Thursday, 19th May 2022

ಪ್ಯಾನ್ ಇಂಡಿಯಾ ನ್ಯಾಷನಲ್ ಮಾಸ್ಟರ್ ಗೇಮ್ಸ್ ಈಜು ಸ್ಪರ್ಧೆ: ಶಂಕರ್ ಕವಲಗಿಗೆ ಕಂಚಿನ ಪದಕ

ಕಲಬುರಗಿ: ಬೆಂಗಳೂರಿನ ಪಡುಕೋಣೆ- ದ್ರಾವಿಡ್ ಸ್ಪೋರ್ಟ್ಸ್ ಎಕ್ಸಲೆನ್ಸ್ ನಲ್ಲಿ ಇದೇ ಮೇ 13 ರಿಂದ 15 ರವರೆಗೆ ಪ್ಯಾನ್ ಇಂಡಿಯಾ ಮಾಸ್ಟರ್ಸ್ ಗೇಮ್ಸ್ ಫೆಡರೇಶನ್ ವತಿಯಿಂದ ಅಯೋಜಿಸಲಾಗಿರುವ ಮೊದಲನೇ ಪ್ಯಾನ್ ಇಂಡಿಯಾ ನ್ಯಾಷನಲ್ ಮಾಸ್ಟರ್ ಗೇಮ್ಸ್ ಈಜು ಸ್ಪರ್ಧೆಯಲ್ಲಿ ಕಲಬುರಗಿಯ ಯುವ ಈಜುಪಟು ಶಂಕರ್ ಕವಲಗಿ 100 ಮೀ. ಫ್ರೀ ಸ್ಟೈಲ್ ವಿಭಾಗದಲ್ಲಿ ತೃತೀಯ ಸ್ಥಾನ ಪಡೆದು ಕಂಚಿನ ಪದಕಕ್ಕೆ ಕೊರಳೊಡ್ಡಿದ್ದಾರೆ.

ಇವರ ಸಾಧನೆಗೆ ಕಲಬುರಗಿಯ ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆಯ, ಚಂದ್ರಶೇಖರ್ ಪಾಟೀಲ್ ಕ್ರೀಡಾಂಗಣ ಈಜು ಕೊಳದ ತರಬೇತುದಾರರಾದ ಮಚೇಂದ್ರ ಸಿಂಗ್ ಠಾಕೂರ್, ರೇಣುಕಾ ಬಿರಾದಾರ್ ಅಭಿನಂದಿಸಿದ್ದಾರೆ.