Monday, 26th October 2020

ನೀಟ್ ಪರೀಕ್ಷೆಯಲ್ಲಿ ಬೀದಿ ಬದಿ ವ್ಯಾಪಾರಿಯ ಮಗಳ ಉನ್ನತ ಸಾಧನೆ

-ಮಂಜುನಾಥ್ ಭದ್ರಶೆಟ್ಟಿ, ಹುಬ್ಬಳ್ಳಿ

ಸಾಧಿಸಬೇಕೆಂಬ ಛಲ ಇದ್ದರೆ ಯಾವುದು ಅಸಾಧ್ಯವಲ್ಲ ಎಂಬ ಮಾತನ್ನು ಮತ್ತೊಮ್ಮೆ ಹಾವೇರಿಯ ಈ ಕುವರಿ ನಿಜ ಮಾಡಿ ದ್ದಾಳೆ.

ಹೌದು. ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆಯಲ್ಲಿ (ನೀಟ್) ಹಾವೇರಿಯ ಬೀದಿ ಬದಿಯಲ್ಲಿ ಪಾನ್ ಶಾಪ್ ನಡೆಸುವ ವ್ಯಕ್ತಿಯೊಬ್ಬರ ಮಗಳು 1811 ನೇ ರಾಂಕ್ ಪಡೆಯುವ ಮೂಲಕ ಪ್ರತಿಷ್ಠಿತ ಮೆಡಿಕಲ್‌ ಸೀಟ್’ನ್ನು ಸರ್ಕಾರಿ ಸಂಸ್ಥೆಯಲ್ಲಿ ಖಾತ್ರಿ ಪಡಿಸಿಕೊಂಡಿದ್ದಾಳೆ.

ಈ ಕುವರಿಯ ಹೆಸರು ಲಕ್ಷ್ಮಿ ಶಿವಸಾಲಿ. ಹಾವೇರಿಯಲ್ಲಿ ಇವಳ ತಂದೆ ಮಂಜು ನಾಥ್ ಬೀದಿ ಬದಿಯಲ್ಲಿ ಸಣ್ಣ ಪಾನ್ ಶಾಪ್ ಒಂದನ್ನು ನಡೆಸುತ್ತಾರೆ. ಬಡತನದ ಮಧ್ಯೆಯೂ ಮಗಳನ್ನು ಉನ್ನತ ಶಿಕ್ಷಣಕ್ಕಾಗಿ ಕಳಿಸಬೇಕು ಎಂಬ ಕನಸನ್ನು ಅವರ ಮಗಳು ನನಸು ಮಾಡಿದ್ದಾಳೆ.

ಕಳೆದ ಸಾರಿ ಲಕ್ಷ್ಮಿ ನೀಟ್ ಪರೀಕ್ಷೆ ಬರೆದಾಗ 55122 ರಾಂಕ್ ಪಡೆದಿದ್ದ ಲಕ್ಷ್ಮಿ ಗೆ ಸರ್ಕಾರಿ ಕೋಟಾದಲ್ಲಿ ಮೆಡಿಕಲ್ ಸೀಟ್ ನ್ನು ಗಿಟ್ಟಿಸಿಕೊಳ್ಳಲು ಆಗಿರಲಿಲ್ಲ. ಛಲ ಬಿಡದೇ ಈ ವರ್ಷ ಮತ್ತೆ ಪರೀಕ್ಷೆ ಬರೆದ ಲಕ್ಷ್ಮಿ ಗಮನಾರ್ಹ ಸಾಧನೆ ಮಾಡುವ ಮೂಲಕ ನೀಟ್ ನಲ್ಲಿ 720 ಒಟ್ಟು ಅಂಕಗಳಿಗೆ 643 ಅಂಕ ಪಡೆಯುವ ಮೂಲಕ ಉನ್ನತ ಮಟ್ಟದ ಸಾಧನೆ ಮಾಡಿದ್ದಾಳೆ. ಲಕ್ಷ್ಮಿ ಪಿಯುಸಿ ಯಲ್ಲಿ 98.56% ಪ್ರತಿಶತ ಅಂಕಗಳನ್ನು ಪಡೆದು ಸಾಧನೆ ಮಾಡಿದ್ದಳು.

ತಂದೆ ಮಂಜುನಾಥ್ ಅವರಿಗೆ ಪಾನ್ ಶಾಪ್ ಬಿಟ್ಟು ಬೇರೆ ಆದಾಯದ ಮೂಲವಿಲ್ಲ. ಅದರಲ್ಲಿಯೇ ದುಡಿದು ಮಗಳನ್ನು ಓದಿಸಿ ದ್ದಾರೆ. ಅವರು ಓದಿರುವುದು ನಾಲ್ಕನೇ ತರಗತಿ ಮಾತ್ರ. ತಾಯಿ ಹತ್ತನೇ ತರಗತಿ ಓದಿದ್ದಾರೆ. ಮಗಳ ಸಾಧನೆಗೆ ತಂದೆ ತಾಯಿ ಕಡು ಬಡತನದಲ್ಲೂ ಒತ್ತಾಸೆಯಾಗಿ ನಿಂತಿದ್ದಾರೆ. ಲಕ್ಷ್ಮಿ ಹಿರಿಯ ಸಹೋದರ ಬೆಂಗಳೂರಿನಲ್ಲಿ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದಾರೆ.

ತನ್ನ ಸಾಧನೆಯ ಬಗ್ಗೆ ವಿಶ್ವವಾಣಿಯೊಂದಿಗೆ ಸಂತಸ ಹಂಚಿಕೊಂಡ ಲಕ್ಷ್ಮಿ, ತಂದೆ ತಾಯಿಯ ನಿರಂತರ ಪ್ರೋತ್ಸಾಹದಿಂದ ನಾನು ನೀಟ್ ನಲ್ಲಿ ಸಾಧನೆ ಮಾಡುವಂತಾಯಿತು. ನನ್ನ ಶಿಕ್ಷಕರ ಮಾರ್ಗದರ್ಶನ ನನಗೆ ಶಕ್ತಿ ತುಂಬಿತು. ನಾನು ಪಡೆದ ನೀಟ್ ರಾಂಕ್ ಪ್ರಕಾರ ನನಗೆ ರಾಜ್ಯದ ಒಳ್ಳೆಯ ಮೆಡಿಕಲ್ ಕಾಲೇಜಿನಲ್ಲಿ ಸರ್ಕಾರಿ ಕೋಟಾದ ಸೀಟ್ ಸಿಗಲಿದೆ ಎಂದು ವಿಶ್ವಾಸ ವ್ಯಕ್ತ ಪಡಿಸುತ್ತಾರೆ.

ಲಕ್ಷ್ಮಿ ತಂದೆ ಮಂಜುನಾಥ್ ಶಿವಸಾಲಿ ಅವರು ಸಂತಸ ಹಂಚಿಕೊಂಡು, ನಮ್ಮ ಮಗಳು ಓದಿನಲ್ಲಿ ಸದಾ ಮುಂದು. ಆದರೆ ಅವಳಿಗೆ ಕಳೆದ ಸಾರಿ ನೀಟ್ ನಲ್ಲಿ ಉತ್ತಮ ರಾಂಕ್ ಬರಲು ಸಾಧ್ಯವಾಗಲಿಲ್ಲ. ನಮಗೆ ಖಾಸಗಿ ಕೋಟಾದಡಿ ಅವಳಿಗೆ ಮೆಡಿಕಲ್ ಓದಿಸುವ ಶಕ್ತಿ ಇರಲಿಲ್ಲ. ಆದರೆ ಛಲ ಬಿಡದೇ ಈ ವರ್ಷ ಮತ್ತೆ ನೀಟ್ ಬರೆದು ಸರ್ಕಾರಿ ಕೋಟಾದಡಿ ಮೆಡಿಕಲ್ ಸೀಟ್ ಪಡೆಯು ತ್ತಿರುವುದು ಸಣ್ಣ ಮಾತಲ್ಲ ಎಂದರು.

Leave a Reply

Your email address will not be published. Required fields are marked *