Monday, 5th December 2022

ಪ್ರತಿಭಾ ಪುರಸ್ಕಾರ ಕಾರ್ಯಕ್ರಮ

ಹರಪನಹಳ್ಳಿ : ತಾಲೂಕಿನ ಕನಕ ನೌಕರರ ಸಂಘ ಹಾಗೂ ಬೀರೇಶ್ವರ ಕುರುಬ ಸಂಘ ಮತ್ತು ಯುವ ಘಟಕದ ಸಹಯೋಗ ದೊಂದಿಗೆ ಡಿ.೪ರ ಭಾನುವಾರ, ಸರ್ಕಾರಿ ನೌಕರರ ಭವನದಲ್ಲಿ, ಸಂತ ದಾಸ ಶ್ರೇಷ್ಠ ಭಕ್ತ ಶ್ರೀ ಕನಕದಾಸರ ೫೩೫ನೇ ಜಯಂತಿ ಹಾಗೂ ಎಸ್.ಎಸ್.ಎಲ್.ಸಿ ಶೇಕಡ ೯೦ ಮತ್ತು ಪಿ.ಯು.ಸಿಯಲ್ಲಿ ಶೇ೮೫ ಕ್ಕಿಂತ ಹೆಚ್ಚಿನ ಆಂಕ ಗಳಿಸಿದ ಸಮುದಾಯದ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಆಯೋಜಿಸ ಲಾಗಿದೆ.

ಹರಪನಹಳ್ಳಿ ತಾಲೂಕಿನ ಎಸ್.ಎಸ್.ಎಲ್.ಸಿ ಮತ್ತು ಪಿ.ಯು.ಸಿ ವಿದ್ಯಾರ್ಥಿಗಳು ನ.೩೦ ರೊಳಗಾಗಿ ಸಂಘದ ಕಛೇರಿಯಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ ಎಂದು ಪತ್ರಿಕಾ ಪ್ರಕಟಣೆ ಯಲ್ಲಿ ತಿಳಿಸಿದ್ದಾರೆ.

ಹೆಚ್ಚಿನ ಮಾಹಿತಿಗಾಗಿ ಕುರುಬ ಸಮುದಾಯ ಅಧ್ಯಕ್ಷ ಸಿದ್ದಪ್ಪ ವೈ.ಹರಿಂದ್ರಾಳ್ (೯೭೩೧೮೩೩೧೦೯), ಎಸ್.ರಾಮಪ್ಪ(೯೭೪೦೫೯೨೨೭೮) ಹಾಗೂ ಟಿ .ಕಿರಣ್ ಕುಮಾರ್ (೯೬೧೧೫೫೧೦೯೧) ಸಂಪರ್ಕಿಸಲು ಕೋರಿದ್ದಾರೆ.