Wednesday, 1st December 2021

ಸ್ವಚ್ಛ ಪ್ರವಾಸೋದ್ಯಮ ಅಭಿಯಾನಕ್ಕೆೆ ಕರೆ

ದೂರದೃಷ್ಟಿ

ಜಯಶ್ರೀ ಕಾಲ್ಕುಂದ್ರಿ, ಬೆಂಗಳೂರು
ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು, ದೇಶವನ್ನುದ್ದೇಶಿಸಿ ಮಾಡಿದ ತಮ್ಮ ಸ್ವಾತಂತ್ರ್ಯೋತ್ಸವದ ಭಾಷಣದಲ್ಲಿ, ಸ್ವಚ್ಛ ಪ್ರವಾಸೋದ್ಯಮದ ಪರಿಕಲ್ಪನೆಯನ್ನು ಸಾಕಾರಗೊಳಿಸಲು ಸಹಕರಿಸುವಂತೆ ಜನತೆಗೆ ಕರೆ ನೀಡಿರುವುದು ಸ್ವಾಾಗತಾರ್ಹ ಬೆಳವಣಿಗೆ. ಯಾವುದೇ ದೇಶದ ಅಭಿವೃದ್ಧಿಿಗೆ ಪ್ರವಾಸೋದ್ಯಮದ ಅಭಿವೃದ್ಧಿಿಯಾಗುವುದೂ ಅವಶ್ಯ. ದೃಶ್ಯ ಸೌಂದರ್ಯವಾಗಲಿ, ಚಾರಿತ್ರಿಿಕ ಸ್ಮಾಾರಕಗಳಾಗಲಿ, ವಿಶಿಷ್ಟ ಜನಜೀವನದ ರೀತಿನೀತಿಗಳಾಗಿರಲಿ ಅಥವಾ ದೇಶದ ನಾನಾ ಭಾಗಗಳ ಪರಂಪರೆಗಳನ್ನು ಪರಿಚಯಿಸಲು, ಅಭ್ಯಸಿಸಲು ಪ್ರವಾಸೋದ್ಯಮ ಸಹಕಾರಿ. ಸ್ವಚ್ಛ ಭಾರತ ಅಭಿಯಾನ, ದೇಶದೆಲ್ಲೆೆಡೆ ಸಂಚಲನವೊಂದು ಹುಟ್ಟುಕಾಕಿದಂತೆ, ಸ್ವಚ್ಛ ಪ್ರವಾಸೋದ್ಯಮ ಅಭಿಯಾನ, ದೇಶದ ಸಾಂಸ್ಕೃತಿಕ ವಿನಿಮಯಕ್ಕೆೆ ಉತ್ತೇಜನಕಾರಿಯಾಗಬಲ್ಲದು. ದೇಶದೆಲ್ಲೆೆಡೆ ವಿದೇಶಿ ವಿನಿಮಯ ಹಾಗೂ ಉದ್ಯೋೋಗ ಸೃಷ್ಟಿಿಗೆ ಕಾರಣವಾಗುವ ಈ ಅಭಿಯಾನದ ಆಶಯಗಳ ನಿರ್ವಹಣೆ ಸುಲಭ ಸಾಧ್ಯವೇ? ಎಂಬುದು ಮಿಲಿಯನ್ ಡಾಲರ್ ಪ್ರಶ್ನೆೆ.

ಸಿಂಗಾಪುರದಲ್ಲಿ ರಸ್ತೆೆಗಳು ಎಷ್ಟು ಕ್ಲೀನ್ ಆಗಿದೆ ಗೊತ್ತಾಾ? ಮತ್ತೆೆ ದುಬೈನಲ್ಲಿ ರಸ್ತೆೆಗಳು ಮನೆಯ ಅಂಗಳದಷ್ಟೇ ಸ್ವಚ್ಛವಾಗಿವೆ ಎನ್ನುವವರು, ನಮ್ಮ ದೇಶದಲ್ಲಿ ಎಲ್ಲೆೆಂದರಲ್ಲಿ ಉಗಿಯುತ್ತಾಾರೆ, ಖಾಲಿಯಿರುವ ಸೈಟ್‌ನಲ್ಲಿ ಮುಲಾಜಿಲ್ಲದೆ ಕಸ ಎಸೆಯುತ್ತಾಾರೆ. ವಿದೇಶಗಳಲ್ಲಿ ನೆಲೆಸಿರುವ ಭಾರತೀಯರು ನಮ್ಮ ದೇಶಕ್ಕೆೆ ಮರಳಿದ ತಕ್ಷಣ ಬದಲಾಗುವುದೇಕೇ? ವಿದೇಶಿಯಾತ್ರೆೆಯ ಸಮಯದಲ್ಲಿ ಮೋದಿಯವರು ಭಾರತೀಯರನ್ನು ಉದ್ದೇಶಿಸಿ ಮಾಡುವ ತಮ್ಮ ಭಾಷಣದಲ್ಲಿ ಅಲ್ಲಿನ ಜನರಿಗೆ ನಮ್ಮ ಸಭ್ಯತೆ, ಸಂಸ್ಕೃತಿ, ಊಟೋಪಚಾರಗಳ ಬಗ್ಗೆೆ ವಿವರಿಸಿ, ಭಾರತ ದೇಶವನ್ನು ಸಂದರ್ಶಿಸಲು ಪ್ರೋೋತ್ಸಾಾಹಿಸಬೇಕೆಂದು ವಿನಂತಿಸುತ್ತಾಾರೆ.

ವಿದೇಶಿಯರು ಭಾರತಕ್ಕೆೆ ಆಗಮಿಸಿ, ಪ್ರವಾಸಿ ತಾಣಗಳನ್ನು ಸಂದರ್ಶಿಸಿ, ತಮ್ಮ ದೇಶಕ್ಕೆೆ ಮರಳಿದಾಗ ಇಲ್ಲಿಯ ಆತಿಥ್ಯ-ಸ್ವಚ್ಛತೆಯನ್ನೂ ವರ್ಣಿಸಬೇಕಾದರೆ ಸರಕಾರಗಳೊಂದಿಗೆ ನಾಗರಿಕರೂ ಈ ದಿಶೆಯಲ್ಲಿ ಕಾರ್ಯಪ್ರವೃತ್ತರಾಗಬೇಡವೇ? ಸಾರ್ವಜನಿಕ ಸ್ಥಳಗಳಲ್ಲಿ ಶುಚಿತ್ವದ ಜವಾಬ್ದಾಾರಿ ನಿರ್ವಹಿಸಿದಾಗಲೇ ಸಂಘಟನೆಗಳ ಶುಚಿತ್ವ ಸಾಧ್ಯವಾಗಬಲ್ಲದೆಂದು ಮಹಾತ್ಮಾಾ ಗಾಂಧೀಜಿಯವರ ಅಭಿಪ್ರಾಾಯವಾಗಿತ್ತು. ಶುದ್ಧ ಪ್ರವಾಸೋದ್ಯಮಕ್ಕೆೆ ಶುದ್ಧ ಪರಿಸರ ಅತ್ಯಗತ್ಯ. ನಮ್ಮ ದೇಶದಲ್ಲಿ ಶುದ್ಧ ಪರಿಸರದ ನಾಟಕ ಆರಂಭವಾಗುವುದು ಪರಿಸರ ದಿನವಾದ ಜೂನ್ 5 ರಂದು ಮಾತ್ರ. ಪರಿಸರದ ಬಗ್ಗೆೆ ಗಂಟೆಗಟ್ಟಲೇ ಭಾಷಣ ಬಿಗಿದು, ಗಿಡ ನೆಟ್ಟು, ಗಿಡಗಳಿಗೆ ನೀರುಣಿಸುತ್ತಾಾ ಕ್ಯಾಾಮೆರಾದತ್ತ ತಿರುಗಿ ಸ್ಮೈಲ್ ಎಸೆದರಾಯಿತು. ಇವರು ನೆಟ್ಟ ಗಿಡಗಳಿಗೆ ಮರಳಿ ನೀರುಣಿಸುವ ಗೊಡವೆಯೂ ಇಲ್ಲ.

ಮತ್ತೆೆ ಮುಂದಿನ ವರ್ಷ ಬರುವ ಪರಿಸರ ದಿನದ ವರೆಗೂ ನಿರಾಳವಾಗಿದ್ದು ಬಿಡುತ್ತಾಾರೆ. ಸ್ವಚ್ಛ ಪ್ರವಾಸೋದ್ಯಮಕ್ಕೆೆ ಮೊಟ್ಟ ಮೊದಲನೆಯದಾಗಿ ಪಾರಂಪರಿಕ ತಾಣಗಳು ಹಾಗೂ ಐತಿಹಾಸಿಕ ಹಿನ್ನೆೆಲೆಯುಳ್ಳ ತಾಣಗಳಲ್ಲಿ ತ್ಯಾಾಜ್ಯ ಸಂಗ್ರಹಣೆ, ವಿಂಗಡಣೆ, ಹಾಗೂ ನಿರ್ವಹಣೆಯನ್ನು ರಾಜ್ಯ ಹಾಗೂ ಕೇಂದ್ರ ಸರಕಾರಗಳು ಆದ್ಯತೆಯ ಮೇಲೆ ಕೈಗೆತ್ತಿಿಕೊಳ್ಳುವುದು. ಜನತೆಯಲ್ಲಿ ಜಾಗೃತಿ ಮೂಡಿಸಿ ರಕ್ತಬೀಜಾಸುರನಂತೆ ಉತ್ಪತ್ತಿಿಯಾಗುತ್ತಲೇ ಇರುವ ಪ್ಲಾಾಸ್ಟಿಿಕ್ ತ್ಯಾಾಜ್ಯದ ಹಾವಳಿಯನ್ನು ತಪ್ಪಿಿಸಬೇಕು.

ಪ್ರವಾಸಿ ತಾಣಗಳಲ್ಲಿ, ಸಿದ್ಧ ಆಹಾರಕ್ಕೆೆ ಬೇಡಿಕೆ ಜಾಸ್ತಿಿ. ಮಕ್ಕಳಿಗಂತೂ ಮನೆತಿಂಡಿಗಳಿಗಿಂತ ಬೇಕರಿ ತಿಂಡಿಗಳು, ಹಾಗೂ ತಂಪು ಜ್ಯೂಸ್‌ಗಳೇ ಹೆಚ್ಚು ರುಚಿಸುತ್ತವೆ. ಮನ ಸೆಳೆಯುವ ಜಾಹೀರಾತುಗಳೂ ಸಹ ಸಿದ್ಧ ಆಹಾರಗಳು, ಬೇಕಿರುವ ಹಾಗೂ ಬೇಡದಿರುವ ಸಾಮಾನುಗಳ ಕೊಳ್ಳುಬಾಕ ಸಂಸ್ಕೃತಿಯನ್ನು ನೀರೆರೆದು ಪೋಷಿಸುತ್ತಲಿವೆ. ಮುರಿದು ಹೋದ ಆಟಿಕೆಗಳು, ಸಿದ್ಧ ಆಹಾರಗಳ ರ್ಯಾಾಪರ್‌ಗಳು, ಶೆಲ್‌ಗಳು, ಉಪಯೋಗಿಸಿ ಬಿಸಾಡಿದ ಜ್ಯೂಸ್ ಬಾಟಲಿಗಳನ್ನು ಎಲ್ಲೆೆಂದರಲ್ಲಿ ಬಿಸಾಡಿ ಹೋಗುವ ಪ್ರವೃತ್ತಿಿಯೂ ಸಹ ಜನಸಾಮಾನ್ಯರಲ್ಲಿ ಬದಲಾಗಬೇಕು. ಉತ್ಸವಗಳು, ಸಂಭ್ರಮಾಚರಣೆ, ಚುನಾವಣೆಗಳ ಸಮಯದಲ್ಲಿ ರಾಜಕೀಯ ನಾಯಕರು ಹಾಗೂ ಸಿನಿಮಾ ನಟರ ಜನ್ಮದಿನಾಚರಣೆ, ಶೋಕಾಚರಣೆಗಳಿಗಾಗಿ ಗಲ್ಲಿಗಲ್ಲಿಗಳಲ್ಲಿ ಅನದಿಕೃತ ಪ್ಲೆೆಕ್‌ಸ್‌‌ಗಳು, ಪೋಸ್ಟರ್‌ಗಳು ರಾರಾಜಿಸುತ್ತವೆ. ತಮ್ಮನ್ನು ವೈಭವೀಕರಿಸುವ ಅನಧಿಕೃತ ಪ್ಲೆೆಕ್‌ಸ್‌ ಹಾಗೂ ಬ್ಯಾಾನರ್‌ಗಳು ನಗರದ ಅಂದವನ್ನು ಹಾಳುಗೆಡವುತ್ತವೆಂದು ಸೆಲೆಬ್ರಿಿಟಿಗಳು ತಮ್ಮ ಅಭಿಮಾನಿಗಳಿಗೆ ತಿಳಿಯ ಪಡಿಸಲಿ.

ವ್ಯವಸ್ಥಿಿತ ನಗರ ಯೋಜನೆ ಸ್ವಚ್ಛ ಪ್ರವಾಸೋದ್ಯಮಕ್ಕೆೆ ಪೂರಕ. ನಮ್ಮ ಜಲ, ನೆಲಗಳನ್ನು ಪ್ರದೂಷಿತಗೊಳಿಸುವುದರಲ್ಲಿ ಮಿತಿಮೀರಿ ಹೆಚ್ಚುತ್ತಿಿರುವ ವಾಹನಗಳ ಪಾತ್ರವೂ ಹಿರಿದು. ಪ್ರಾಾಣವಾಯುವಿನ ಗುಣಮಟ್ಟ ಕುಸಿಯುತ್ತಿಿರುವುದರಿಂದ ಜನತೆಯ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಲಿದೆ. ಪ್ರವಾಸಿ ತಾಣಗಳಲ್ಲಿ ಸಾಧ್ಯವಾದ ಮಟ್ಟಿಿಗೆ ನಿರ್ಮಾಣ ಚಟುವಟಿಕೆಗಳನ್ನು ಕಡಿಮೆ ಮಾಡುವುದು ಸೂಕ್ತ.

ಸಾರ್ವಜನಿಕ ಸ್ವಚ್ಛತೆಯ ಬಗ್ಗೆೆ ಪ್ರಚಾರಾಂದೋಲನ ಅಗತ್ಯ. ಉತ್ತಮ ಶೌಚಾಲಯಗಳನ್ನು ಸೃಷ್ಟಿಿಸುವುದರೊಂದಿಗೆ, ಶೌಚಾಲಯಗಳ ನಿರ್ವಹಣೆಯೂ ಪ್ರಮುಖವಾದದ್ದು. ಇನ್ನು ಯುವ ರೋಮಿಯೋ-ಜೂಲಿಯೆಟ್‌ಗಳು ಪ್ರವಾಸಿ ತಾಣಗಳ ಶಿಲ್ಪಕಲಾಕೃತಿಗಳ ಮೇಲೆ, ತಮ್ಮ ನಾಮಾಂಕಿತಗಳನ್ನು ಕೆತ್ತಿಿ ಕಲಾಕೃತಿಗಳನ್ನು ಅಂದಗೆಡಿಸಿ ಬಿಡುತ್ತಾಾರೆ. ಇಂತಹ ಶಿಲಾಶಾಸನಗಳ ಕರ್ತರಿಗೆ ಶಿಕ್ಷೆ ವಿಧಿಸಬೇಕು. ಪ್ರವಾಸಿ ತಾಣಗಳು ಮೋಜು ಮಸ್ತಿಿಗಳ ಕೇಂದ್ರಗಳಲ್ಲ. ಅಲ್ಲಿ ಮಾರ್ಗದರ್ಶಿಗಳ ಜತೆಜತೆಗೆ ಇಂತಹ ಪ್ರವಾಸಿಗರಿಗೂ ತರಬೇತಿಯ ಅಗತ್ಯವಿದೆ.

ಕರ್ನಾಟಕದ ಕೊಡಗು ಜಿಲ್ಲೆೆ, ಪ್ರವಾಸಿಗರಿಗೆ ಅಚ್ಚುಮೆಚ್ಚಿಿನ ತಾಣವಾಗಿತ್ತು. ಹಸಿರಿನಿಂದ ಕಂಗೊಳಿಸುತ್ತಿಿದ್ದ ಗಿರಿಶ್ರೇಣಿಗಳು, ರಾಜಾಸೀಟ್‌ನಂತಹ ಸೊಬಗಿನ ನೋಟಗಳು ಮಹಾಮಳೆಯ ಅಬ್ಬರಕ್ಕೆೆ ಸಿಲುಕಿ ನಲುಗಿ ಹೋಗಿವೆ. ಹಲವಾರು ಜಿಲ್ಲೆೆಗಳೇ ಕಣ್ಮರೆಯಾಗಿವೆ. ರಾತ್ರಿಿಯ ಸಮಯ ಬೆಟ್ಟಗುಡ್ಡಗಳ ಮರೆಯಿಂದ ಇಣುಕುತ್ತಿಿದ್ದ ಬೆಳದಿಂಗಳು, ಹೋಂ ಸ್ಟೇಗಳು ಕಾಣದಂತೆ ಮಾಯವಾಗಿವೆ. ವೀರ ಯೋಧರ ನಾಡೆನಿಸಿದ ಕೊಡಗು, ಪ್ರಕೃತಿಯ ಮುನಿಸಿಗೆ ತತ್ತರಿಸಿದೆ. ಮರ ಗಿಡಗಳಿಗೆ ಕೊಡಲಿ ಏಟಿನ ರುಚಿಯುಣಿಸಿ, ಗುಡ್ಡಬೆಟ್ಟಗಳನ್ನೆೆಲ್ಲಾಾ ಕೊರೆದು, ನಿರ್ಮಿಸಲ್ಪಟ್ಟ ಕಟ್ಟಡಗಳು, ಹೋಂ ಸ್ಟೇಗಳೇ ಪ್ರಕೃತಿಯ ಮುನಿಸಿಗೆ ಕಾರಣವೆನ್ನಲಾಗಿದೆ. ಗುಡ್ಡಬೆಟ್ಟಗಳ ಮಧ್ಯೆೆ ತಲೆಯೆತ್ತಿಿರುವ ಹೋಂ ಸ್ಟೇಗಳಿಂದಲೇ ಕೊಡಗಿನ ಗುಡ್ಡಗಳು ಸಡಿಲವಾಗಿವೆಯೆಂದು ಸ್ಥಳೀಯರು ಅಭಿಪ್ರಾಾಯ ಪಡುತ್ತಾಾರೆ. ಗುಡ್ಡ ಕಡಿದು ಕಟ್ಟಡಗಳ ನಿರ್ಮಾಣ ಮಾಡುವುದೆಂದರೆ ಪ್ರವಾಸಿಗರಿಗೆ ಸ್ವರ್ಗವೊಂದನ್ನು ತೋರಿಸಿ, ಸ್ಥಳೀಯರ ಬದುಕನ್ನು ನರಕವಾಗಿಸುವ ಕ್ರಿಿಯೆಯೆಂಬ ಮಾತಿನಲ್ಲಿ ಸತ್ಯಾಾಂಶವಿಲ್ಲ. ಗುಡ್ಡ ಕಡಿದು ಕಟ್ಟಡಗಳನ್ನು ನಿರ್ಮಿಸುವುದಕ್ಕೆೆ ತಡೆ ಹಾಕಬೇಕು. ಪ್ರವಾಹದ ಪ್ರಭಾವದ ನಂತರ, ಮುಂದಿನ ಮೂರು-ನಾಲ್ಕು ವರ್ಷಗಳ ವರೆಗೆ ನೀರಿನ ಸಮಸ್ಯೆೆ ಇರದು ಎನ್ನುವಂತಿಲ್ಲ ಎಂದು ವಿಜ್ಞಾಾನಿಗಳು ಎಚ್ಚರಿಸುತ್ತಲೇ ಇದ್ದಾಾರೆ. ಕಾಡು ನಾಶದ ಪರಿಣಾಮ ಸುರಿದ ಮಳೆ ನೀರೆಲ್ಲಾಾ ಝರಿಯ ರೂಪದಲ್ಲಿ ಸಾಗಿ ನದಿ ಇಲ್ಲವೇ ಸಮುದ್ರಗಳನ್ನು ಸೇರಿಕೊಳ್ಳುತ್ತವೆ. ಜಲಪ್ರವಾಹದ ನಂತರ ಬರಗಾಲ ಮರಯಕಳಿಸುವ ಸಾಧ್ಯತೆ ಹೆಚ್ಚಾಾಗಿರುವುದರಿಂದ ಅರಣ್ಯ ಪ್ರದೇಶಗಳನ್ನು ಪುನಶ್ಚೇತನಗೊಳಿಸಿ ಪಾರಂಪರಿಕ ತಾಣಗಳನ್ನು ಹಸಿರಾಗಿಸುವತ್ತ ಗಮನ ಹರಿಸುವುದು ಅಗತ್ಯ.

ನಾನಾ ಕಾರಣಗಳಿಗಾಗಿ ರಸ್ತೆೆ ಅಗೆಯುವುದು, ರಸ್ತೆೆಗಳಲ್ಲಿ ಗುಂಡಿಗಳಾಗುವುದಕ್ಕೆೆ ಪ್ರಮುಖ ಕಾರಣವೆನ್ನಬಹುದು. ರಸ್ತೆೆಗಳನ್ನು ಅಗೆಯುವುದಕ್ಕೆೆ ಕಠಿಣ ನಿಯಮಗಳು ಜಾರಿಯಾದರೆ ಮಾತ್ರ ಈ ಸಮಸ್ಯೆೆಗೆ ಪರಿಹಾರ ಸಿಗಬಲ್ಲದು. ಮಳೆಗಾಲದಲ್ಲಿ ರಸ್ತೆೆಯಲ್ಲಿ ನೀರು ತುಂಬಿ, ಗುಂಡಿಗಳು ಕಾಣದೆ, ಜೀವ ಕಳೆದುಕೊಂಡವರ ಸಂಖ್ಯೆೆ ಹೆಚ್ಚುತ್ತಲೇ ಇದೆ. ಸ್ವಚ್ಛ ಪ್ರವಾಸೋದ್ಯಮಕ್ಕೆೆ ಗುಂಡಿ ಮುಕ್ತ ರಸ್ತೆೆಗಳ ನಿರ್ಮಾಣವಾಗುವುದು.

ಐತಿಹಾಸಿಕ ಪಾರಂಪರಿಕ ತಾಣಗಳಲ್ಲಿ ಪ್ರವಾಸಿಗರಿಗೆ ಮೂಲ ಸೌಕರ್ಯಗಳನ್ನು ಕಲ್ಪಿಿಸಿ, ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳುವ ಕ್ರಿಿಯಾ ಯೋಜನೆಯನ್ನು ಹಮ್ಮಿಿಕೊಳ್ಳುವ ಹೊಣೆಗಾರಿಕೆ ಸರಕಾರ ಮತ್ತು ನಾಗರಿಕರ ಮೇಲಿದೆ. ಕೇಂದ್ರ ಸರಕಾರ 370ನೆಯ ವಿಧಿಯನ್ನು ರದ್ದುಪಡಿಸಿರುವುದರಿಂದ ಜಮ್ಮು-ಕಾಶ್ಮೀರ ಹಾಗೂ ಲಡಾಖ್ ಪ್ರದೇಶಗಳಲ್ಲಿಯೂ ಸಹ ಪ್ರವಾಸೋದ್ಯಮ ಅಭಿವೃದ್ಧಿಿಯ ಪಥದಲ್ಲಿ ಸಾಗಲಿದೆ. ಅಡ್ವೆೆಂಚರ್ ಟೂರಿಸಂ ಹಾಗೂ ಆಧ್ಯಾಾತ್ಮಿಿಕತೆಗೆ ಪೂರಕ ವಾತಾವರಣ ಇಲ್ಲಿದೆ. ಸ್ವಚ್ಛ ಭಾರತದ ಪರಿಕಲ್ಪನೆ ಸಾಕಾರವಾದರೆ ಮಾತ್ರ ಸ್ವಚ್ಛ ಪ್ರವಾಸೋದ್ಯಮದ ಪರಿಕಲ್ಪನೆ ಸಾಕಾರವಾಗಬಲ್ಲದು.