ಲಖನೌ: ಉತ್ತರ ಪ್ರದೇಶ ಸರ್ಕಾರ ಪ್ರತಿ ಭಾನುವಾರ ರಾಜ್ಯದ ಪ್ರತಿಯೊಂದು ಜಿಲ್ಲೆಯನ್ನೂ ಲಾಕ್‌ಡೌನ್ ಮಾಡಬೇಕೆಂದು ಆದೇಶ ಹೊರಡಿಸಿದೆ. ಮಾಸ್ಕ್ ಇಲ್ಲದೇ ಸಾರ್ವಜನಿಕ ಸ್ಥಳಗಳಲ್ಲಿ ಕಾಣಿಸಿಕೊಳ್ಳುವವರಿಗೆ 1000 ರೂಪಾಯಿ ದಂಡ ಹಾಗೂ ದಂಡ ವಿಧಿಸದ ಬಳಿಕವೂ ತಪ್ಪು ಮರುಕಳಿಸಿದಲ್ಲಿ ದಂಡ ಮೊತ್ತಕ್ಕಿಂತ 10 ಪಟ್ಟು ಹೆಚ್ಚು ಹಣ ವಸೂಲಿ ಮಾಡುವಂತೆ ಸೂಚನೆ ನೀಡಲಾಗಿದೆ. ಸ್ಯಾನಿಟೈಸೇಷನ್ ಹಾಗೂ ತುರ್ತು ಸೇವೆಗಳು ಮಾತ್ರ ಈ ಸಂದರ್ಭದಲ್ಲಿ ಕಾರ್ಯ ನಿರ್ವಹಿಸಲಿವೆ ಎಂದು ಉತ್ತರ ಪ್ರದೇಶ ಸಿಎಂ ಸಚಿವಾಲಯ ಹೇಳಿಕೆ ನೀಡಿದೆ. ದೇಶದಲ್ಲಿ ಅತಿ ಹೆಚ್ಚು […]