Friday, 7th October 2022

ಸುಖ ಸಂಸಾರ ನಿಮ್ಮದಾಗಬೇಕೆ?

ಜಯಶ್ರೀ.ಜೆ. ಅಬ್ಬಿಗೇರಿ
ಎಲ್ಲರ ಮನೆ ದೋಸೆನೂ ತೂತೆ’. ಮನೆಯಲ್ಲಿ ಭಿನ್ನಾಾಭಿಪ್ರಾಾಯಗಳು ಇರೋದು ಸಾಮಾನ್ಯ ಹಾಗಂತ ಕೂಡಿ ಬಾಳೋಕೆ ಆಗುವದಿಲ್ಲ ಎನ್ನುವಷ್ಟಿಿರುವದಿಲ್ಲ. ಸಣ್ಣ ಪುಟ್ಟ ಜಗಳಗಳು ಬಂದೇ ಬರುತ್ತವೆ ಹಾಗಂತ ಅವನ್ನು ಗಂಭೀರವಾಗಿ ಪರಿಗಣಿಸಿ ಧೀರ್ಘಕ್ಕೆೆ ಒಯ್ಯಬಾರದು. ಗಂಡ ಹೆಂಡತಿ ನಡುವೆ ಜಗಳ ಬಂದಾಗ ಮೊದಲು ಗಂಡ ಮಾತನಾಡಿಸಲಿ ಅಂತ ಹೆಂಡತಿ, ಹೆಂಡತಿ ಮಾತನಾಡಿಸಲಿ ಅಂತ ಗಂಡ ಕಾಯದೇ, ಹಮ್ಮು ಬಿಮ್ಮು ಅಹಂಭಾವವನ್ನು ತೊರೆದು ಹಠ ಮಾಡದೆ ಇಬ್ಬರೂ ಆಡಿದ ಜಗಳವನ್ನು ಮರೆತು ಮತ್ತೆೆ ಒಂದಾಗಬೇಕು.

ಪ್ರತಿಯೊಬ್ಬರ ಜೀವನದಲ್ಲಿ ಮದುವೆ ಅತೀ ಪ್ರಮುಖವಾದ ಘಟ್ಟ, ಅದರಲ್ಲೂ ಹೆಣ್ಣುಮಕ್ಕಳ ಜೀವನಕ್ಕೆೆ ವಿವಾಹ ಅನ್ನುವದು ದೊಡ್ಡ ಮಹತ್ವದ ತಿರುವು ನೀಡುವಂಥ ಸಂಭ್ರಮ ಸಡಗರ ತುಂಬಿದ ಮೌಲ್ಯಯುತ ಮಂಗಳ ಕಾರ್ಯ. ನೂರಾರು ಜನರ ಸಮ್ಮುಖದಲ್ಲಿ ಸಪ್ತಪದಿ ತುಳಿದು ಬಾಳಿನ ವಸಂತ ಕಾಲಕ್ಕೆೆ ಕಾಲಿಡುವ ಸಮಯ ನಿಜವಾಗಲೂ ರೋಚಕ ಮತ್ತು ರೋಮಾಂಚನಕಾರಿ ಘಳಿಗೆ.

ಗಂಡ ಹೆಂಡತಿ ಎರಡು ದೇಹ ಒಂದೇ ಮನಸ್ಸು. ಒಂದೇ ಮಾತು ಒಂದೇ ಕನಸು ಕಾಣುವ ಜೋಡಿ ಹಕ್ಕಿಿಯಾಗುವ ಸುಸಮಯ.ಹಿರಿಯರೆಲ್ಲ ನವದಂಪತಿಗಳ ಬಾಳಿಗೆ ಶುಭ ಕೋರಿ ಆಶೀರ್ವದಿಸುವ ಶುಭ ಸಂದರ್ಭ.

ಮದುವೆಯಾದ ನವದಂಪತಿಗಳ ನಡುವೆ ಅದೇನೋ ಸಂತಸ ಆತಂಕ ತಳಮಳ ಕಸಿವಿಸಿ ಪದಗಳಲ್ಲಿ ಹೇಳಲಾರದ ಭಾವಗಳು ಒತ್ತೊೊತ್ತಿಿಕೊಂಡುಬರುತ್ತಿಿರುತ್ತವೆ. ತಾಯಿ ತಂದೆ ಬಂಧು ಬಳಗ ಬಿಟ್ಟು ಬಂದ ಹೆಣ್ಣು ಹೊಸ ವಾತಾವರಣದಲ್ಲಿ ಹೇಗೆ ಹೊಂದಿಕೊಳ್ಳುವದು ಎನ್ನುವ ಭಯವನ್ನು ಎದುರಿಸಬೇಕಾದರೆ, ಗಂಡು ಹೊಸದಾಗಿ ಬಂದ ಹೆಂಡತಿ ಮತ್ತು ತಾಯಿ ಇಬ್ಬರನ್ನು ಹೇಗೆ ನಿಭಾಯಿಸುವದು ಎನ್ನುವ ಇಕ್ಕಟ್ಟಿಿನಲ್ಲಿ ಇರುತ್ತಾಾನೆ.

ವಿವಾಹ ಬಂಧನದಲ್ಲಿ ಬಂಧಿಸಲ್ಪಟ್ಟ ದಂಪತಿಗಳು ಅನುರಾಗ ಬಂಧದಲ್ಲಿರಬೇಕು. ಇವರಿಬ್ಬರ ನಡುವೆ ಪ್ರೀತಿ ಓತಪ್ರೋೀತವಾಗಿರಬೇಕು. ಗಂಡ ಹೆಚ್ಚು ಹೆಂಡತಿ ಕಡಿಮೆ ಎನ್ನುವ ಭೇದ ಸಲ್ಲದು. ಇಬ್ಬರಲ್ಲೂ ಪರಸ್ಪರ ನಂಬಿಕೆ ವಿಶ್ವಾಾಸ ಇರಬೇಕು. ಈ ನಂಬಿಕೆಯ ಬುನಾದಿಯ ಮೇಲೆ ವಿವಾಹದ ಕಟ್ಟಡ ನಿಂತಿರುವದು ಎನ್ನುವದನ್ನು ಇಬ್ಬರು ಅರ್ಥಮಾಡಿಕೊಳ್ಳಬೇಕು.

ಮೊದಲಿನಿಂದಲೂ ನಮ್ಮಲ್ಲಿ ಗಂಡ ಹೇಳಿದ್ದೇ ವೇದ ವಾಕ್ಯ ಅಂತ ಪರಿಪಾಲಿಸುತ್ತ ಬಂದ ಸತಿಯಿರಿದ್ದರು. ಆದರೀಗ ಕಾಲ ಬದಲಾಗಿದೆ. ಹೆಣ್ಣು ಅಡುಗೆ ಮನೆಯ ಹೊಗೆಯನ್ನು ದಾಟಿ ಹೊರ ಬಂದು ಪುರುಷರ ಹೆಗಲಿಗೆ ಹೆಗಲು ಹಚ್ಚಿಿ ಪುರುಷನಿಗೆ ತಾನೇನೂ ಕಡಿಮೆಯಿಲ್ಲ ಎನ್ನಿಿಸುವಷ್ಟು ಪ್ರಗತಿ ಸಾದಿಸಿದ್ದಾಾಳೆ ಹೀಗಾಗಿ ತನ್ನ ಮೇಲೆ ಅಧಿಕಾರ ತೋರಿಸುವ ಗಂಡನ್ನು ಹೆಣ್ಣು ಒಪ್ಪಲಾರಳು.

ಈಗಿನ ಹೆಣ್ಣಿಿಗೆ ಬೇಕಾದುದು ತನ್ನ ಮನವನ್ನು ಅರ್ಥ ಮಾಡಿಕೊಂಡು ತನ್ನ ಸ್ವಾಾತಂತ್ರ್ಯಕ್ಕೆೆ ಬೆಲೆ ಕೊಟ್ಟು ಬಾಳುವ ಗೆಳೆಯ. ಸದಾ ತನ್ನ ಮತ್ತು ಕುಟುಂಬದ ಹಿತವನ್ನು ಬಯಸುವ ಹಿತೈಷಿಯನ್ನು ಅವಳು ಬಯಸುತ್ತಾಾಳೆ. ಹೆಂಡತಿಯೆಂದರೆ ತನ್ನ ಆಳು ತಾನು ಹೇಳಿದಂತೆ ಕೇಳಿಕೊಂಡು ಬಿದ್ದಿರುವ ಗುಲಾಮಳು, ತನಗೆ ಬೇಕೆಂದಾಗ ಪ್ರೀತಿಸುವ ಬೇಡವಾದಾಗ ದೂರ ಸರಿಸುವ ಕೋಪ ಬಂದಾಗ ಆವೇಶದಿಂದ ಕೈ ಎತ್ತುವ ಗಂಡನನ್ನು ಇಂದಿನ ಹುಡುಗಿಯರು ಸುತಾರಾಂ ಒಪ್ಪಿಿಕೊಳ್ಳುವದಿಲ್ಲ. ಗಂಡ ಹೆಂಡತಿಯಲ್ಲಿ ಹೊಂದಾಣಿಕೆಯಲ್ಲಿದಾಗ ಸಂಸಾರ ನರಕದತ್ತ ಪಯಣಿಸುದರಲ್ಲಿ ಸಂಶಯವಿಲ್ಲ ಈಗಿನ ಹೆಣ್ಣುಮಕ್ಕಳು

ಪತಿಯ ಕುರಿತಾದ ಅಪೇಕ್ಷೆೆಗಳು
*ದರ್ಪ ತೋರಿಸುವ ವ್ಯಕ್ತಿಿಯಾಗಿರದೇ ಒಳ್ಳೆೆಯ ಗೆಳೆಯನಾಗಿರಬೇಕು ತನ್ನ ಮನದ ಭಾವನೆಗಳನ್ನು ಗೌರವಿಸಿ ಸ್ಪಂದಿಸಬೇಕಉ. ಮನಸ್ಸನ್ನು ಘಾಸಿಗೊಳಿಸದೇ ಕಷ್ಟ ಕಾಲದಲ್ಲಿ ತನ್ನ ಜೊತೆಯಲ್ಲಿರಬೇಕು.
*ಸುಖ ಸಂತೋಷಗಳನ್ನು ಹಂಚಿಕೊಳ್ಳಲು ಉಡುಗೊರೆಗಳನ್ನು ತಂದು ಕೊಡುತ್ತ ಮತ್ತಷ್ಟು ಪ್ರೀತಿ ಮಾಡುತ್ತ ತಾನು ಅವನ ಪ್ರೀತಿಯಲ್ಲಿ ಮೈಮರೆಯುವಂತೆ ಮಾಡಬೆಕು.
*ತನ್ನ ಕನಸುಗಳಿಗೆ ಆಸೆಗಳಿಗೆ ಪ್ರೋೋತ್ಸಾಾಹಿಸುತ್ತ ತನಗೆ ಬೆಂಗಾವಲಾಗಿರಬೇಕು.
*ಮುನಿಸಿಕೊಂಡಾಗ ತಾನೇ ಸನಿಹ ಬಂದು ಪ್ರೀತಿಯ ಮಳೆಯ ಸುರಿಸಬೇಕು.
*ಹುಷಾರಿಲ್ಲದಾಗ ಮುತುವರ್ಜಿವಹಿಸಿ ಡಾಕ್ಟರ ಬಳಿ ಕರೆದುಕೊಂಡು ಹೋಗಿ ಆರೈಕೆ ಮಾಡಬೇಕು.
*ತನ್ನ ಜೀವ ಭಾವದಲ್ಲಿ ಬೆರೆತು ಹೋಗಿರಬೇಕು ಅವನಿಂದ ತನ್ನ ಬಾಳಿಗೆ ಹೊಸ ಬೆಳಕು ಬರಬೇಕು.
*ಯಾವುದೇ ಚಟಗಳಿಗೆ ದಾಸನಾಗದೇ ಸದಾ ತನ್ನ ಪ್ರೀತಿಯ ಪ್ರಿಿಯತಮನಾಗಿರಬೇಕು.
* ತಾನು ಮಾಡುವ ಅಡುಗೆಗೆ ಸುಮ್ಮನೆ ಹೆಸರಿಡಬಾರದು.
*ಮನೆಗೆ ಸಂಬಂಧಿಸಿದ ವಿಷಯದ ಬಗ್ಗೆೆ ತನಗೂ ತಿಳಿಸಿ ನಿರ್ಣಯ ತೆಗೆದುಕೊಳ್ಳಬೇಕು ಅಂತ ಬಯಸುತ್ತಾಾಳೆ.
*ಮನೆಗೆಲಸದಲ್ಲಿ ತನಗೆ ಸಣ್ಣ ಪುಟ್ಟ ಸಹಾಯ ಮಾಡಬೇಕು. ಸರಸ ಸಲ್ಲಾಾಪದಿಂದ ಚೇಷ್ಟೆೆ ಮಾಡುತ್ತಿಿರಬೇಕು.
*ವಾರಕ್ಕೊೊಮ್ಮೆೆಯಾದರೂ ಪತಿಯೊಂದಿಗೆ ಹೊರಗಡೆ ಸುತ್ತಾಾಡಲು ಕರೆದೊಯ್ಯಬೇಕೆಂದು ಬಯಸುತ್ತಾಾಳೆ.
*ತನಗರಿವಿಲ್ಲದೆ ಮಾಡಿದ ತಪ್ಪಿಿಗೆ ಕ್ಷಮೆಯಿರಲೆಂದು ಬಯಸುತ್ತಾಾಳೆ.
* ಹುಟ್ಟು ಹಬ,್ಬ ವಿವಾಹ ದಿನ ನೆನಪಿನಲ್ಲಿಟ್ಟುಕೊಂಡು ವಿಶ್ ಮಾಡಬೇಕು ಇಷ್ಟೆೆಲ್ಲ ತನ್ನ ಗಂಡನಿಂದ ಬಯಸುವ ಹೆಣ್ಣು,
ಹೆಂಡತಿಯಾಗಿ ಹೇಗೆ ನಡೆದುಕೊಳ್ಳಬೇಕು ಎನ್ನುವ ಅಂಶವೂ ಗಣನೆಗೆ ಬರುತ್ತದೆ. ಇದನ್ನು ಅರಿತು ಹೆಂಡತಿ ಸಂಸಾರದಲ್ಲಿ ಅರಿತು ಬಾಳಬೇಕು.

ಹಿಂದಿನ ಕಾಲದಿಂದ ನಮ್ಮ ಹಿರಿಯರು ಹೇಳುತ್ತ ಬಂದ ಮಾತೊಂದು ಹೀಗೆ ಹೇಳುತ್ತೆೆ. ‘ಕಾರ್ಯೇಷು ದಾಸಿ, ಕರುಣೇಶು ಮಂತ್ರಿಿ, ಭೋಜ್ಯೇಷು ಮಾತಾ, ಶಯನೇಶು ರಂಭಾ’.ಈ ಗುಣಗಳಲ್ಲದೆ ಇಂದಿನ ಹೆಂಡತಿ ತನ್ನ ಗಂಡನಿಗೆ ಆಪ್ತ ಸಖಿಯಂತಿರಬೇಕು. ತನ್ನ ಗಂಡನಿಂದ ಅನೇಕ ಆದರ್ಶಗಳನ್ನು ಬಯಸುವ ಹೆಂಡತಿ ತಾನೂ ತನ್ನ ಸ್ಥಾಾನಕ್ಕೆೆ ಬದ್ಧಳಾಗಿರಬೇಕು.

* ಗಂಡನ ಮನೆಯ ಆರ್ಥಿಕ ಪರಿಸ್ಥಿಿತಿಯನ್ನು ಅರಿತು ಖರ್ಚು ಮಾಡಬೇಕು.
*ಮನೆಯ ಆರ್ಥಿಕ ಸಮಸ್ಯೆೆ ನಿವಾರಿಸಲು ತಾನೂ ಗೃಹ ಕೈಗಾರಿಕೆಗಳಲ್ಲಿ ಅಥವಾ ಇನ್ನಾಾವುದೋ ಕೆಲಸದಲ್ಲಿ ತೊಡಗಿಸಿಕೊಳ್ಳಬೇಕು.
* ಕೆಲಸದಿಂದ ಮರಳಿ ಬಂದ ಗಂಡನನ್ನು ಕಿರುನಗೆಯಿಂದ ಸ್ವಾಾಗತಿಸಬೇಕು.
*ಗಂಡನ ಮನಸ್ಸನ್ನು ಅರ್ಥ ಮಾಡಿಕೊಂಡು ಅವನ ಆಸೆಗಳಿಗೆ ವಿರುದ್ಧ ಹೋಗದೆ ಮನದಾಸೆಗಳನ್ನು ಪೂರೈಸಬೇಕು.
* ಸದಾ ಸಂಗಾತಿಯಾಗಿ, ಮನದನ್ನೆೆಯಾಗಿ, ಪತಿಯ ಮನಗೆಲ್ಲುವ ಪ್ರಯತ್ನ ಮಾಡಬೇಕು. ಪ್ರೀತಿಯ ಕೊರತೆಯಿಂದ ಅವನು ಬೇರೆ ಕಡೆ ವಾಲದಂತೆ ನೋಡಿಕೊಳ್ಳುವ ಜವಾಬ್ದಾಾರಿ ಹೆಂಡತಿಯ ಮೇಲಿದೆ.
ದಾಂಪತ್ಯಕ್ಕೆೆ ಬೇಕಾದ ಪ್ರಮುಖ ಅಂಶಗಳು
*ಬೆಡ್ ರೂಮ್ ಪ್ರವೇಶಿಸುವ ಮುನ್ನ ಕೈ ಕಾಲುಗಳನ್ನು ಸ್ವಚ್ಛವಾಗಿ ತೊಳೆದುಕೊಂಡು ಸುಗಂಧ ದ್ರವ್ಯಗಳನ್ನು ಪೂಸಿಕೊಂಡು ಹೋಗಿ.
*ಮಲಗುವ ಕೋಣೆಯಲ್ಲಿ ರೂಮ್ ಫ್ರೆೆಷನರ್ ಬಳಸಿ.
* ಮುಖ. ಕತ್ತು, ಕಂಕುಳಗಳಿಗೆ ಪೌಡರ್ ಹಾಕಿಕೊಳ್ಳಿಿ.
*ಮಲಗುವ ಕೋಣೆಯಲ್ಲಿ ಸಿಟ್ಟು ಸೆಡವು ಅಹಂಕಾರಗಳಿಗೆ ಜಾಗವಿರಬಾರದು ಅಲ್ಲೇನಿದಿದ್ದರೂ ಪ್ರೀತಿಯ ಹೊಳೆ ಹರಿಯಬೇಕು.
* ಇಬ್ಬರೂ ತಮ್ಮ ಮನದಾಳದ ಮಾತುಗಳನ್ನು ಮುಚ್ಚು ಮರೆಯಿಲ್ಲದೆ ಬಿಚ್ಚಿಿ ಮಾತನಾಡಿ.
* ಇಬ್ಬರ ಸಮ್ಮತಿ ಇದ್ದಾಾಗ ಮಾತ್ರ ಸರಸಕ್ಕೆೆ ತೊಡಗಬೇಕು. ಮಿಲನ ಯಾಂತ್ರಿಿಕತೆಯಿಂದ ಕೂಡಿರದೇ ತನು ಮನ ಬೆರೆತು ಉತ್ತೇಜಿಸಬೇಕು.
ಗಂಡ ಹೆಂಡತಿಯರಿಬ್ಬರೂ ತಮ್ಮ ತಮ್ಮ ಜವಾಬ್ದಾಾರಿಗಳನ್ನು ಅರಿತು ಸಂಸಾರದ ನೊಗವನ್ನು ಸಮ ಪ್ರಮಾಣದಲ್ಲಿ ಹೊತ್ತುಕೊಂರೆ ವಿವಾಹ ವಿಚ್ಛೇದನವೆಮಬ ದುರಂತದಲ್ಲಿ ಕೊನೆಗೊಳ್ಳದೇ ಮನೆಯಲ್ಲಿ ಸುಖ ಶಾಂತಿ ನೆಲೆಗೊಳ್ಳುತ್ತವೆ. ಮನೆ ನಂದ ಗೋಕುಲವಾಗುತ್ತದೆ.