Wednesday, 1st December 2021

ಒಂದೇ ಕುಟುಂಬದವರ ಆತ್ಮಹತ್ಯೆಗೆ ಯತ್ನ

ಚಿಕ್ಕಮಗಳೂರು : ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲೂಕಿನ ಎಂ.ಸಿ.ಹಳ್ಳಿಯಲ್ಲಿ ಕಾರು ಸಮೇತ ನೀರಿಗೆ ಹಾರಿ ಒಂದೇ ಕುಟುಂಬದವರು ಆತ್ಮಹತ್ಯೆಗೆ ಯತ್ನಿಸಿದ ಘಟನೆ ಸಂಭವಿಸಿದೆ.

ಗುರುವಾರ ಬೆಳಗ್ಗೆ ವಾಟ್ಸಪ್ ನಲ್ಲಿ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ವಾಯ್ಸ್ ಮೆಸೇಜ್ ಹಾಕಿ ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆಗೆ ಯತ್ನಿಸಿದ್ದು, ಇವರಲ್ಲಿ ಪತಿ ಮಂಜು ಹಾಗೂ ಸುನಂದಮ್ಮ ಎಂಬುವರು ಕಾರಿನ ಸಮೇತ ನೀರುಪಾಲಾಗಿದ್ದಾರೆ. ಮಂಜು ಪತ್ನಿ ನೀತು ಹಾಗೂ ಮಗ ಧ್ಯಾನ್ ಅಪಾಯದಿಂದ ಪಾರಾಗಿ ದ್ದಾರೆ.

ಭದ್ರಾವತಿ ತಾಲೂಕಿನ ಜೆ.ಡಿ.ಕಟ್ಟೆಯ ನಿವಾಸಿಗಳಾಗಿದ್ದು, ಸ್ಥಳಕ್ಕೆ ತರೀಕೆರೆ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.