ಹರಪನಹಳ್ಳಿ: ತಾಲೂಕಿನ ದುಗ್ಗಾವತಿ ಗ್ರಾಮದ ಯುವ ನಾಯಕ ಹಾಗೂ ವಕೀಲರಾದ ಸಿದ್ದಲಿಂಗನಗೌಡ ಇವರ ಸಾಮಾಜಿಕ ಕಾರ್ಯ ಮೆಚ್ಚಿ, ಹರಪನಹಳ್ಳಿ ತಾಲೂಕು ವಿಧಾನ ಸಭಾ ಕೇತ್ರದ ಪ್ರಬಲ ಆಕಾಂಕ್ಷಿ ಎಂ.ಪಿ.ವೀಣಾ ಮಹಾಂತೇಶ್ ಕಾಂಗ್ರೆಸ್ ಮುಖಂಡರು ಇವರು ಅಧಿನದಲ್ಲಿ ರಾಜಕೀಯಕ್ಕೆ ಧುಮುಕಿದ ಯುವ ನಾಯಕನ ಕಾರ್ಯ ಮೆಚ್ಚಿ ರಾಜ್ಯ ಕೆಪಿಸಿಸಿ ಕಾನೂನು ಮಾನವ ಹಕ್ಕುಗಳ ಮತ್ತು ಮಾಹಿತಿ ವಿಭಾಗದ ರಾಜ್ಯದ ಅಧ್ಯಕ್ಷ ಎ.ಎಸ್.ಪೊನ್ನಣ್ಣ ರವರ ಆದೇಶದ. ಮೆರೆಗೆ ಹಾಗೂ ರಾಜ್ಯ ಕಾಂಗ್ರೆಸ್ ನಾಯಕರ ಆದೇಶದ ಮೆರೆಗೆ ಇವರನ್ನು ಕೆಪಿಸಿಸಿ ಕಾನೂನು, ಮಾನವ ಹಕ್ಕುಗಳು ಮತ್ತು ಮಾಹಿತಿ ಹಕ್ಕು ಜಿಲ್ಲಾ ಉಪಾಧ್ಯಕ್ಷರಾನ್ನಾಗಿ ಆಯ್ಕೆ ಮಾಡಿದ್ದಾರೆ.
ಇತಿಹಾಸ ಪ್ರಸಿದ್ಧ ವಿಜಯನಗರ ಜಿಲ್ಲೆಯ ಕೆಪಿಸಿಸಿಯ ಕಾನೂನು ಮಾನವ ಹಕ್ಕುಗಳ ಮತ್ತು ಮಾಹಿತಿ ವಿಭಾಗದ ಜಿಲ್ಲಾ ಉಪಾಧ್ಯಕ್ಷರಾಗಿ ಆಯ್ಕೆ ಪತ್ರವನ್ನು ನೀಡುವ ಮುಖಾಂತರವಾಗಿ ಅಧಿಕೃತವಾಗಿ ಘೋಷಿಸಿದರು. ಇದೇ ಸಂದರ್ಭದಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಸಲೀಂ ಅಹಮದ್ ರವರು ಯುವಕರಿಂದ ಮಾತ್ರ ಪಕ್ಷವನ್ನು ತಳ ಮಟ್ಟದಿಂದ ಕಟ್ಟಲು ಸಾಧ್ಯ, ನಿಮ್ಮಿಂದ ಪಕ್ಷಕ್ಕೆ ಸಾಕಷ್ಟು ಸೇವೆ ಒದಗಲಿ ಎಂದು ಹಾಗೂ ಪಕ್ಷ ಸಂಘಟನೆಗೆ ನಿರಂತರ ಪರಿಶ್ರಮ ವಹಿಸಿ ಎಂದು ಶುಭ ಹಾರೈಸಿದರು.
ಜಿಲ್ಲೆಯ ನೂತನ ಉಪಾಧ್ಯಕ್ಷರಾಗಿ ಆಯ್ಕೆಯಾದ ಯುವ ವಕೀಲ ಯುವ ಕಾಂಗ್ರೆಸ್ ನಾಯಕ ಸಿದ್ದಲಿಂಗನಗೌಡ ಕರೇಗೌಡ್ರು ದುಗ್ಗಾವತಿ, ಹಾಗೂ ಹರಪನಹಳ್ಳಿ ಯುವ ಕಾಂಗ್ರೆಸ್ ಉಪಾಧ್ಯಕ್ಷರಾದ ದಾದಾಪೀರ್ ಮಕರಬ್ಬಿ, ಚಂದ್ರಶೇಖರ್ ದುಗ್ಗಾವತಿ, ಮಹಿಳಾ ವಿಭಾಗದ ಉಪಾಧ್ಯಕ್ಷರಾದ ಲಕ್ಷ್ಮಿ ಮೇಡಂ ರವರು ಕೆಪಿಸಿಸಿ ಮಹಿಳಾ ಕಾನೂನು ಮಾನವ ಹಕ್ಕುಗಳ ಮತ್ತು ಮಾಹಿತಿ ವಿಭಾಗದ ಉಪಾಧ್ಯಕ್ಷರು ಹೊಸಪೇಟೆ ಹಾಗೂ ಮಹಿಳಾ ಕಾರ್ಯಕರ್ತರು ಭಾಗವಹಿಸಿದ್ದರು.
ಚಿತ್ರ: ಸಿದ್ದಲಿಂಗನಗೌಡ.