ರಾಯಚೂರು: ಜಿಲ್ಲೆಯ ಸಿಂಧನೂರು ನ ಮನೆಯಲ್ಲಿ ನೇಣು ಬಿಗಿದುಕೊಂಡು ಶಿಕ್ಷಕ ಓರ್ವ ನೇಣಿಗೆ ಶರಣಾದ ಘಟನೆ ಸಿಂಧನೂರು ಪಟ್ಟಣದಲ್ಲಿ ಜರುಗಿದೆ.
ಸಿಂಧನೂರು ಪಟ್ಟಣದ ಗಂಗಾನಗರದಲ್ಲಿ ವಾಸವಿದ್ದ ಶಿಕ್ಷಕ ಬಾಲಪ್ಪ(43) ಆತ್ಮಹತ್ಯ ಮಾಡಿಕೊಂಡಿರುವ ಶಿಕ್ಷಕ ಎಂದು ಗುರುತಿಸಲಾಗಿದೆ. ಮೂಲತಃ ವಿಜಯಪುರ ತಾಲೂ ಕಿನ ಮುದ್ದೆಬಿಹಾಳ ತಾಲೂಕಿನ ಅರವಿಂದ್ರಹಾಳ ಗ್ರಾಮದವರು ಆಗಿದ್ದು, ಸಿಂಧನೂರಿನ ಕುರ್ಡಿ ಸಿಆರ್ ಪಿ ಆಗಿ ಕಾರ್ಯನಿರ್ವಹಿಸುತ್ತಿದ್ದು, ಸಿಂಧನೂರಿನಲ್ಲಿ ವಾಸವಾಗಿದ್ದರು.
ಹೃದಯರೋಗ ಹಾಗೂ ವೈಯಕ್ತಿಕ ಸಮಸ್ಯೆಗಳ ಹಿನ್ನಲೆಯಲ್ಲಿ ಮನನೊಂದು ಮನೆಯ ಕೋಣೆಯೊಂದಕ್ಕೆ ನೇಣು ಬಿಗಿದು ಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾ ಗುತ್ತಿದೆ. ಭಾನುವಾರ ಬೆಳಿಗ್ಗೆ ಆತ್ಮಹತ್ಯೆಗೆ ಶರಣಾಗಿದ್ದು, ರಾತ್ರಿಯ ವೇಳೆ ಮನೆಯ ಮಾಲೀಕರು ನೋಡಿದಾಗ ಘಟನೆ ಬೆಳಕಿಗೆ ಬಂದಿದೆ.
ಮನೆಯಲ್ಲಿ ಪತ್ನಿ ಹಾಗೂ ಮಕ್ಕಳಿಬ್ಬರು ಊರಿಗೆ ಹೋದಾಗ, ಶಿಕ್ಷಕ ಆತ್ಮಹತ್ಯೆ ಮಾಡಿ ಕೊಂಡಿದ್ದು, ತಂದೆಯ ಕಳೆದುಕೊಂಡ ಮಕ್ಕಳು ಹಾಗು ಪತ್ನಿ, ಸಂಬಂಧಿಕರು ಆಕ್ರಂದನ ಮುಗಿಲು ಮುಟ್ಟಿದೆ.
ಸಿಂಧನೂರು ನಗರ ಠಾಣೆಯ ಪೊಲೀಸ್ ರು ಭೇಟಿ ನೀಡಿ ಪರಿಶೀಲನೆ ನಡೆಸಿ, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿ, ಬಳಿಕ ಕುಟುಂಬಸ್ಥರಿಗೆ ಶಿಕ್ಷಕ ಮೃತದೇಹವನ್ನು ಪೊಲೀಸ್ ರು ಒಪ್ಪಿಸಿದ್ದಾರೆ.