ಸಾಂಸ್ಕøತಿಕ ಕಾರ್ಯಕ್ರಮ: ಗಣ್ಯರಿಗೆ ಔತಣಕೂಟ
ಮುದ್ದೇಬಿಹಾಳ: ವಿಶ್ವದ ಅತಿ ಹೆಚ್ಚು ಯುವಶಕ್ತಿ ಭಾರತದಲ್ಲಿದೆ. ಇಂಥ ದೇಶವನ್ನು ಇನ್ನಷ್ಟು ಹೆಚ್ಚು ಬಲಿಷ್ಠಗೊಳಿಸಲು ಯುವ ಶಕ್ತಿ ಮುಂದಾಗಬೇಕು. ಇದಕ್ಕಾಗಿ ದೇಶ ಮೊದಲು ಎನ್ನುವ ಸಂಕಲ್ಪ ವನ್ನು ಯುವಶಕ್ತಿ ತೊಡಬೇಕು. ವಿಶ್ವಕ್ಕೆ ಜೀವನದ ಪದ್ದತಿ ಯನ್ನು ಕಲಿಸಿದ ಸರ್ವಶ್ರೇಷ್ಠ ಭಾರತ ನನ್ನದು ಎನ್ನುವ ಹೆಮ್ಮೆ ಯುವಶಕ್ತಿಗಿರಬೇಕು ಎಂದು ಯುವಜನ ಸಂಕಲ್ಪ ನಡಿಗೆಯ ನೇತೃತ್ವ ವಹಿಸಿಕೊಂಡಿರುವ ಯುವ ಉದ್ಯಮಿ ಭರತಗೌಡ ಪಾಟೀಲ ನಡಹಳ್ಳಿ ಕರೆ ನೀಡಿದರು.
ಇಲ್ಲಿನ ಆಲಮಟ್ಟಿ ರಸ್ತೆಯಲ್ಲಿರುವ ಮದರಿ ಕಲ್ಯಾಣಮಂಟಪದಲ್ಲಿ ರವಿವಾರ ಏರ್ಪಡಿಸಿದ್ದ ಸಾಂಸ್ಖøತಿಕ ಕಾರ್ಯಕ್ರಮ ಮತ್ತು ಗಣ್ಯರು, ಹಿರಿಯರಿಗೆ ನಡಿಗೆಯ ಗೌರವಾರ್ಥ ಔತಣಕೂಟದ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಭಾರತ ದೇಶದ ಸಂಸ್ಕೃತಿ ವಿಶ್ವಕ್ಕೆ ಮಾದರಿಯಾಗಿದೆ. ಜಗತ್ತಿಗೆ ಗಣಿತದ ಕೊಡುಗೆ, ವಿಜ್ಞಾನದ ಮಹತ್ವ, ಆಯುರ್ವೇದದ ಶಕ್ತಿ ಪರಿಚಯಿಸಿದ್ದು ಮಾತ್ರವಲ್ಲದೆ ಜಗತ್ತಿನಲ್ಲಿ ಅತಿ ಹೆಚ್ಚು ಹಾಲನ್ನು ಉತ್ಪಾದಿಸುವ, ಕಬ್ಬು ಮತ್ತು ಭತ್ತ ಬೆಳೆಯುವ ದೇಶ ಎನ್ನಿಸಿ ಕೊಂಡಿದೆ. ಜಗತ್ತಿನ ಮುಂದುವರೆದ ದೇಶಗಳಿಗೆ ಡಾಕ್ಟರ್, ಇಂಜನಿಯರ್, ಸೈಂಟಿಸ್ಟಗಳನ್ನು ನೀಡಿದೆ. ತಂತ್ರಜ್ಞಾನ ದಲ್ಲಿಯೂ ನಾವು ಮುಂದಿದ್ದೇವೆ. ದೈತ್ಯ ಮೈಕ್ರೋಸಾಫ್ಟ್ನ ಸಿಇಓ ಭಾರತೀಯನಾಗಿದ್ದು ಹೆಮ್ಮೆ ಪಡುವಂಥದ್ದು ಎಂದರು.
ಭಾರತದ ಸಂಪತ್ತನ್ನು ಅನೇಕರು ದೋಚಿದರೂ ಇನ್ನೂ ಹೆಚ್ಚಾಗುತ್ತಿದೆ. ಹಲವು ಅನ್ಯಧರ್ಮೀಯ ರಾಜರು ನಮ್ಮ ಸಂಸ್ಕøತಿ ನಾಶಕ್ಕೆ ಯತ್ನಿಸಿದರೂ ಅದಿನ್ನೂ ಹೆಮ್ಮರವಾಗಿ ಬೆಳೆಯುತ್ತಿದೆ. ನಮ್ಮ ದೇಶಕ್ಕೆ ಶತೃವೇ ಬರಲಿ, ಮಿತ್ರರೇ ಬರಲಿ ಇಬ್ಬರನ್ನೂ ಸಮಾನವಾಗಿ ಕಾಣುವ ಸಮತಾವಾದದ ಸಂಸ್ಖತಿ ನಮ್ಮದು ಎಂದು ಹೇಳಿ ಹುತಾತ್ಮ ಚಂದ್ರಶೇಖರ ಆಜಾದ್ ಅವರ ದೇಶಪ್ರೇಮದ ಕಥೆಯನ್ನು ಕಣ್ಣಿಗೆ ಕಟ್ಟುವಂತೆ ಹೇಳಿ ನೆರೆದ ಜನರಲ್ಲಿ ದೇಶಪ್ರೇಮ ಜಾಗೃತಗೊಳಿಸಿದರು.
ಯುವಜನ ಸಂಕಲ್ಪ ನಡಿಗೆಯ ಸಂಘಟಕ, ಶಾಸಕ ಎ.ಎಸ್.ಪಾಟೀಲ ನಡಹಳ್ಳಿ ಮಾತನಾಡಿ, ದೇಶದ ಸ್ವಾತಂತ್ರಕ್ಕಾಗಿ ಹೋರಾಡುವ ಸಂದರ್ಭ ಇಂದಿನ ತಲೆಮಾರಿನವರಿಗೆ ಬರಲಿಲ್ಲ. ನಾವು ಹೋರಾಡಿಲ್ಲ, ನಮ್ಮ ಪ್ರಾಣವನ್ನೂ ನೀಡಿಲ್ಲ. ಆದರೆ ದೇಶದ ಸ್ವಾತಂತ್ರಕ್ಕಾಗಿ ಹೋರಾಡಿದವರನ್ನ, ಬಲಿದಾನ ಗೈದವರನ್ನ ಸ್ವಾತಂತ್ರ್ಯ ಅಮೃತ ಮಹೋತ್ಸವದ ಈ ಸಂದರ್ಭ ಸ್ಮರಿಸುವ ಮೂಲಕ ಅವರೆಲ್ಲರಿಗೂ ಗೌರವ ಅರ್ಪಿಸೋಣ. ಯುವಜನ ಸಂಕಲ್ಪ ನಡಿಗೆಯ ಉದ್ದೇಶವೂ ಇದೇ ಆಗಿದೆ. ಇಲ್ಲಿ ಯಾವುದೇ ರಾಜಕೀಯ ಇಲ್ಲ.
ರಾಜಕಾರಣಿಗಳ ಗುಣಗಾನವೂ ನಡೆಯೊಲ್ಲ. ಕೇವಲ ದೇಶಪ್ರೇಮ ಅನಾವ ರಣಗೊಳಿಸುವ, ಸ್ವಾತಂತ್ರ್ಯ ಹೋರಾಟಗಾರರ ಸ್ಮರಿಸುವ ಕಾರ್ಯ ಮಾತ್ರ ಇಲ್ಲಿ ನಡೆಯಲಿದೆ. ಇಷ್ಟು ದಿನ ಯುಶಕ್ತಿಯ ದೇಶಭಕ್ತಿ ನುಡಿ ಗಳಲ್ಲಿತ್ತು ಅದಿಂದು ನಡಿಗೆಯಲ್ಲಿ ಹೊರಹೊಮ್ಮುತ್ತಿದೆ. ಇದನ್ನು ಜನರೇ ಹೇಳುತ್ತಿರುವುದು ಸಂಘಟಕನಾಗಿರುವ ನನಗೆ ಖುಷಿ ನೀಡುವಂಥದ್ದು ಎಂದರು.
ಕಾರ್ಯಕ್ರಮದಲ್ಲಿ ಪಟ್ಟಣದ ಗಣ್ಯರಾದ ಮಹಾಂತಪ್ಪ ನಾವದಗಿ, ಬಸವರಾಜ ಮೋಟಗಿ, ರಾಜೇಂದ್ರ ಭೋಸಲೆ, ಜಗನ್ನಾಥ ಗೌಳಿ, ಅಶೋಕ ತಡಸದ, ಬಾಬು ಬಿರಾದಾರ, ಡಾ| ಪರಶುರಾಮ ಪವಾರ, ಲಿಂಗರಾಜ ಮಹೇಂದ್ರಕರ, ವಾಸುದೇವ ಶಾಸ್ತ್ರಿ, ಬಸನಗೌಡ ಪಾಟೀಲ, ಸತೀಶಕುಮಾರ ಓಸ್ವಾಲ, ವಿಕ್ರಮ ಓಸ್ವಾಲ, ಪ್ರಭು ಕಡಿ, ರಾಜೇಂದ್ರಗೌಡ ರಾಯಗೂಂಡ, ಸಿ.ಪಿ.ಸಜ್ಜನ, ಮಾರುತಿ ನಲವಡೆ, ಪ್ರಭುರಾಜ ಕಲಬುರಗಿ, ರಾಜು ಬಳ್ಳೊಳ್ಳಿ, ಶ್ರೀಶೈಲ್ ದೂಡಮನಿ, ಸಿದ್ದನಗೌಡ ಪಾಟೀಲ, ಕಾಶಿಬಾಯಿ ರಾಂಪೂರ, ಸಂಗಮ್ಮ ದೇವರಳ್ಳಿ, ಬಸಮ್ಮ ಸಿದರಡ್ಡಿ, ಗೌರಮ್ಮ ಹುನಗುಂದ, ಕೆ.ಎಂ.ರಿಸಾಲ್ದಾರ, ಮಹಿಬೂಬ ಮುಲ್ಲಾ, ಸುಧೀರ ನಾವದಗಿ, ರವಿ ತಡಸದ, ಡಾ| ವೀರೇಶ ಪಾಟೀಲ, ಶಾಸಕರ ತಂದೆ ಸಂಗನಗೌಡ, ತಾಯಿ ಗಂಗಾಬಾಯಿ, ತಹಶೀಲ್ದಾರ ಬಿ.ಎಸ್ ಕಡಕಭಾವಿ, ತಾಪಂ ಇಓ ಶಿವಾನಂದ ಹೊಕ್ರಾಣಿ, ಪುರಸಭೆ ಮುಖ್ಯಾಧಿಕಾರಿ ಎಸ್.ಎಸ್.ಬಾಗಲ ಕೋಟ, ಪಿಡಬ್ಲೂಡಿ ಎಇಗಳಾದ ಅಶೋಕ ಬಿರಾದಾರ, ಸಂದೀಪ, ತಾಲೂಕು ಆರೋಗ್ಯಾಧಿಕಾರಿ ಡಾ| ಸತೀಶ ತಿವಾರಿ, ತಾಲೂಕು ಸರ್ಕಾರಿ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ| ಅನೀಲಕುಮಾರ ಶೇಗುಣಸಿ, ಡಿವೈಎಸ್ಪಿ ಅರುಣಕುಮಾರ ಕೋಳೂರ, ಸಿಪಿಐ ಆನಂದ ವಾಗ್ಮೋಡೆ, ಪಿಎಸೈ ರೇಣುಕಾ ಜಕನೂರ, ವಿವಿಧ ಸಂಘ ಸಂಸ್ಥೆಗಳ ಮುಖಂಡರು ಸೇರಿ ಅನೇಕರು ಪಕ್ಷಾತೀತ, ಜಾತ್ಯಾತೀತವಾಗಿ ಪಾಲ್ಗೊಂಡಿದ್ದರು.
ಭಾರತ ಮಾತೆಯ ವೇಷಧಾರಿ ಚಿಣ್ಣರಾದ ಮಾಹಿಲ್ ಢವಳಗಿ, ರಿದಾ ಢವಳಗಿ ಅವರಿಂದ ಜ್ಯೋತಿ ಬೆಳಗಿಸುವ ಮುಖಾಂತರ ಉದ್ಘಾಟಿಸಿದ್ದು ಸೌಹಾರ್ದತೆಯ ವಿಶೇಷವಾಗಿತ್ತು. ನಂತರ 15 ನಿಮಿಷಗಳವರೆಗೆ ವೇದಿಕೆಯ ಮೇಲೆ ರಾಜ್ಯದ ವಿವಿಧೆಡೆ ಯಿಂದ ಆಗಮಿಸಿದ್ದ ಸಾಂಸ್ಕೃತಿಕ ಕಲಾ ತಂಡಗಳ ಸಂಪ್ರದಾಯದ ವಾದ್ಯ ಮೊಳಗಿಸಿದ್ದು ದೇಶಭಕ್ತಿ ಮೇಳೈಸಿದಂತಿತ್ತು.
***
ಪ್ರತಿ ವರ್ಷವೂ ಸ್ವಾತಂತ್ರ್ಯ ದಿನವನ್ನು ಹಬ್ಬದ ರೀತಿಯಲ್ಲಿ ಆಚರಿಸಬೇಕು. ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದ ಪೂರ್ವಜರನ್ನು ಸ್ಮರಿಸಬೇಕು. ಈಗ ಸ್ವಾತಂತ್ರ್ಯದ 75ನೇ ಅಮೃತ ಮಹೋತ್ಸವ ಆಚರಿಸುತ್ತಿರುವ ನಮ್ಮ ಯುವಶಕ್ತಿ ಮುಂದಿನ 25 ವರ್ಷದ ನಂತರ ಶತಮಾನೋತ್ಸವದ ಹೊಸ ಇತಿಹಾಸ ನಿರ್ಮಾಣ ಸಾಕ್ಷೀಕರಿಸುವಂತಾಗಬೇಕು.
-ಭರತಗೌಡ ಪಾಟೀಲ ನಡಹಳ್ಳಿ, ಯುವ ಉದ್ಯಮಿ, ಯುಜನ ಸಂಕಲ್ಪ ನಡಿಗೆಯ ನೇತಾರ.