Friday, 7th May 2021

ಮತ್ತೊಂದು ಎಸ್‌ಯುವಿ ಪ್ರವೇಶ

ಹಾಹಾ ಕಾರ್‌

ವಸಂತ ಗ ಭಟ್‌

ಈಗಾಗಲೇ ಸಾಕಷ್ಟು ಎಸ್‌ಯುವಿಗಳು ನಮ್ಮ ದೇಶದಲ್ಲಿದ್ದು, ಅವುಗಳ ಮಾರಾಟವು ಅಷ್ಟೇನೂ ವೇಗವಾಗಿಲ್ಲ ಎಂದು ಅಂಕಿ ಅಂಶಗಳು ಹೇಳುತ್ತಿವೆ. ಈಗ ಫ್ರೆಂಚ್ ಮೂಲದ ಸಿಟ್ರಿಯಾನ್ ತನ್ನ ಹೊಸ ಕಾರನ್ನು ನಮ್ಮ ದೇಶದಲ್ಲಿ ಬಿಡುಗಡೆ ಮಾಡುತ್ತಿದೆ.

ಐಷಾರಾಮಿ ಮತ್ತು ಅದ್ಧೂರಿತನಕ್ಕೆ ಹೆಸರುವಾಸಿಯಾದ ಫ್ರೆಂಚ್ ಕಾರು ತಯಾರಕ ಸಂಸ್ಥೆಗಳು ಭಾರತದಲ್ಲಿ ವ್ಯವಹಾರಿಕವಾಗಿ ಗೆದ್ದಿದ್ದು ಬಹಳ ಕಡಿಮೆ. ಅದು ಹಿಂದೆ ಭಾರತದ ಮಾರುಕಟ್ಟೆಯನ್ನು ಪ್ರವೇಶಿಸಿ ನಂತರ ದೇಶವನ್ನು ತೊರೆದ Peugeot ಸಂಸ್ಥೆ
ಆಗಿರಬಹುದು ಅಥವಾ ಸದ್ಯ ಭಾರತದಲ್ಲಿರುವ ರೆನಾಲ್ಟ್ ಆಗಿರಬಹುದು.

ರೇನಾಲ್ಟ್ ಸಂಸ್ಥೆಯಂತೂ 2005 ರಲ್ಲೇ ಭಾರತದಲ್ಲಿ ತನ್ನ ಮಾರಾಟವನ್ನು ಆರಂಭಿಸಿದರೂ ಇಲ್ಲಿಯವರೆಗೂ ಇಲ್ಲಿನ ಕಾರು ಮಾರುಕಟ್ಟೆಯ ಒಂದು ಪ್ರತಿಶತ ಪಾಲನ್ನು ಸಹ ಹೊಂದಲು ಸಾಧ್ಯವಾಗಿಲ್ಲ. ಇವೆಲ್ಲವೂ ತಿಳಿದಿದ್ದರು ಸಹ ಸ್ಟೇಲಂಟೀಸ್ ಸಮೂಹ ಸಂಸ್ಥೆಗಳ ಭಾಗವಾಗಿರುವ ಸಿಟ್ರಿಯಾನ್ ತನ್ನ ಸಿ-5 ಏರ್ ಕ್ರಾಸ್ ಎಂಬ ಕಾರಿನ ಮೂಲಕ ಭಾರತವನ್ನು ಇದೇ ಏಪ್ರಿಲ್
ನಲ್ಲಿ ಪ್ರವೇಶಸಲು ಸನ್ನದ್ಧವಾಗಿದೆ. ಅದಾಗಲೇ ಮುಂಗಡ ಕಾಯ್ದಿರಿಸು ವಿಕೆಯನ್ನು ಆರಂಭಿಸಿರುವ ದುಬಾರಿ ಸಿಟ್ರಿಯಾನ್ ಸಿ-5 ಏರ್ ಕ್ರಾಸ್’ನ ವೈಶಿಷ್ಟ್ಯತೆಗಳು ಏನು?

ಸಿಟ್ರಿಯಾನ್ ಫ್ರೆಂಚ್‌ನ ಅತ್ಯಂತ ಹಳೆಯ ಕಾರು ತಯಾರಕ ಸಂಸ್ಥೆಗಳಲ್ಲಿ ಒಂದು. 1919 ರಲ್ಲಿ ವಿನ್ಸೆಂಟ್ ಕೊಬ್ಬೆ ಆರಂಭಿಸಿದ ಸಿಟ್ರಿಯಾನ್ ನಂತರದ ವರ್ಷಗಳಲ್ಲಿ ಸ್ವಲ್ಪ ನಷ್ಟ ಅನುಭವಿಸಿ ಸಧ್ಯ ಸ್ಟೇಲಂಟೀಸ್ ಸಮೂಹ ಸಂಸ್ಥೆಗಳ ಭಾಗವಾಗಿದೆ. ಭಾರತದಲ್ಲಿ ಇದೇ ಏಪ್ರಿಲ್‌ನಲ್ಲಿ ಬಿಡುಗಡೆಯಾಗುತ್ತಿರುವ ಸಿಟ್ರಿಯಾನ್ ಸಿ-5 ಏರ್ ಕ್ರಾಸ್ ಒಂದು ಎಸ್‌ಯುವಿ. ಈಗ ಭಾರತದ ಮಾರುಕಟ್ಟೆಯಲ್ಲಿ ಅತೀ ಹೆಚ್ಚು ಮಾರಾಟವಾಗುತ್ತಿರುವ ಕಾರುಗಳೆಲ್ಲವೂ ಇದೇ ಎಸ್‌ಯುವಿ ವರ್ಗಕ್ಕೆೆ ಸೇರಿದುದಾಗಿದೆ. ಚೆನ್ನೈನಲ್ಲಿ ತನ್ನ ಪ್ರಧಾನ ಕಚೇರಿಯನ್ನು 2019 ರಲ್ಲಿ ಆರಂಭಿಸಿದ ಸಿಟ್ರಿಯಾನ್ ತಮಿಳು ನಾಡಿನ ತಿರುವಲ್ಲೂರಿನಲ್ಲಿ ತನ್ನ ಉತ್ಪಾದನಾ ಘಟಕವನ್ನು ಹೊಂದಿದೆ.

ಸ್ವಯಂಚಾಲಿತ ಗೇರ್ ಬಾಕ್ಸ್
ಸಿಟ್ರಿಯಾನ್ ಸಿ-5 ಏರ್ ಕ್ರಾಸ್ ಕಾರಿನ ವೈಶಿಷ್ಟ್ಯತೆಗಳ ಬಗ್ಗೆ ಹೇಳುವುದಾದರೆ ಕಾರು ಡಿಜಿಟಲ್ ವೇಗದ ಮೀಟರ್ ಅನ್ನು ಹೊಂದಿದ್ದು ನಿಮ್ಮ ಮೂಡ್ ತಕ್ಕಂತೆ ಅದರ ವರ್ಣ ಮತ್ತು ಗ್ರಾಫಿಕ್‌ಅನ್ನು ಬದಲಾಯಿಸಬಹುದಾಗಿದೆ. ಕಾರಿನ ಮುಂಭಾಗದ ವಿನ್ಯಾಸ ಆಕರ್ಷಕವಾಗಿದ್ದು, ಉತ್ತಮ ದರ್ಜೆಯ ಆಸನಗಳು, ಸ್ವಯಂಚಾಲಿತ ಗೇರ್ ಬಾಕ್ಸ್‌, 8 ಇಂಚಿನ ಟಚ್ -ಸ್ಕ್ರೀನ್ ಪರದೆ, ಅನ್ದ್ರೋಯಿಡ್ ಆಟೋ ಮತ್ತು ಆ್ಯಪಲ್ ಕಾರ್ ಪ್ಲೇಗೆ ಹೊಂದಿಕೆಯಾಗುವ ಸಾಮರ್ಥ್ಯ, ಕೀಲಿ ಕೈ ಇಲ್ಲದೆಯೇ ಕೇವಲ ಮೊಬೈಲ್
ಅಥವಾ ಸ್ಮಾರ್ಟ್ ಕಾರ್ಡ್ ನಿಂದ ಲಾಕ್ ಅಥವಾ ಆನ್ ಲಾಕ್ ಮಾಡುವ ಸಾಮರ್ಥ್ಯ ಹೊಂದಿದೆ. ಆದ್ದರಿಂದಲೇ ಈ ಕಾರನ್ನು ಸಾಮಾನ್ಯ ಎಸ್‌ಯುವಿಯಿಂದ ಉತ್ಕ್ರಷ್ಟ ದರ್ಜೆಯ ಎಸ್‌ಯುವಿಯಾಗಿ ರೂಪಾಂತರಿಸಲಿದೆ.

ಇಷ್ಟೆಲ್ಲ ಸೌಲಭ್ಯಗಳ ನಡುವೆಯೂ ಅಲ್ಲಲ್ಲಿ ಸಾಮಾನ್ಯ ಪ್ಲಾಸ್ಟಿಕ್ ಅನ್ನು ಬಳಸಿರುವುದು ಕೆಲವು ಬಳಕೆದಾರರಿಗೆ ಸ್ವಲ್ಪ ಬೇಸರ ಮಾಡಬಹುದು. ಕಾರಿನ ಹಿಂಬದಿಯ ಆಸನಗಳಿಗೆ ಬರುವುದಾದರೆ ಇತರ ಎಸ್‌ಯುವಿ ಗಳಂತೆ ಇಲ್ಲಿ ಒಂದೇ ಹಿಂಬದಿಯ ಆಸನ ವಿರದೆ ಮೂರು ಬೇರೆ ಬೇರೆ ಆಸನಗಳನ್ನು ಕೊಡಲಾಗಿದ್ದು, ಮೂರು ಜನ ಆರಾಮವಾಗಿ ಕೂಳಿತುಕೊಳ್ಳಬಹುದು. ಪ್ರತಿ ಆಸನ ವನ್ನು ಅವಶ್ಯಕತೆಗನುಗುಣವಾಗಿ ಹಿಂದಕ್ಕೆ ಅಥವಾ ಮುಂದಕ್ಕೆ ಸರಿಸಬಹುದಾಗಿದೆ. ಅಲ್ಲದೆ ಹಿಂಬದಿಯ ಎಲ್ಲಾ ಆಸನ ಗಳಿಗೂ ಪ್ರತ್ಯೇಕ ಸೀಟ್ ಬೆಲ್ಟ್ ನೀಡಿರುವುದರಿಂದ ಅಪಘಾತವಾದ ಸಂದರ್ಭದಲ್ಲಿ ಹಿಂಬದಿಯ ಸವರಾರಿಗೆ ಉತ್ತಮ ರಕ್ಷಣೆ ದೊರೆಯ ಲಿದೆ. ಮೂರು ಪ್ರತ್ಯೇಕ ಸೀಟ್ ಕೊಟ್ಟಿರುವುದರಿಂದ ಒಂದು ಮುಖ್ಯ ಸಮಸ್ಯೆಯೆಂದರೆ ಕೈಯನ್ನು ಇಡುವ ಸ್ಟಾಂಡ್‌ನ ಅಲಭ್ಯತೆ.

ಇನ್ನೂ ಪ್ರತಿ ಆಸನ ಬೇರೆ ಬೇರೆ ಆಗಿರುವುದರಿಂದ ಬೂಟ್ ಸ್ಪೇಸ್ ನ ಅವಶ್ಯಕತೆಯನುಗುಣವಾಗಿ, ಎಲ್ಲ ಮೂರು ಆಸನವನ್ನು ಅಥವಾ ಮಧ್ಯದ ಅಥವಾ ಯಾವುದೇ ಆಸನವನ್ನು ಸಹ ಮಡಚಿಕೊಳ್ಳಬಹುದು. ಯಾವುದೇ ಆಸನವನ್ನು ಮಡಚದೆಯೂ ಸಹ
ಸುಮಾರು 580 ಲೀಟರ್ ನಷ್ಟು ಬೂಟ್ ಸ್ಪೇಸ್‌ಅನ್ನು ನೀಡಿದ್ದು, ಭಾರತೀಯ ಗ್ರಾಹಕನ ಅವಶ್ಯತೆಗೆ ತಕ್ಕಂತೆ ತನ್ನ ಕಾರನ್ನು ರೂಪಿಸಿದೆ.

ಎಂಟು ಗೇರ್‌ಗಳು
ಸಿ-5 ಏರ್ ಕ್ರಾಾಸ್ 8 ಗೇರ್ ಗಳ ಸಂಪೂರ್ಣ ಸ್ವಯಂಚಾಲಿತ ವ್ಯವಸ್ಥೆಯನ್ನು ಹೊಂದಿದ್ದು ನಿಮ್ಮ ವೇಗಕ್ಕನುಸಾರವಾಗಿ ಗೇರ್ ಅನ್ನು ಬದಲಾಯಿಸಲಿದೆ. 1997 ಸಿಸಿ, 4 ಸಿಲಿಂಡರ್‌ನ ಡೀಸೆಲ್ ಇಂಜಿನ್ ಹೊಂದಿರುವ ಸಿಟ್ರಿಯಾನ್ ಸಿ-5 ಏರ್ ಕ್ರಾಸ್ 177 ಹೆಚ್ ಪಿ ಶಕ್ತಿಯನ್ನು ಹೊಂದಿದ್ದು 0 – 100 ಕಿಲೋಮೀಟರ್ ವೇಗವನ್ನು 9 ಸೆಕಂಡ್‌ನಲ್ಲಿ ತಲುಪುವ ಸಾಮರ್ಥ್ಯವನ್ನು ಹೊಂದಿದೆ. ಈ ನಿಟ್ಟಿನಲ್ಲಿ ಇದು ಇಂದು ನಮ್ಮ ಮಾರುಕಟ್ಟೆಯಲ್ಲಿರುವ ಯಾವುದೇ ಸ್ಪೋರ್ಟ್ಸ್‌ ಕಾರಿಗೂ ಕಮ್ಯಿಲಟ್ಸ್

ಕಾರನ್ನು ಓಡಿಸುತ್ತಿರುವ ಭೂಭಾಗಕ್ಕನುಗುಣವಾಗಿ ಸ್ಯಾಂಡ್, ಸ್ಟೋನ್ ಅಥವಾ ಮಡ್ ಎನ್ನುವ ಮೋಡ್ ಗೆ ಕಾರನ್ನು ಹಾಕುವ ಮೂಲಕ ಕಾರು ಆ ಸ್ಥಳಕ್ಕೆೆ ತಕ್ಕಂತೆ ಉತ್ತಮವಾಗಿ ಕಾರ್ಯ ನಿರ್ವಹಿಸುವಂತೆ ನೋಡಿಕೊಳ್ಳಬಹುದು. ಲಘುವಾದ ಸ್ಟೇರಿಂಗ್ ಅನ್ನು ಹೊಂದಿರುವ ಸಿಟ್ರಿಯಾನ್ ಸಿ-5 ಏರ್ ಕ್ರಾಸ್ ಸ್ಪೋರ್ಟ್ಸ್‌‌, ಎಕೊ ಮತ್ತು ನಾರ್ಮಲ್ ಮೋಡ್‌ನಲ್ಲಿ ಚಲಿಸುವ ಸಾಮರ್ಥ್ಯ ವನ್ನು ಹೊಂದಿದೆ.

ಕಾರಿನ ಆರಂಭಿಕ ಮೌಲ್ಯ ಸುಮಾರು 30 ಲಕ್ಷ ರುಪಾಯಿ. ಈಗ ಮಾರುಕಟ್ಟೆಯಲ್ಲಿರುವ ಟೊಯೋಟಾ ಫೋರ್ಚೂನರ್, ಫೋರ್ಡ್ ಎಂಡೋವರ್, ಇನ್ನೊವ ಕ್ರಿಸ್ಟ್ ಮತ್ತು ಆರಂಭಿಕ ಶ್ರೇಣಿಯ ಬೆಂಜ್‌ನ ಎಸ್‌ಯುವಿ ಗಳ ಜೊತೆ ಸಿಟ್ರಿಯಾನ್ ಸಿ-5 ಏ ಕ್ರಾಸ್, ಸ್ಪರ್ಧೆ ಮಾಡಲಿದೆ. ಈಗಿನ ಲಭ್ಯ ಅಂಕಿ ಅಂಶದಂತೆ, ದುಬಾರಿ ಬೆಲೆಯ ಕಾರುಗಳು ಭಾರತದಲ್ಲಿ ವ್ಯವಹಾರಿಕವಾಗಿ
ಯಶಸ್ಸುಗಳಿಸಿದ್ದು ಬಹಳ ಕಡಿಮೆ. ಇಂತಹ ಸ್ಥಿತಿಯಲ್ಲಿ ಭಾರತದ ಮಾರುಕಟ್ಟೆಯಲ್ಲಿ ತನ್ನ ಅದೃಷ್ಟವನ್ನು ಪರೀಕ್ಷಿಸಲಿರುವ ಸಿಟ್ರಿಯಾನ್, ಹೇಗೆ ಯಶಸ್ವಿಯಾಗುವುದೋ, ಕಾದು ನೋಡಬೇಕು.

ಸುರಕ್ಷತಾ ಸೌಲಭ್ಯಗಳು
ಕಾರು ಖರೀದಿಸುವಾಗ ಇತ್ತೀಚಿನ ದಿನಗಳಲ್ಲಿ ಗ್ರಾಹಕನು ಹೆಚ್ಚು ಮಹತ್ವ ಕೊಡುವ ವಿಚಾರ ಸುರಕ್ಷತೆಗೆ. ಸಿಟ್ರಿಯಾನ್ ತನ್ನ ಸಿ-5 ಏರ್ ಕ್ರಾಸ್ ಕಾರಿನಲ್ಲಿ ಮಹತ್ವವನ್ನು ನೀಡಿದೆ. ಒಟ್ಟು ಆರು ವಾಯು ಚೀಲಗಳು, ಪಾರ್ಕಿಂಗ್ ಮಾಡಲು ಮುಂಬದಿ ಮತ್ತು ಹಿಂಬದಿಗಳಲ್ಲಿ ವಿಶೇಷವಾದ ಸೆನ್ಸರ್‌ಗಳು, ಕಾರನ್ನು ಹಿಮ್ಮುಖವಾಗಿ ಓಡಿಸುವಾಗ ಸಹಕಾರಿಯಾಗಲೆಂದು ಕಾರಿನ ಹಿಂಭಾಗದ
ದೃಶ್ಯ ತೋರಿಸುವ ಕ್ಯಾಮೆರಾ, ಕಾರಿನ ಚಕ್ರದ ಗಾಳಿಯ ಒತ್ತಡವನ್ನು ಕಾರಿನ ಒಳಗಿಂದಲೆ ಗ್ರಹಿಸುವಂತಹ ವಿಶೇಷ ತಂತ್ರಜ್ಞಾನ
ಇತ್ಯಾದಿಗಳು ಈ ಕಾರನ್ನು ಸುರಕ್ಷತಾ ದೃಷ್ಟಿಯಿಂದ ಉತ್ತಮ ಕಾರನ್ನಾಗಿ ರೂಪಿಸಿದೆ.

Leave a Reply

Your email address will not be published. Required fields are marked *