Wednesday, 29th June 2022

ರಾಮನಗರದಲ್ಲಿ ಕಾಲೇಜಿನತ್ತ ಮುಖ ಮಾಡದ ವಿದ್ಯಾರ್ಥಿಗಳು

ರಾಮನಗರ: ಕೊರೊನಾ ಸೋಂಕಿನ ಕಾರಣ ಕಳೆದು ಏಳು ತಿಂಗಳುಗಳಿಂದ ಮುಚ್ಚಿದ್ದ ಕಾಲೇಜುಗಳು ರಾಜ್ಯಾದ್ಯಂತ ಮಂಗಳ ವಾರದಿಂದ ಆರಂಭವಾಗಿವೆ.

ರಾಜ್ಯದಲ್ಲಿ ಕೆಲವು ದಿನಗಳಿಂದೀಚೆ ಕೊರೊನಾ ಪ್ರಕರಣಗಳು ಇಳಿಮುಖವಾಗಿದ್ದು, ಈ ನಡುವೆ ಕಾಲೇಜುಗಳೂ ಆರಂಭ ಗೊಳ್ಳುತ್ತಿವೆ. ಕಾಲೇಜು ಆಡಳಿತ ಮಂಡಳಿಗಳು ಕೊರೊನಾ ಮಾರ್ಗಸೂಚಿಯಂತೆ ಸಿದ್ಧತೆ ಮಾಡಿಕೊಂಡಿವೆ. ಪ್ರತಿ ಬೆಂಚ್ ಗಳ ನಡುವೆ 6 ಅಡಿ ಅಂತರ ಕಾಯ್ದುಕೊಳ್ಳಲು ವ್ಯವಸ್ಥೆ ಮಾಡಲಾಗಿದೆ. ಕಾಲೇಜು ಆವರಣ, ತರಗತಿಗಳನ್ನು ಸ್ಯಾನಿಟೈಸ್ ಮಾಡಲಾಗಿದೆ.

ಆದರೆ ರಾಮನಗರದಲ್ಲಿ ಮಂಗಳವಾರ ಕಾಲೇಜು ತೆರೆದಿದ್ದರೂ ವಿದ್ಯಾರ್ಥಿಗಳು ಕಾಲೇಜಿನತ್ತ ಮುಖ ಮಾಡಿಲ್ಲ.  ವಿದ್ಯಾರ್ಥಿಗಳಿ ಲ್ಲದೇ ಚನ್ನಪಟ್ಟಣ ಪ್ರಥಮ ದರ್ಜೆ ಕಾಲೇಜು ಬಿಕೋ ಎನ್ನುತ್ತಿದೆ. ಈ ಕಾಲೇಜಿಗೆ ಮಂಡ್ಯ ಜಿಲ್ಲೆಯ ಮದ್ದೂರು, ಕುಣಿಗಲ್ ತಾಲೂಕಿನ ಕೆಲ ಗ್ರಾಮಗಳಿಂದಲೂ ವಿದ್ಯಾರ್ಥಿಗಳು ಬರುತ್ತಾರೆ.

ಜೊತೆಗೆ ಕಾಲೇಜುಗಳು ಆರಂಭಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಮಂಗಳವಾರ ಬೆಳಿಗ್ಗೆ ರಾಮನಗರ ಪ್ರಥಮ ದರ್ಜೆ ಕಾಲೇಜಿನಲ್ಲಿ ನಗರಸಭೆ ಸಿಬ್ಬಂದಿ ಸ್ಯಾನಿಟೈಸ್ ಮಾಡುವ ಕಾರ್ಯ ಕೈಗೊಂಡಿದ್ದಾರೆ. ತಲಾ ಒಂದು ಡೆಸ್ಕ್ ಗೆ ಇಬ್ಬರು ವಿದ್ಯಾರ್ಥಿಗಳಿಗೆ ಕೂರಲು ಅವಕಾಶ ಮಾಡಿಕೊಟ್ಟಿದೆ.