Monday, 4th November 2024

ಮುರುಘೇಂದ್ರ ಶಿವಯೋಗಿ ಮಠದ ಪೀಠಾಧಿಪತಿ ನಿಧನ

ಯಡ್ರಾಮಿ: ಕಲಬುರ್ಗಿ ಜಿಲ್ಲೆಯ ಯಡ್ರಾಮಿ ತಾಲ್ಲೂಕಿನ ಮುರುಘೇಂದ್ರ ಶಿವಯೋಗಿ ಮಠದ ಪೀಠಾಧಿಪತಿ ಸಿದ್ದರಾಮ ಸ್ವಾಮೀಜಿ (78) ಸೋಮವಾರ ನಿಧನರಾದರು. ಮಠದಲ್ಲಿ ಅವರ ಅಂತಿಮ ದರ್ಶನ ಪಡೆಯಲು ಭಕ್ತರಿಗೆ ಅವಕಾಶ ಕಲ್ಪಿಸಲಾಗಿದೆ. ಅಂತ್ಯಕ್ರಿಯೆ ಮಂಗಳವಾರ ಮಧ್ಯಾಹ್ನ ನಡೆಯಲಿದೆ. ಯಾದಗಿರಿ ಜಿಲ್ಲೆಯ ಸುರಪುರ ತಾಲ್ಲೂಕಿನ ಸತ್ಯಂಪೇಟೆ ಗ್ರಾಮದಲ್ಲಿ 1942ರ ಜೂನ್ 2ರಂದು ಜನಿಸಿದ ಅವರು ಪ್ರಾಥಮಿಕ ಶಿಕ್ಷಣ ಪಡೆದರು. ನಂತರದ ಶಿಕ್ಷಣವನ್ನು ಯಡ್ರಾಮಿ, ಧಾರವಾಡ ಮತ್ತು ಬೆಂಗಳೂರಿನಲ್ಲಿ ಪಡೆದರು. ಶಿಕ್ಷಣದ ವೇಳೆ ಧಾರವಾಡದ ಮುರುಘಾಮಠದಲ್ಲೂ ತಂಗಿದರು. ಯಡ್ರಾಮಿಯಲ್ಲಿ ಮಠದ ಪೀಠಾಧಿಪತಿಯಾದ ದಿನದಿಂದ […]

ಮುಂದೆ ಓದಿ