌ (2800.00 ಕ್ಯೂಸೆಕ್) ನೀರನ್ನು ಹರಿಸಲು ಯೋಜಿಸಲಾಗಿದೆ.‌
  • ಗುರುತ್ವ ಕಾಲುವೆಯು ಒಟ್ಟು 252.61 ಕಿ.ಮೀ ಉದ್ದವಿದ್ದು, ಈ ಪೈಕಿ 164.47 ಕಿ.ಮೀ. ಪೂರ್ಣಗೊಂಡಿದ್ದು, 25.87 ಕಿ.ಮೀ ಪ್ರಗತಿಯಲ್ಲಿರುತ್ತದೆ. ಗುರುತ್ವ ಕಾಲುವೆಯ ಸ:0.00 ಕಿ.ಮೀ ಯಿಂದ ಸ:42.00 ಕಿ.ಮೀ ವರಗಿನ ಕಾಮಗಾರಿಗಳು ಯಾವುದೇ ಅಡೆತಡೆಯಿಲ್ಲದೆ ಪೂರ್ಣಗೊಂಡಿದ್ದು, ನಂತರದ ಕಾಮಗಾರಿಗಳು ಅರಣ್ಯ ಮತ್ತು ಭೂಸ್ವಾಧೀನ ಸಮಸ್ಯೆಯಿಂದಾಗಿ ಪೂರ್ಣಗೊಂಡಿರದ ಕಾರಣ, ಗುರುತ್ವ ಕಾಲುವೆಯ ಸ:32.50 ಕಿ.ಮೀ ನಲ್ಲಿರುವ ನಾಲಾ ಎಸ್ಕೆಪ್ ಮೂಲಕ ಸುಮಾರು 132.50 ಕಿ.ಮೀ ದೂರದಲ್ಲಿರುವ ವಾಣಿ ವಿಲಾಸ ಸಾಗರಕ್ಕೆ ವೇದಾ ವ್ಯಾಲಿಯ ಮುಖಾಂತರ ತಾತ್ಕಾಲಿಕವಾಗಿ ಸೆ. 6ರಿಂದ 1500 ಕ್ಯೂಸೆಕ್ಸ್ ನೀರನ್ನು ಹರಿಸಲು ಕ್ರಮ ಕೈಗೊಳ್ಳಲಾಗಿದೆ.

Leave a Reply

Your email address will not be published. Required fields are marked *