ಇಂಫಾಲ: ರಾಹುಲ್ ಗಾಂಧಿ ಅವರ ನೇತೃತ್ವದಲ್ಲಿ ಭಾನುವಾರ ಮಣಿಪುರದಲ್ಲಿ ‘ಭಾರತ್ ಜೋಡೊ ನ್ಯಾಯ ಯಾತ್ರೆ’ ಆರಂಭಿಸುವ ಅದೇ ಹೊತ್ತಿನಲ್ಲಿ ಮಾಜಿ ಸಂಸದ ಮಿಲಿಂದ್ ದಿಯೋರಾ ಅವರು ಕಾಂಗ್ರೆಸ್ ಪಕ್ಷವನ್ನು ತೊರೆದಿದ್ದಾರೆ. ಮಿಲಿಂದ್ ಅವರು ರಾಜೀನಾಮೆ ಘೋಷಣೆಯ ಸಮಯವನ್ನು ಪ್ರಧಾನಿ ನರೇಂದ್ರ ಮೋದಿ ನಿರ್ಧರಿಸಿದ್ದಾರೆ ಎಂದು ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್ ಆರೋಪಿಸಿದ್ದಾರೆ. ಮುಂಬರುವ ಲೋಕಸಭಾ ಚುನಾವಣೆಗಾಗಿ ಮಹಾರಾಷ್ಟ್ರದಲ್ಲಿ ಸೀಟು ಹಂಚಿಕೆ ವಿಚಾರವಾಗಿ ಮಿಲಿಂದ್ ಅವರು ಕಾಂಗ್ರೆಸ್ ಜೊತೆ ಮುನಿಸಿ ಕೊಂಡಿದ್ದರು. ಶಿವಸೇನಾಗೆ ಸೀಟು ನೀಡುವ ಸಂಬಂಧ ದಿಯೋರಾ […]