Wednesday, 1st February 2023

ಬಂಗಾಳದಲ್ಲಿ ಬಿಜೆಪಿ ರ‍್ಯಾಲಿ: ಕಲ್ಲು ತೂರಾಟ

ಕೊಲ್ಕತಾ: ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ರ‍್ಯಾಲಿಯ ವೇಳೆ ಕಲ್ಲು ತೂರಾಟ ಘಟನೆ ಸಂಭವಿಸಿದೆ.

ಕೇಂದ್ರ ಸಚಿವೆ ದೇವಶ್ರೀ ಚೌದರಿ, ರಾಜ್ಯ ಬಿಜೆಪಿ ಅಧ್ಯಕ್ಷ ದಿಲೀಪ್‌ ಘೋಷ್‌ ಮತ್ತು ಸುವೇಂದು ಅಧಿಕಾರಿ ಸೇರಿದಂತೆ ಹಲವು ನಾಯಕರು ಕೊಲ್ಕತ್ತಾದಲ್ಲಿ ಸೋಮವಾರ ನಡೆಸುತ್ತಿದ್ದ ರ‍್ಯಾಲಿಯ ಮೇಲೆ ಕಲ್ಲು ತೂರಲಾಗಿದೆ. ಕುಲ್ಲು ತೂರಿದ ಮಂದಿಯನ್ನು ಬಿಜೆಪಿಯ ನೂರಾರು ಕಾರ್ಯಕರ್ತರು ಅಟ್ಟಿಸಿ ಹೋಗುವ ದೃಶ್ಯವೂ ವಿಡಿಯೊದಲ್ಲಿದೆ.

ಕಳೆದ ವರ್ಷ ಪಶ್ಚಿಮ ಬಂಗಾಳಕ್ಕೆ ಭೇಟಿ ನೀಡಿದ್ದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜಗತ್‌ ಪ್ರಕಾಶ್‌ ನಡ್ಡಾ ಅವರ ಹಿಂಬಾಲಕ ವಾಹನಗಳ ಮೇಲೂ ಕಲ್ಲು ತೂರಾಟ ನಡೆದಿತ್ತು. ಇದನ್ನು ಟಿಎಂಸಿ ನಡೆಸಿದೆ ಎಂದು ಬಿಜೆಪಿ ಆರೋಪಿಸಿತ್ತು. ಘಟನೆಯನ್ನು ಬಿಜೆಪಿಯ ಯೋಜಿತ ಕೃತ್ಯ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅನುಮಾನಿಸಿದ್ದರು.

error: Content is protected !!