Friday, 27th May 2022

ಇಂಡೋನೇಶ್ಯಾ: ಚರ್ಚ್‌ನಲ್ಲಿ ಆತ್ಮಾಹುತಿ ದಾಳಿ

ಜಕಾರ್ತಾ: ಚರ್ಚ್‍ನಲ್ಲಿ ಪ್ರಾರ್ಥನೆ ಸಂದರ್ಭದಲ್ಲಿ ಒಳನುಗ್ಗಿದ ವ್ಯಕ್ತಿ ತನ್ನನ್ನೇ ಸ್ಫೋಟಿಸಿಕೊಂಡು ಆತ್ಮಾಹುತಿ ದಾಳಿ ನಡೆಸಿ ದ್ದಾನೆ. ಇಂಡೋನೇಷ್ಯಾ ದ ದಕ್ಷಿಣ ಭಾಗದ ಸೂಲವಿಸಿ ವಲಯದ ಮಕಾರ್ಸ್ ನಗರದಲ್ಲಿ ಘಟನೆ ಸಂಭವಿಸಿದೆ.

ರೋಮನ್ ಕ್ಯಾಥೋಲಿಕ್ ಚರ್ಚ್‍ನಲ್ಲಿ ಜನರು ಪ್ರಾರ್ಥನೆಗೆ ಆಗಮಿಸುತ್ತಿದ್ದ ಸಂದರ್ಭ ಬಾಂಬ್ ಸುತ್ತಿಕೊಂಡಿದ್ದ ವ್ಯಕ್ತಿ ಒಳ ನುಗ್ಗಿ ಏಕಾಏಕಿ ಸ್ಫೋಟಿಸಿ ಕೊಂಡಿದ್ದಾನೆ.

ಘಟನೆಯಲ್ಲಿ ಹಲವರು ಗಾಯಗೊಂಡಿದ್ದಾರೆ. ಸ್ಫೋಟಿಸಿಕೊಂಡ ವ್ಯಕ್ತಿ ಬಿಟ್ಟರೆ ಬೇರ್ಯಾರೂ ಮೃತಪಟ್ಟಿಲ್ಲ ಎಂದು ವರದಿಯಾಗಿದೆ. ಇದೊಂದು ಭಯೋತ್ಪಾದಕ ದಾಳಿ ಎಂದು ಹೇಳಲಾಗುತ್ತಿದೆ. ಗಾಯಗೊಂಡಿರುವ ಹಲವರನ್ನು ಆಸ್ಪತ್ರೆಗೆ ಸಾಗಿಸಿದ್ದು, ಕೆಲವರ ಸ್ಥಿತಿ ಚಿಂತಾಜನಕವಾಗಿದೆ ಎಂದು ತಿಳಿದುಬಂದಿದೆ.