Friday, 24th September 2021

ರಾಜ್ಯಸಭೆಗೆ ಸುಶ್ಮಿತಾ ದೇವ್‌ ನಾಮನಿರ್ದೇಶನ

ಕೋಲ್ಕತ್ತ: ತೃಣಮೂಲ ಕಾಂಗ್ರೆಸ್‌ ಪಕ್ಷವು ಸುಶ್ಮಿತಾ ದೇವ್‌ ಅವರನ್ನು ರಾಜ್ಯಸಭೆಗೆ ಮಂಗಳವಾರ ನಾಮ ನಿರ್ದೇಶನ ಮಾಡಿದೆ.

ಸುಶ್ಮಿತಾ ದೇವ್‌ ಕಳೆದ ತಿಂಗಳಷ್ಟೇ ಕಾಂಗ್ರೆಸ್‌ ತೊರೆದು ಟಿಎಂಸಿಗೆ ಸೇರ್ಪಡೆಯಾದರು. ಅವರು ಕಾಂಗ್ರೆಸ್‌ನ ರಾಷ್ಟ್ರೀಯ ವಕ್ತಾರರಲ್ಲಿ ಒಬ್ಬರಾಗಿ ಕಾರ್ಯನಿರ್ವಹಿಸುತ್ತಿದ್ದರು ಹಾಗೂ ಅಖಿಲ ಭಾರತ ಮಹಿಳಾ ಕಾಂಗ್ರೆಸ್‌ನ ಅಧ್ಯಕ್ಷೆಯಾಗಿದ್ದರು.

ಮಹಿಳೆಯರ ರಾಜಕೀಯದಲ್ಲಿ ಭಾಗವಹಿಸುವಿಕೆ ಹಾಗೂ ಮಹಿಳಾ ಸಬಲೀಕರಣದ ಸಂಬಂಧ ಮಮತಾ ಬ್ಯಾನರ್ಜಿ ಅವರ ದೂರದೃಷ್ಟಿಯಿಂದಾಗಿ ನಮ್ಮ ಸಮಾಜವು ಮತ್ತಷ್ಟು ಸಾಧಿಸಲು ಸಾಧ್ಯವಾಗಲಿದೆ’ ಎಂದು ಟಿಎಂಸಿ ಹೇಳಿದೆ.

ಸಂಸತ್ತಿನಲ್ಲಿ ಹೆಚ್ಚು ಮಹಿಳೆಯರನ್ನು ಕಾಣಬೇಕೆಂಬ ಮಮತಾ ಅವರ ನಿರ್ಧಾರ ಅಸಾಧಾರಣವಾದುದು. ನನ್ನಿಂದಾಗುವ ಅತ್ಯುತ್ತಮವಾದುದನ್ನು ಮಾಡುವೆ’ ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡಿದ್ದಾರೆ.

ಆಗಸ್ಟ್‌ನಲ್ಲಿ ಮಮತಾ ಬ್ಯಾನರ್ಜಿ ಅವರ ತಂಡಕ್ಕೆ ಸೇರ್ಪಡೆಯಾದ ಬಳಿಕ ಸುಶ್ಮಿತಾ ಅವರಿಗೆ ಅಸ್ಸಾಂ ಮತ್ತು ತ್ರಿಪುರಾದಲ್ಲಿ ಟಿಎಂಸಿ ಕಾರ್ಯಾಚರಣೆ ಗಮನಿಸುವ ಹೊಣೆ ನೀಡಲಾಗಿತ್ತು.

Leave a Reply

Your email address will not be published. Required fields are marked *