Friday, 13th December 2024

ವಿಶ್ವಕ್ಕೆ ಯೋಗ ಕಲಿಸಿಕೊಟ್ಟ ದೇಶ ಭಾರತ: ಭರತಗೌಡ

ಅಡವಿ ಸೋಮನಾಳದಲ್ಲಿ ವಾಸ್ತವ್ಯ: ೬೦ ಕಿಮಿ ಪೂರೈಸಿದ ಸಂಕಲ್ಪ ನಡಿಗೆ: ಚವನಭಾವಿಯಲ್ಲಿ ಹೂಹಾಸಿನ ಅದ್ದೂರಿ ಸ್ವಾಗತ

ಮುದ್ದೇಬಿಹಾಳ: ಇಡೀ ವಿಶ್ವಕ್ಕೆ ಯೋಗ ಕಲಿಸಿಕೊಟ್ಟ, ಯೋಗದ ಮಹತ್ವ ತಿಳಿಸಿಕೊಟ್ಟ ದೇಶ ನನ್ನ ಭಾರತ ಎನ್ನುವ ಹೆಮ್ಮೆ ಎಲ್ಲ ಯುವ ಸಮೂಹದಲ್ಲಿ ಮೂಡಬೇಕು. ನಮ್ಮ ದೇಶ ವಿಶ್ವಕ್ಕೆ ಮಾದರಿಯಾಗುವ ಅತ್ಯುತ್ತಮ ಸಂಸ್ಕೃತಿ ತಿಳಿಸಿಕೊಡಲು ಇಮದಿನ ನಮ್ಮೆಲ್ಲ ಯುವ ಜನಾಂಗ ದೇಶದ ಸ್ವಾತಂತ್ರö್ಯಕ್ಕಾಗಿ ಬಲಿದಾನಗೈದ ಎಲ್ಲರನ್ನೂ ಸ್ಮರಿಸುವ, ಗೌರವಿಸುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ಯುವಜನ ಸಂಕಲ್ಪ ನಡಿಗೆಯ ನೇತೃತ್ವ ವಹಿಸಿಕೊಂಡಿರುವ ಯುವ ಉದ್ಯಮಿ ಭರತಗೌಡ ಪಾಟೀಲ ನಡಹಳ್ಳಿ ಹೇಳಿದರು.

ನಾಲತವಾಡ ಮತ್ತು ಅಡವಿ ಸೋಮನಾಳ ಮಾರ್ಗಮಧ್ಯೆ ಬರುವ ಚವನಭಾವಿ ಗ್ರಾಮದಲ್ಲಿ ಬುಧವಾರ ಯುವಜನ ಸಂಕಲ್ಪ ನಡಿಗೆಗೆ ನೀಡಿದ ಅಭೂತಪೂರ್ವ ಸ್ವಾಗತಕ್ಕೆ ಗೌರವಾರ್ಥವಾಗಿ ಅವರು ಮಾತನಾಡಿದರು.

ನನ್ನ ಭಾರತ ದೇಶದ ಸಂಸ್ಕೃತಿ, ಶೇಷ್ಠತೆ, ಶ್ರೀಮಂತಿಕೆ ನನ್ನ ದೇಶದ ಜನರ ನಡವಳಿಕೆಯಲ್ಲಿ, ತ್ಯಾಗ ಬಲಿದಾನಗಳಲ್ಲಿದೆ. ಜಗತ್ತಿನ ಅತಿ ಶಕ್ತಿಶಾಲಿ ದೇಶ ಯಾವುದು ಎಂದು ಕೇಳಿದರೆ ಚೈನಾ, ಅಮೇರಿಕ, ರಷ್ಯಾ ಎಂದು ಹೇಳುವ ಬದಲು ನನ್ನ ದೇಶ ಭಾರತ ಜಗತ್ತಿನ ಅತಿ ಶಕ್ತಿಶಾಲಿ ದೇಶ ಎಂದು ಹೇಳುವ ಶಕ್ತಿ, ಮನೋಭಾವ ಪ್ರತಿಯೊಬ್ಬ ಯುವಕ, ಯುವತುಯರಲ್ಲಿ ಬರಬೇಕು. ಇಡೀ ಜಗತ್ತಿನ ಮೂರು ಬಲಿಷ್ಠ ರಾಷ್ಟçಗಳಲ್ಲಿ ನನ್ನ ದೇಶ ಭಾರತವೂ ಒಂದು ಎನ್ನುವ ಸಂಕಲ್ಪ ಪ್ರತಿಯೊಬ್ಬರಲ್ಲಿ ಮೂಡಬೇಕು ಎಂದರು.

ನಮ್ಮ ದೇಶವನ್ನಾಳಿದ ಬ್ರಿಟೀಷರ ನಾಡು ಇಂಗ್ಲ0ಡಿಗೆ ಪ್ರಧಾನಿ ಯಾಗುವ ರೇಸಿನಲ್ಲಿರುವವರು ನನ್ನ ಭಾರತದೇಶ ಮೂಲಕ ರಿಶಿ ಸುನಾಕ್ ಅನ್ನೋದು ನನ್ನ ದೇಶದ ಬೌದ್ಧಿಕ ಸಾಮರ್ಥ್ಯದ ಸಂಕೇತವಾಗಿದೆ. ನಮ್ಮ ದೇಶದ ಸೈನ್ಯ ಅತ್ಯಂತ ಬಲಿಷ್ಠ ವಾಗಿದ್ದು ವಿಶ್ವದ ಎರಡನೇ ಅತಿ ದೊಡ್ಡ ಮತ್ತು ಬಲಿಷ್ಠ ಸೈನ್ಯ ಹೊಂದಿರುವ ನಾವು ಶತೃದೇಶಗಳಿಗೆ ಹೆದರಬೇಕಿಲ್ಲ. ಆದರೆ ನಮ್ಮ ಶತೃ ಯಾರೇ ಇದ್ದರು ಮೊದಲು ಅವರನ್ನು ತಲೆಬಾಗಿ ಗೌರವಿಸು ಎಂದು ಶೇಷ್ಠ ಸಂಸ್ಕೃತಿ ಹೇಳಿಕೊಟ್ಟ ದೇಶ ನನ್ನ ಭಾರತ ಎನ್ನುವುದು ಎಲ್ಲರಿಗೂ ಗೊತ್ತಾಗಬೇಕು ಎಂದರು.

ನಡಿಗೆಯ ರೂವಾರಿ ಶಾಸಕ ಎ.ಎಸ್.ಪಾಟೀಲ ನಡಹಳ್ಳಿ ಮಾತನಾಡಿ ಅಡವಿ ಸೋಮನಾಳದಲ್ಲಿ ವಾಸ್ತವ್ಯ ಹೂಡುವ ೬ನೇ ದಿನದ ನಡಿಗೆ ಗುರುವಾರ ಬೆಳಿಗ್ಗೆ ಶಿವಪುರ ಮಾರ್ಗವಾಗಿ ಮಿಣಜಗಿಯತ್ತ ಮುನ್ನುಗ್ಗಿ ೭ನೇ ದಿನದ ನಡಿಗೆ ಪೂರೈಸುತ್ತದೆ. ಚವನಭಾವಿಯ ಜನರು ನನ್ನ ಮತ್ತು ನನ್ನ ಕುಟುಂಬದವರ ಮೇಲೆ ಅತಿ ಹೆಚ್ಚು ಪ್ರೀತಿ, ಅಭಿಮಾನ ಇಟ್ಟು ಕೊಂಡಿದ್ದಾರೆ. ಅದಕ್ಕೆ ಪೂರಕ ಇವತ್ತಿನ ಅತ್ಯದ್ಭುತದ ಸ್ವಾಗತದ ಸಂಭ್ರಮ.

ಸ್ವಾತಂತ್ರö್ಯ ಚಳವಳಿ ಹೇಗಿತ್ತು ಅನ್ನೋದನ್ನು ನೋಡಲು, ಅನುಭವಿಸಲು ಪ್ರತಿಯೊಬ್ಬರೂ ಈ ನಡಿಗೆಯಲ್ಲಿ ಭಾಗವಹಿಸಿ ದರೆ ಅರ್ಥ ಆಗುತ್ತದೆ.

ಇದೊಂದು ಅತ್ಯದ್ಭುತವಾದ ನಡಿಗೆ ಇದರಲ್ಲಿ ಭಾಗವಹಿಸುವುದು ಅತ್ಯದ್ಭುತ ಅನುಭವ ಎಂದು ಹೇಳಿ ೧೯೪೭ ರಿಂದ ಇವತ್ತಿನ ೭೫ ವರ್ಷಗಳವರೆಗೆ ದೇಶ ನಡೆದುಕೊಂಡು ಬಂದ ದಾರಿ, ದೇಶದ ಬಜೆಟ್‌ನ ಗಾತ್ರ ಮುಂತಾ ದವುಗಳ ಬಗ್ಗೆ ತಿಳಿವು ಮೂಡಿಸಿದರು.

ಇದಕ್ಕೂ ಮುನ್ನ ಗ್ರಾಮ ಪ್ರವೇಶಿಸಿದ ಜಾಥಾ ಮುಂಚೂಣಿಯಲ್ಲಿದ್ದ ಶಾಸಕ ನಡಹಳ್ಳಿ, ಭರತಗೌಡ, ಕಲಾವಿದರು ಮತ್ತು ದೇಶಭಕ್ತರ ಪ್ರತಿಕೃತಿ ಹೊತ್ತ ಭಾರತಮಾತೆಯ ಟ್ಯಾಬ್ಲೋಗೆ ಗ್ರಾಮಸ್ತರು ಹೂಮಳೆ ಸುರಿಸಿ, ಹೂಹಾಸಿಗೆ ಹಾಸಿ ಅದ್ದೂರಿ ಸ್ವಾಗತ ನೀಡಿದರು. ಅಲ್ಪ ವಿರಾಮದ ನಂತರ ಮತ್ತದೇ ವೈಭವದೊಂದಿಗೆ ಅಡವಿಸೋಮನಾಳದತ್ತ ಬೀಳ್ಕೊಟ್ಟು ಸಹಸ್ರ ಸಹಸ್ರ ಸಂಖ್ಯೆಯಲ್ಲಿ ಪಾಲ್ಗೊಂಡು ಸಂಭ್ರಮಿಸಿದರು.

***
ಪೂರ್ವಜರು, ಗುರು ಹಿರಯರು ದೇಶ ಕಟ್ಟಿದ್ದಾರೆ. ಸೈನಿಕರು ದೇಶ ರಕ್ಷಸಿದ್ದಾರೆ. ಇವರ ಇತಿಹಾಸವನ್ನು ನಾವೆಲ್ಲ ಯುವಕರು ಓದಬೇಕು. ಪ್ರತಿ ವರ್ಷ ಸ್ವತಂತ್ರ ಸಂಭ್ರಮವನ್ನು ಹಬ್ಬದಂತೆ ಆಚರಿಸಬೇಕು. ಮುಂದಿನ ೨೫ ವರ್ಷಗಳ ನಮ್ಮ ಇತಿಹಾಸ ವನ್ನು ನಾವು ನಿರ್ಮಿಸಬೇಕು. ಇದಕ್ಕಾಗಿ ಇಡೀ ಯುವ ಸಮೂಹ ಒಟ್ಟಾಗಿ ನಡೆಯಬೇಕು.
-ಭರತಗೌಡ ಪಾಟೀಲ ನಡಹಳ್ಳಿ, ಯುವಜನ ಸಂಕಲ್ಪ ನಡಿಗೆಯ ನೇತಾರ.

ನಡಿಗೆಯಲ್ಲಿ ೧೦೦೦೦ ಜನ ನೋಂದಣಿ ಮಾಡಿಕೊಂಡು ಭಾಗವಹಿಸಬಹುದು ಅನ್ಕೊಂಡಿದ್ದೆ. ಆದ್ರೆ ಇವತ್ತು ೩೧೫೦೦ ಯುವಕರು, ೧೮೨೯೭ ಯುವತಿಯರು ಆನಲೈನ್ ನೋಂದಣಿ ಮಾಡಿಕೊಂಡು ನಡಿಗೆಯಲ್ಲಿ ಸ್ವಯಂಪ್ರೇರಿತರಾಗಿ ಭಾಗವಹಿಸಲು ಮುಂದೆ ಬಂದಿದ್ದಾರೆ. ಇವರೆಲ್ಲರಿಗೂ ಸಮವಸ್ತç, ರಾಷ್ಟçಧ್ವಜ ನೀಡಿ ರಾಷ್ಟçನಿರ್ಮಾಣಕ್ಕಾಗಿ ಇವರನ್ನು ಹುರಿದುಂಬಿಸಿ ಸಂಕಲ್ಪದ ನಡಿಗೆಗೆ ಅವಕಾಶ ಕೊಟ್ಟದ್ದು ಈ ನಾಡಿಗೆ ಬಹುದೊಡ್ಡ ಕೊಡುಗೆ ಕೊಟ್ಟಂತೆ.
-ಎ.ಎಸ್.ಪಾಟೀಲ ನಡಹಳ್ಳಿ, ಶಾಸಕರು, ಯುವಜನ ಸಂಕಲ್ಪ ನಡಿಗೆಯ ಸಂಘಟಕರು.